More

    ವಚನಗಳಿಂದ ಮನಸ್ಸಿಗೆ ಉಲ್ಲಾಸ

    ಕೊಟ್ಟೂರು: ಇಂದಿನ ಒತ್ತಡದ ಜೀವನ ಮಧ್ಯೆ ಶರಣರ ವಚನಗಳ ಓದು, ತತ್ವ ಸಿದ್ಧಾಂತ ಅರಿಯುವುದರಿಂದ ಮನಸ್ಸಿಗೆ ಉಲ್ಲಾಸ ಸಿಗಲಿದೆ ಎಂದು ವಿಜಯನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎನ್.ಎಂ.ರವಿಕುಮಾರ್ ಹೇಳಿದರು.

    ಇಲ್ಲಿನ ಕಟ್ಟಿಮನೆ ಹಿರೇಮಠದಲ್ಲಿ ಭಾನುವಾರ ಏರ್ಪಡಿಸಿದ್ದ ಪರಿಷತ್ತಿನ ಸಿ.ಕೆ.ಟಿ. ಮಾಸ್ತರ ಅವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. 12ನೇ ಶತಮಾನದಲ್ಲಿ ಬಸವಾದಿ ಶರಣರ ವಚನಗಳು ಗಾಂಧೀಜಿ ಅವರು ಕಂಡ ರಾಮರಾಜ್ಯದ ಕನಸನ್ನು ನೆನಪಿಸುತ್ತವೆ ಎಂದರು. ಸಾನ್ನಿಧ್ಯವಹಿಸಿದ್ದ ಮಾನಿಹಳ್ಳಿ ಪುರವರ್ಗ ಮಠದ ಡಾ.ಮಳೆಯೋಗೀಶ್ವರ ಶಿವಾಚಾರ್ಯರು ಮಾತನಾಡಿ, ಶರಣರ ವಚನಗಳನ್ನು ಅಳವಡಿಸಿಕೊಂಡಾಗ ನೆಮ್ಮದಿ ಯಿಂದ ಬದುಕಬಹುದು ಎಂದರು.

    ಪ್ರಮುಖರಾದ ಎ.ಚಂದ್ರಣ್ಣ, ಶೆಟ್ಟಿ ತಿಂದಪ್ಪ, ಬೋರ್‌ವೆಲ್ ತಿಪ್ಪೇಸ್ವಾಮಿ, ದತ್ತಿ ದಾನಿ ಕೆ.ಶಿವಪ್ರಸಾದ್, ದೇವರಮನಿ ಕರಿಯಪ್ಪ, ಟಿ.ಕೆ.ಸಿದ್ದರಾಮೇಶ, ಜಿ.ಸಿದ್ದಣ್ಣ, ಬಿ.ಹನುಮಂತಪ್ಪ, ಜೆ.ಎಂ.ಧನಂಜಯ, ಅನುರಾಧಮ್ಮ, ಎಸ್.ಎಂ.ನಳಿನಿ, ಹೊಂಬಾಳೆ ಮಂಜುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts