More

    ಕರ್ನಾಟಕ ಬಂದ್​ಗೆ ಸಿಗದ ಸೂಕ್ತ ಬೆಂಬಲ

    ಧಾರವಾಡ: ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ಡಿ. 5ರಂದು ನೀಡಿರುವ ಕರ್ನಾಟಕ ಬಂದ್ ಕರೆಗೆ ಕೆಲ ಸಂಘಟನೆಗಳು ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಬಂದ್ ಪ್ರಭಾವ ಬೀರುವ ಸಾಧ್ಯತೆ ಕಡಿಮೆ.

    ಜಯ ಕರ್ನಾಟಕ, ರಕ್ಷಣಾ ವೇದಿಕೆ ಹೊರತುಪಡಿಸಿ ಬೇರೆ ಯಾವ ಸಂಘಟನೆಗಳೂ ಬೆಂಬಲ ನೀಡಿಲ್ಲ. ಸಾರಿಗೆ ಬಸ್​ಗಳು ಎಂದಿನಂತೆ ಸಂಚರಿಸಲಿದ್ದು, ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ವ್ಯಾಪಾರಸ್ಥರು ಬಂದ್ ಮಾಡುವುದು ಅಸಾಧ್ಯ. ಹೀಗಾಗಿ ವಾಟಾಳ್ ನಾಗರಾಜ ನೀಡಿರುವ ಬಂದ್ ಕರೆಗೆ ನಗರದಲ್ಲಿ ಯಶಸ್ವಿಯಾಗುವುದಿಲ್ಲ ಎನ್ನಲಾಗಿದೆ.

    ಬಂದ್​ಗೆ ಕರೆ ನೀಡಿರುವ ಕುರಿತು ಮರಾಠ ಮಹಾಮಂಡಳ ಅಧ್ಯಕ್ಷ ಮಂಜುನಾಥ ಕದಂ ಪ್ರತಿಕ್ರಿಯೆ ನೀಡಿದ್ದು, ವಾಟಾಳ್ ನಾಗರಾಜ ಅವರು ನೀಡಿರುವ ಬಂದ್ ಕರೆಯನ್ನು ಹಿಂಪಡೆದರೆ ನಾವೆಲ್ಲ ವಿಜಯೋತ್ಸವ ಆಚರಿಸುತ್ತೇವೆ. ವಾಟಾಳ್ ಕರ್ನಾಟಕದ ಕಾರ್ಟೂನ್ ಇದ್ದಂತೆ ಎಂದು ವ್ಯಂಗ್ಯವಾಡಿದ್ದಾರೆ.

    ಸೂಕ್ಷ್ಮ ಪ್ರದೇಶಗಳಲ್ಲಿ ನಿಗಾ

    ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ಸೂಕ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಬೆಳಗ್ಗೆ 6 ಗಂಟೆಯಿಂದಲೇ ಎಲ್ಲ ಪೊಲೀಸ್ ಅಧಿಕಾರಿ, ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಭದ್ರತೆಗಾಗಿ 12 ಕೆಎಸ್​ಆರ್​ಪಿ, 3 ಸಿಎಆರ್ ತುಕಡಿ ಸೇರಿ ಸಾವಿರಕ್ಕೂ ಅಧಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರಮುಖ ವೃತ್ತ, ಬಸ್, ರೈಲ್ವೆ ನಿಲ್ದಾಣಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ಇಡಲಾಗಿದೆ. ಒತ್ತಾಯಪೂರ್ವಕವಾಗಿ ಬಂದ್ ಮಾಡಿಸಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರ ಲಾಬು ರಾಮ್ ಎಚ್ಚರಿಕೆ ನೀಡಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts