More

  ನಾವು ಪ್ರಾಮಾಣಿಕವಾಗಿ ಫೈಟ್ ಕೊಟ್ಟಿದ್ದೇವೆ

  ಧಾರವಾಡ: ಕಳೆದ ಬಾರಿಯ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಚಿತ್ರಣ ಬದಲಾಗಿದೆ. ನರೇಂದ್ರ ಮೋದಿ ಅವರು ತಮ್ಮ ಅಲೆಗಿಂತ ಮಾಧ್ಯಮದ ಅಲೆಯಲ್ಲಿ ಗೆದ್ದಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ವ್ಯಂಗ್ಯವಾಡಿದರು.
  ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪಂಚ ಗ್ಯಾರಂಟಿ ಯೋಜನೆಗಳು ಕೈ ಹಿಡಿದಿವೆ. ಚುನಾವಣೆಯಲ್ಲಿ ಮೋದಿ ಅವರ ಗೆಲುವು ಕೇವಲ 1.50 ಲಕ್ಷದಿಂದ ಆಗಿದೆ. ಅದನ್ನು ಗಮನಿಸಬೇಕು ಎಂದರು.
  ಈ ಚುನಾವಣೆಯಲ್ಲಿ ಜೋಶಿ ವರ್ಸಸ್ ಲಾಡ್ ಎಂದಲ್ಲ. ಬದಲಿಗೆ ಜೋಶಿ ವರ್ಸಸ್ ಕಾಂಗ್ರೆಸ್ ಎಂದು ಫೈಟ್ ಕೊಟ್ಟಿದ್ದೇವೆ. ಕಲಘಟಗಿ ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್ ಆಗಿದೆ. ಆದರೆ, ಕಳೆದ ಬಾರಿಯೂ ಲೀಡ್ ಆಗಿತ್ತು. ನಾವು ಪ್ರಾಮಾಣಿಕವಾಗಿ ಫೈಟ್ ಕೊಟ್ಟಿದ್ದೇವೆ ಎಂದರು.

  See also  ಕೆಎಲ್‌ಇ ಸಂಸ್ಥೆಯ ಸೇವೆ ಅಪಾರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts