More

    ಹದ್ದಿನಂತೆ ತೀಕ್ಷ್ಣ ದೃಷ್ಟಿಯುಳ್ಳವರು ಮಾತ್ರ ಈ ಫೋಟೋದಲ್ಲಿರುವ ನಾಯಿ ಪತ್ತೆಹಚ್ಚಲು ಸಾಧ್ಯ!

    ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (ಆಪ್ಟಿಕಲ್​ ಇಲ್ಯೂಶನ್​) ಎಂದು ಕರೆಯುತ್ತೇವೆ.

    ಈ ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್​ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಈ ಸವಾಲುಗಳನ್ನು ಸಾಕಷ್ಟು ಜನರು ಸ್ವೀಕರಿಸಿ, ಅದರಲ್ಲಿ ತೊಡಗುತ್ತಾರೆ. ನೆಟ್ಟಿಗರು ಹೊಸ ಹೊಸ ಆಪ್ಟಿಕಲ್ ಇಲ್ಯೂಷನ್ ಸವಾಲುಗಳನ್ನು ಸ್ವೀಕರಿಸುವುದನ್ನು ಆನಂದಿಸುತ್ತಾರೆ. ತಮ್ಮನ್ನು ಮನರಂಜಿಸುವ ಮೋಜಿನ ಮಾರ್ಗವಾಗಿದೆ ಮತ್ತು ಸ್ನೇಹಿತರೊಂದಿಗೆ ತಮ್ಮ ಬುದ್ಧಿವಂತಿಕೆಯನ್ನು ಸಾಬೀತುಪಡಿಸುವ ಮಾರ್ಗವಾಗಿದೆ ಎಂದು ಭಾವಿಸುತ್ತಾರೆ. ಇದರ ಹೊರತಾಗಿ, ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸುವಲ್ಲಿ ಆಪ್ಟಿಕಲ್ ಇಲ್ಯೂಷನ್​ಗಳು ಸಹ ಪ್ರಯೋಜನಕಾರಿ ಎಂದು ಸಾಬೀತಾಗಿದೆ.

    ನಿಮ್ಮ ವೀಕ್ಷಣಾ ಕೌಶಲ್ಯವನ್ನು ಹೆಚ್ಚಿಸಲು ನೀವು ಬಯಸುವಿರಾ? ಹಾಗಾದರೆ, ಈ ಸವಾಲನ್ನು ಸ್ವೀಕರಿಸಿ….

    ಹದ್ದಿನಂತೆ ತೀಕ್ಷ್ಣ ದೃಷ್ಟಿಯುಳ್ಳವರು ಮಾತ್ರ ಈ ಫೋಟೋದಲ್ಲಿರುವ ನಾಯಿ ಪತ್ತೆಹಚ್ಚಲು ಸಾಧ್ಯ!

    ಸದ್ಯ ವೈರಲ್​ ಆಗಿರುವ ಫೋಟೋದಲ್ಲಿ ವಿಶಾಲವಾದ ಜೋಳದ ಹೊಲವನ್ನು ನೋಡಬಹುದು. ಫೋಟೋದಲ್ಲಿ ಒಂದು ಭಾಗದಲ್ಲಿ ನಾಯಿಯೊಂದು ಅಡಗಿದೆ. ಆದರೆ, ಅದನ್ನು ಪತ್ತೆಹಚ್ಚುವುದು ಸುಲಭದ ಮಾತಲ್ಲ. ಆದರೆ, ಸೂಕ್ಷ್ಮವಾಗಿ ಗಮನಿಸಿದರೆ, ಶ್ವಾನ ಇರುವುದು ಗೊತ್ತಾಗುತ್ತದೆ. ನಿಮಗೆ 10 ಸೆಕೆಂಡ್​ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ಆ ನಾಯಿಯನ್ನು ಪತ್ತೆ ಹಚ್ಚಬೇಕು. ನಿಮ್ಮ ಸಮಯ ಈಗ ಶುರು.

    ಸೆಕೆಂಡ್​ ಸಮಯದಲ್ಲಿ ನೀವು ಶ್ವಾನವನ್ನು ಫೋಟೋದಲ್ಲಿ ಗುರುತಿಸಿದರೆ ನಿಮ್ಮ ಕಣ್ಣಿನ ಸಾಮರ್ಥ್ಯ ಮತ್ತು ಬುದ್ಧಿಮತ್ತೆಗೆ ನೀವೇ ಫುಲ್​ ಮಾರ್ಕ್ಸ್​ ಕೊಟ್ಟುಬಿಡಿ. ಒಂದು ವೇಳೆ ನಾಯಿಯನ್ನು ಗುರುತಿಸಲು ಸಾಧ್ಯವಾಗದೇ, ಎಲ್ಲಿದೆ ಅಂತಾ ಹುಡುಕಾಡುತ್ತಿದ್ದರೆ ಈ ಕೆಳಗಿನ ಚಿತ್ರವನ್ನು ನೋಡಿ ನಿಮಗೆ ಉತ್ತರ ಸಿಗಲಿದೆ. (ಏಜೆನ್ಸೀಸ್​)

    ಹದ್ದಿನಂತೆ ತೀಕ್ಷ್ಣ ದೃಷ್ಟಿಯುಳ್ಳವರು ಮಾತ್ರ ಈ ಫೋಟೋದಲ್ಲಿರುವ ನಾಯಿ ಪತ್ತೆಹಚ್ಚಲು ಸಾಧ್ಯ!

    ಕಮಲ ಹ್ಯಾರಿಸ್​ ಪತಿಯ ತುಟಿಗೆ ಚುಂಬಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಪತ್ನಿ! ವಿಡಿಯೋ ವೈರಲ್​

    ಬದುಕನ್ನೇ ಬದಲಿಸಿದ ಬರ್ತಡೇ ದಿನದ ನಿರ್ಧಾರ: 290 ಕೋಟಿ ರೂ. ಬಹುಮಾನ, ವಿಮಾನ​ ಖರೀದಿಸಿದ ಯುವತಿ

    ಅವನು ತೇಜಸ್ವಿ ಅಲ್ಲ… ಅಮವಾಸ್ಯೆ; ಅದಕ್ಕೆ ನಾನು ಅಮವಾಸ್ಯೆ ಅಂತಾನೇ ಕರೆಯೋದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts