More

    ಬದುಕನ್ನೇ ಬದಲಿಸಿದ ಬರ್ತಡೇ ದಿನದ ನಿರ್ಧಾರ: 290 ಕೋಟಿ ರೂ. ಬಹುಮಾನ, ವಿಮಾನ​ ಖರೀದಿಸಿದ ಯುವತಿ

    ಒಟ್ಟಾವ: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಕೆನಡಾದ ಯುವತಿಯೊಬ್ಬಳ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.

    ಇದೀಗ ನಾವು ಹೇಳ ಹೊರಟಿರುವುದು ಇತ್ತೀಚೆಗಷ್ಟೇ 18ರ ವಸಂತಕ್ಕೆ ಕಾಲಿಟ್ಟ ಕೆನಡಾ ಮೂಲದ ಜೂಲಿಯಟ್​ ಲ್ಯಾಮರ್​. ಒಂಟಾರಿಯೋದಲ್ಲಿ ವಾಸವಿರುವ ಲ್ಯಾಮರ್​, ತನ್ನ ಬರ್ತಡೆಗೆ ಏನಾದರೂ ವಿಶೇಷವಾಗಿ ಶಾಪಿಂಗ್​ ಮಾಡಬೇಕು ಅಂತಾ ನಿರ್ಧರಿಸಿದ್ದಳು. ಆದರೆ, ಏನು ತೆಗೆದುಕೊಳ್ಳಬೇಕು ಅನ್ನೋ ಗೊಂದಲದಲ್ಲಿದ್ದಳು. ಬಳಿಕ ತನ್ನ ಅಜ್ಜನ ಸಲಹೆಯ ಮೇರೆಗೆ ಒಂದು ಲಾಟರಿ ಟಿಕೆಟ್​ ಖರೀದಿ ಮಾಡಿದಳು. ಆದರೆ, ಆ ಲಾಟರಿ ತನ್ನ ಜೀವನವನ್ನೇ ಬದಲಾಯಿಸುತ್ತದೆ ಎಂದು ಆಕೆ ಸ್ವಲ್ಪವೂ ಭಾವಿಸರಲಿಲ್ಲ.

    ಒಂಟಾರಿಯೋ ಲಾಟರಿ ಆ್ಯಂಡ್​ ಗೇಮಿಂಗ್ ಕಾರ್ಪೊರೇಷನ್​ನಲ್ಲಿ​ 6-49 ನಂಬರಿನ ಲಾಟರಿಯನ್ನು ಖರೀದಿ ಮಾಡಿದ ಲ್ಯಾಮರ್,​ ಮನೆಗೆ ಹಿಂದಿರುಗಿದಳು. ಬಳಿಕ ಲಾಟರಿ ಟಿಕೆಟ್​ ಅನ್ನು ಮನೆಯಲ್ಲಿ ಕಳೆದುಕೊಂಡಿದ್ದಳು ಮತ್ತು ಅದನ್ನು ಮರೆತುಬಿಟ್ಟಿದ್ದಳು. ಜ.7ರಂದು ತಮ್ಮ ಪಕ್ಕದ ಮನೆಯವನಿಗೆ ಲಾಟರಿಯಲ್ಲಿ ಯಾವುದೋ ಬಹುಮಾನ ಬಂದಿದೆ ಎಂಬುದನ್ನು ತಿಳಿದ ಲ್ಯಾಮರ್​ಗೆ ತಾನೂ ಕೂಡ ಲಾಟರಿ ಖರೀದಿಸಿರುವುದು ತಿಳಿಯಿತು.

    ಬಳಿಕ ಮನೆಯಲ್ಲಿ ಕಳೆದುಕೊಂಡಿದ್ದ ಲಾಟರಿಯನ್ನು ಹುಡುಕಿ ಆ್ಯಪ್​ ಮೂಲಕ ಫಲಿತಾಂಶವನ್ನು ನೋಡಿದಾಗ ಲ್ಯಾಮರ್​ಗೆ ಅಚ್ಚರಿಯೇ ಕಾದಿತ್ತು. ಆಕೆಗೆ ಲಾಟರಿಯಲ್ಲಿ 290 ಕೋಟಿ ರೂ. ಬಹುಮಾನ ಬಂದಿತ್ತು. ತಕ್ಷಣ ಆ ಹಣದಲ್ಲಿ ತನ್ನ ಕುಟುಂಬದ ಐವರು ಸದಸ್ಯರಿಗೆ 2 ಕೋಟಿ ರೂ. ಮೌಲ್ಯದ 5 ಮರ್ಸಿಡೆಸ್​ ಕಾರುಗಳನ್ನು ಖರೀದಿಸಿ, ಅವರಿಗೆ ಸರ್ಪ್ರೈಸ್​ ಆಗಿ ಗಿಫ್ಟ್​ ನೀಡುವ ಮೂಲಕ ಲಾಟರಿಯಲ್ಲಿ ಬಹುಮಾನ ವಿಚಾರವನ್ನು ಹಂಚಿಕೊಂಡಳು.

    ಉಳಿದ ಬಹುಮಾನದ ಹಣದಲ್ಲಿ 100 ಕೋಟಿ ರೂಪಾಯಿ ಖರ್ಚು ಮಾಡಿ ಒಂದು ಖಾಸಗಿ ಜೆಟ್​ ವಿಮಾನ ಹಾಗೂ 40 ಕೋಟಿ ರೂ.ಗೆ ಒಂದು ಲಂಡನ್​ ವಿಲ್ಲಾ ಖರೀದಿ ಮಾಡಿದ್ದಾಳೆ. ಇನ್ನುಳಿದ 150 ಕೋಟಿ ರೂ. ಅನ್ನು ತನ್ನ ಭವಿಷ್ಯಕ್ಕಾಗಿ ಇಟ್ಟುಕೊಂಡಿದ್ದಾಲೆ. ಲ್ಯಾಮರ್​, ವೈದ್ಯೆಯಾಗಬೇಕೆಂಬ ಕನಸು ಹೊಂದಿದ್ದಾಳೆ. (ಏಜೆನ್ಸೀಸ್​)

    ಬ್ರೆಜಿಲ್ ಮಹಿಳೆಗೆ ಭಾರತೀಯ ಸಂಸ್ಕೃತಿ ಪರಿಚಯಿಸಿದ ಬಾಗಲಕೋಟೆ ಕುಟುಂಬ!

    ಸಾವರ್ಕರ್ ಸಂಸ್ಕೃತಿ‌‌ ಬೇಡ; ಸರ್ವೇ ಜನಃ ಸುಖಿನೋಭವಂತು ಎನ್ನುವ ಬ್ರಾಹ್ಮಣರು ನಮಗೆ ಬೇಕು!

    ಆದಿಲ್​ಗೆ ಅಕ್ರಮ ಸಂಬಂಧವಿದೆ: ಮದ್ವೆಯಾದ ಕೆಲವೇ ದಿನಗಳಲ್ಲಿ ಪತಿ ವಿರುದ್ಧ ರಾಖಿ ಸಾವಂತ್​ ಗಂಭೀರ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts