More

    ಬ್ರೆಜಿಲ್ ಮಹಿಳೆಗೆ ಭಾರತೀಯ ಸಂಸ್ಕೃತಿ ಪರಿಚಯಿಸಿದ ಬಾಗಲಕೋಟೆ ಕುಟುಂಬ!

    ಬಾಗಲಕೋಟೆ: ಬ್ರೆಜಿಲ್ ದೇಶದ ಮಹಿಳೆಗೆ ಬಾಗಲಕೋಟೆ ಮೂಲದ ಕುಟುಂಬವೊಂದು ಭಾರತೀಯ ಸಂಸ್ಕೃತಿ ಪರಿಚಯಿಸಿರುವ ಘಟನೆ ನಡೆದಿದೆ. ಬ್ರೆಜಿಲ್ ಮೂಲದ ಮಾರ್ಷೆಲಾ ಅವರನ್ನು ಮನೆಗೆ ಕರೆಸಿ ತಾಲೂಕಿನ ಚೊಳಚಗುಡ್ಡ ಗ್ರಾಮದ ಪವಾಡಶೆಟ್ಟಿ ಕುಟುಂಬ, ಸೀರೆ ಉಡಿಸಿ, ಹಸಿರು ಬಳೆ ತೊಡಿಸಿ, ದಂಡಿ (ಹೂವಿನ ದಂಡಿ) ಹಾಕಿ, ಆರತಿ ಬೆಳಗಿದ್ದಾರೆ.

    ಬಸವರಾಜ್ ಪವಾಡಶೆಟ್ಟಿ ಅವರ ಸಹೋದರನ ಪುತ್ರ ಶರತಚಂದ್ರ ವಿವಾಹ ಕಾರ್ಯಕ್ರಮ ನಡೆಯುತ್ತಿತ್ತು. ಮನೆಯಲ್ಲಿ ಮದುವೆ ಕಾರ್ಯದ ನಿಮಿತ್ತ, ಮಹಿಳೆಯರು ಹಿಂದು ಧರ್ಮದ ವಿವಾಹ ಪದ್ಧತಿಯನ್ನು ಬ್ರೆಜಿಲ್ ಮಹಿಳೆ ಮಾರ್ಷೆಲಾಗೆ ಪರಿಚಯಿಸಿದ್ದಾರೆ.

    ರಾಕ್ ಕ್ಲೈಂಬಿಂಗ್ ತರಬೇತಿಗಾಗಿ ಬಂದು ಚೊಳಚಗುಡ್ಡ ಗ್ರಾಮದಲ್ಲಿ ಪವಾಡಶೆಟ್ಟಿ ಅವರ ಮನೆಯ ಪಕ್ಕ ಬಾಡಿಗೆ ಮನೆಯಲ್ಲಿ ಮಾರ್ಷೆಲಾ ತಂಗಿದ್ದಾರೆ. ಹೀಗಾಗಿ ಮಾರ್ಷೆಲಾಗೆ ಮನೆಯ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿ, ಅರಿಷಿನ ಶಾಸ್ತ್ರದ ಪದ್ಧತಿಯನ್ನು ಪರಿಚಯಿಸಿದ್ದಾರೆ.

    ಭಾರತೀಯ ಸಂಸ್ಕೃತಿಗೆ ಮಾರು ಹೋದ ಬ್ರೆಜಿಲ್ ಮಹಿಳೆ ಮಾರ್ಷೆಲಾ, ಸೀರೆ, ಬಳೆ ತೊಟ್ಟು ಮಿಂಚಿದ್ದಾರೆ. ಇದೇ ವೇಳೆ ರಾಕ್ ಕ್ಲೈಂಬಿಂಗ್​ಗೆ ಬಂದಿರುವ ಇಸ್ರೇಲ್ ಮೂಲದ ನೋವಾ ಎಂಬ ಯುವಕನಿಗೂ ಪವಾಡಶೆಟ್ಟಿ ಕುಟುಂಬ ಟೋಪಿ ತೊಡಿಸಿ ಇಲ್ಲಿನ ಗ್ರಾಮೀಣ ಸಂಸ್ಕೃತಿಯ ಪರಿಚಯ ಮಾಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts