More

    ನಮ್ಮಲ್ಲಿ 8 ರೂ. ಕಡಿಮೆಗೆ ಪೆಟ್ರೋಲ್ ದೊರೆಯುತ್ತಿದೆ! ವೈರಲ್ ಆಯ್ತು ಕೇರಳ-ಕರ್ನಾಟಕ ಗಡಿ ಭಾಗದ ಈ ಬ್ಯಾನರ್

    ಬೆಂಗಳೂರು: ಪಕ್ಕದ ಕೇರಳ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಇದೆ. ಹೀಗಾಗಿ ಕರ್ನಾಟಕ ಗಡಿ ಭಾಗದಲ್ಲಿ ವಾಸವಿರುವ ಕೇರಳ ರಾಜ್ಯದ ಮಂದಿ ಕಳೆದ ಒಂದು ತಿಂಗಳಿನಿಂದ ಕರ್ನಾಟಕಕ್ಕೆ ಪ್ರವೇಶಿಸಿ ತಮ್ಮ ವಾಹನಗಳಿಗೆ ಪೆಟ್ರೋಲ್ ಹಾಕಿಸುತ್ತಿದ್ದಾರೆ.

    ಭಾರತದಲ್ಲೇ ಅತಿ ಹೆಚ್ಚು ಇಂಧನ ಬೆಲೆ ಇರುವ ಕೇರಳದಲ್ಲಿ ಇತ್ತೀಚೆಗೆ ನಡೆದ ಬಜೆಟ್​ನಲ್ಲಿ ಪೆಟ್ರೋಲ್‌, ಡೀಸೆಲ್‌ ಮೇಲೆ 2 ರೂ. ಸೆಸ್‌ ವಿಧಿಸಲಾಗಿದೆ. ಇದು ನೇರವಾಗಿ ಜನರ ಜೇಬಿಗೆ ಕತ್ತರಿ ಹಾಕಿದಂತಾಗಿದೆ. ಈ ಬಗ್ಗೆ ಸರ್ಕಾರದ ನಡೆಯನ್ನು ಕೇರಳ ರಾಜ್ಯದಾದ್ಯಂತ ಜನರು ಧಿಕ್ಕರಿಸುತ್ತಿದ್ದಾರೆ.

    ಹೀಗಾಗಿ ಕೇರಳದ ಜನರು ಕರ್ನಾಟಕದಲ್ಲಿ ತಮ್ಮ ವಾಹನಗಳಿಗೆ ಇಂಧನ ತುಂಬಿಸುತ್ತಿದ್ದಾರೆ. ಇದು ಕೇರಳ ಗಡಿ ಭಾಗದಲ್ಲಿರುವ ಕರ್ನಾಟಕದ ಪೆಟ್ರೋಲ್ ಬಂಕ್ ಮಾಲೀಕರಿಗೆ ವರವಾದಂತಿದೆ. ಹೀಗಾಗಿ ಕರ್ನಾಟಕದ ಪೆಟ್ರೋಲ್ ಬಂಕ್ ಮಾಲೀಕರು ಕೇರಳದ ವಾಹನ ಸವಾರರನ್ನು ಆಕರ್ಷಿಸಲು ವಿಭಿನ್ನ ರೀತಿಯ ಜಾಹೀರಾತು ಪ್ರಕಟಿಸುತ್ತಿದ್ದಾರೆ. ಇದೀಗ ಈ ಒಂದು ಜಾಹೀರಾತು ಬ್ಯಾನರ್​ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

    ಈ ಬ್ಯಾನರ್​ನಲ್ಲಿ ಕೇರಳಕ್ಕಿಂತ 8 ರೂ. ಕಡಿಮೆಗೆ ಪೆಟ್ರೋಲ್ ದೊರೆಯುತ್ತದೆ ಎಂದು ಬರೆಯಲಾಗಿದೆ. ಈ ಬ್ಯಾನರ್ ಕೇರಳದ ವಾಹನ ಸವಾರರನ್ನು ಆಕರ್ಷಿಸುವ ಸಲುವಾಗಿ ಪೆಟ್ರೋಲ್ ಬಂಕ್ ಒಂದರ ಮುಂಭಾಗದಲ್ಲಿ ಹಾಕಲಾಗಿದೆ. ಇದೀಗ ಈ ಫೋಟೋವನ್ನು ಬಳಸಿಕೊಂಡು ಕೇರಳದ ವಿರೋಧ ಪಕ್ಷಗಳು ಆಡಳಿತ ಸರ್ಕಾರವನ್ನು ಟೀಕಿಸುತ್ತಿದೆ.

    ಪ್ರಸ್ತುತ ತಿರುವನಂತಪುರದಲ್ಲಿ ಪೆಟ್ರೋಲ್ ದರ 108 ರೂ ಮತ್ತು ಡೀಸೆಲ್ ಬೆಲೆ 96.79 ರೂ. ಇದ್ದು, ಕೊಚ್ಚಿಯಲ್ಲಿ ಪೆಟ್ರೋಲ್‌ಗೆ 105.72 ರೂ ಮತ್ತು ಡೀಸೆಲ್‌ಗೆ 94.66 ರೂ. ಇದೆ. ಕರ್ನಾಟಕದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ಸರಾಸರಿ 102.44 ರೂ. ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts