More

    90 ವರ್ಷಗಳ ಹಿಂದೆ ಸೈಕಲ್ ಬೆಲೆ ಇಷ್ಟೊಂದು ಕಡಿಮೆಯಾ ಎಂದ ನೆಟ್ಟಿಗರು! ವೈರಲ್ ಆಯ್ತು ಹಳೆಯ ಸೈಕಲ್ ಬಿಲ್

    ನವದೆಹಲಿ: 50-60ರ ದಶಕದಲ್ಲಿ ಎಲ್ಲೇ ಹೋಗಬೇಕೆಂದರೂ ನಡೆದುಕೊಂಡೇ ಹೋಗಬೇಕು. ಇಂದಿನಂತೆ ಸುಸಜ್ಜಿತವಾದ ಸಾರಿಗೆ ಸಂಪರ್ಕ ಇದ್ದಿರಲಿಲ್ಲ. ಕ್ರಮೇಣ ಸಮಾಜದಲ್ಲಿದ್ದ ಕೆಲ ಸ್ಥಿತಿವಂತ ಜನರು ಸಂಚಾರಕ್ಕಾಗಿ ಸೈಕಲ್​ಗಳನ್ನು ಬಳಸಲು ಆರಂಭಿಸಿದರು. ಅದರಲ್ಲೂ 80ರ ದಶಕದಲ್ಲಿ ದೇಶದಾದ್ಯಂತ ಸೈಕಲ್​ಗಳ ಬಳಕೆ ಹೆಚ್ಚಾಯಿತು. ಬಹುತೇಕ ಮಧ್ಯಮ ವರ್ಗ ಕುಟುಂಬದ ಉದ್ಯೋಗಿಗಳು ಸೈಕಲ್ ಬಳಸಿಯೇ ಕೆಲಸಕ್ಕೆ ಹೋಗುತ್ತಿದ್ದರು. ಇದಲ್ಲದೆ ಅನೇಕ ಜನರು ಸೈಕಲ್​ನ್ನೇ ಬಂಡವಾಳವನ್ನಾಗಿಸಿಕೊಂಡು ಸಣ್ಣ ಪುಟ್ಟ ವ್ಯಾಪಾರಗಳಲ್ಲಿ ತೊಡಗಿಸಿಕೊಂಡರು.

    ಇಂದು ಸೈಕಲನ್ನು ವಿವಿಧ ಕಾರಣಕ್ಕಾಗಿ ನೆಚ್ಚಿಕೊಂಡವರು ಬಹುತೇಕ ಮಂದಿ. ಫಿಟ್​​ನೆಸ್, ಫ್ಯಾಷನ್​ ಲೋಕದಲ್ಲಿ ಸೈಕಲ್​ಗೆ ಸಾಕಷ್ಟು ಬೇಡಿಕೆ ಇದೆ. ಹೀಗಾಗಿ ತರಹೇವಾರಿ ಬ್ರ್ಯಾಂಡ್​, ಸ್ಟೈಲ್​ನ ಸೈಕಲ್​ಗಳು ಇಂದು ಮಾರುಕಟ್ಟೆಯಲ್ಲಿವೆ. ಕನಿಷ್ಟ 5 ಸಾವಿರ ರೂಪಾಯಿಯಿಂದ ಹಿಡಿದು ಲಕ್ಷಾಂತರ ರೂಪಾಯಿ ಬೆಲೆ ಬಾಳು ಸೈಕಲ್​ಗಳು ಮಾರಾಟವಾಗುತ್ತಿವೆ. ಹೀಗಾಗಿ ಕಾಲ ಬದಲಾದಂತೆ ಹೊಸ ಹೊಸ ಮಾದರಿಯ ಸೈಕಲ್​ಗಳು ಮಾರುಕಟ್ಟೆ ಪ್ರವೇಶಿಸುತ್ತವೇ ಇರುತ್ತವೆ.

    ಇದೀಗ ಬಹಳಷ್ಟು ವರ್ಷಗಳ ಹಿಂದಿನ ಸೈಕಲ್​ ಬಿಲ್​ ಒಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. 1934ರ ಸೈಕಲ್ ಬಿಲ್​ನ ಫೋಟೋವೊಂದು ಟ್ರೆಂಡಿಂಗ್​ನಲ್ಲಿದ್ದ, ಇದರಲ್ಲಿ ಸೈಕಲ್​ನ ಬೆಲೆ 18 ರೂಪಾಯಿ ಎಂದು ಬರೆದಿದೆ. ಹೀಗಾಗಿ 90 ವರ್ಷಗಳ ಹಿಂದೆ ಸಾಮನ್ಯ ಸೈಕಲ್ ಒಂದರ ಬೆಲೆ 18 ರೂ. ಇತ್ತು ಎಂಬುದು ತಿಳಿಯುತ್ತದೆ. ಈ ಬೆಲೆಯನ್ನು ಕೇಳಿ ಇಂದಿನ ಕಾಲಘಟ್ಟದ ಜನರು ಹುಬ್ಬೇರಿಸುತ್ತಿದ್ದಾರೆ. ಅರ್ರೇ, ಅಂದಿನ ಕಾಲದಲ್ಲಿ ಇಷ್ಟು ಕಡಿಮೆ ಬೆಲೆಗೆ ಸೈಕಲ್ ಖರೀದಿ ಮಾಡಬಹುದಿತ್ತಾ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ವಾಸ್ತವವಾಗಿ ಅಂದು ವ್ಯಕ್ತಿಯೊಬ್ಬನ ಕೈಯ್ಯಲ್ಲಿ 10 ರೂಪಾಯಿ ಇತ್ತು ಎಂದಾದರೆ, ಇಂದಿನ ಮೌಲ್ಯದಲ್ಲಿ ಹೇಳುವುದಾದರೆ ಅದು 100 ರೂಪಾಯಿಗೆ ಸಮನಾದುದು!

    ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಬಿಲ್ ಕೋಲ್ಕತ ರಾಜ್ಯದ್ದಾಗಿದ್ದು, ಕುಮುದ್ ಸೈಕಲ್ ವರ್ಕ್ಸ್​ ಎಂಬ ಸೈಕಲ್ ಅಂಗಡಿಗೆ ಸೇರಿದ್ದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts