More

    ಕಮಲ ಹ್ಯಾರಿಸ್​ ಪತಿಯ ತುಟಿಗೆ ಚುಂಬಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಪತ್ನಿ! ವಿಡಿಯೋ ವೈರಲ್​

    ವಾಷಿಂಗ್ಟನ್​: ಅಮೆರಿಕದ ಪ್ರಥಮ ಮಹಿಳೆ ಜಿಲ್​ ಬೈಡೆನ್​ ಅವರು ಉಪಾಧ್ಯಕ್ಷೆ ಕಮಲ ಹ್ಯಾರಿಸ್ ಅವರ ಪತಿ​ ಡೌಗ್ ಎಂಹಾಫ್ ಅವರ ತುಟಿಗೆ ಚುಂಬಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಮಂಗಳವಾರ ನ್ಯಾಷನಲ್​ ಕ್ಯಾಪಿಟಲ್​ನಲ್ಲಿ ಅಧ್ಯಕ್ಷ ಜೋ ಬೈಡೆನ್​ ತಮ್ಮ ಎರಡನೇ ಸ್ಟೇಟ್​ ಆಫ್​ ಯೂನಿಯನ್​ ಭಾಷಣ ಮಾಡಿದರು. ಇದಕ್ಕೂ ಮುನ್ನ ಉಪಾಧ್ಯಕ್ಷೆ ಕಮಲ ಹ್ಯಾರಿಸ್​ ಪತಿ ಡೌಗ್​ ಎಂಹಾಫ್​ ಅವರ ತುಟಿಗೆ ಜೋ ಬೈಡೆನ್​ ಅವರ ಪತ್ನಿ ಜಿಲ್​ ಬೈಡೆನ್​, ಚುಂಬಿಸಿದರು ಎಂದು ಅನೇಕ ವರದಿಗಳಾಗಿವೆ.

    ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಬಗ್ಗೆ ಜಾಲತಾಣದಲ್ಲಿ ಸಾಕಷ್ಟು ಕಾಮೆಂಟ್​ಗಳು ಹರಿದುಬರುತ್ತಿದ್ದು, ಒಬ್ಬರಿಗೊಬ್ಬರು ಗೊತ್ತಿಲ್ಲದೆ ತುಟಿ ಚುಂಬಿಸಿದ್ದಾರೆ, ಇದು ಉದ್ದೇಶಪೂರ್ವಕವಲ್ಲ, ಆಕಸ್ಮಿಕವಾಗಿ ನಡೆದ ಘಟನೆ ಎಂದು ಕೆಲ ನೆಟ್ಟಿಗರು ವಾದಿಸಿದ್ದಾರೆ. ಇನ್ನು ಕೆಲವು ಕಮಲ ಹ್ಯಾರಿಸ್​ ಮತ್ತು ಬೈಡೆನ್​ ಫೋಟೋ ಶೇರ್​ ಮಾಡಿ ವ್ಯಂಗ್ಯವಾಡುತ್ತಿದ್ದಾರೆ.

    ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ನಿಯಂತ್ರಣವನ್ನು ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ರಿಪಬ್ಲಿಕನ್​ ಪಾರ್ಟಿ ವಶಕ್ಕೆ ಪಡೆದ ನಂತರ ವಿಭಜಿತ ಕಾಂಗ್ರೆಸ್‌ನ ಮುಂದೆ ಬೈಡೆನ್ ತಮ್ಮ ಮೊದಲ ಮಹತ್ವದ ಭಾಷಣವನ್ನು ನೀಡಿದ್ದಾರೆ.

    ಮಂಗಳವಾರ ರಾತ್ರಿ ತಮ್ಮ ಸ್ಟೇಟ್ ಆಫ್ ಯೂನಿಯನ್ ಭಾಷಣದಲ್ಲಿ ದೇಶದ ಆರ್ಥಿಕತೆಯನ್ನು ಪುನರ್ನಿರ್ಮಿಸುವ ಮತ್ತು ರಾಷ್ಟ್ರವನ್ನು ಒಗ್ಗೂಡಿಸುವ ಕೆಲಸವನ್ನು ಪೂರ್ಣಗೊಳಿಸಲು ತಮ್ಮೊಂದಿಗೆ ಕೆಲಸ ಮಾಡುವಂತೆ ರಿಪಬ್ಲಿಕನ್ನರಿಗೆ ಬೈಡೆನ್​ ಕರೆ ನೀಡಿದರು. (ಏಜೆನ್ಸೀಸ್​)

    ಬದುಕನ್ನೇ ಬದಲಿಸಿದ ಬರ್ತಡೇ ದಿನದ ನಿರ್ಧಾರ: 290 ಕೋಟಿ ರೂ. ಬಹುಮಾನ, ವಿಮಾನ​ ಖರೀದಿಸಿದ ಯುವತಿ

    ಬ್ರೆಜಿಲ್ ಮಹಿಳೆಗೆ ಭಾರತೀಯ ಸಂಸ್ಕೃತಿ ಪರಿಚಯಿಸಿದ ಬಾಗಲಕೋಟೆ ಕುಟುಂಬ!

    ಪಠಾಣ್​ ಸಿನಿಮಾ ಇಷ್ಟ ಆಗಲಿಲ್ಲ ಎಂದ ಮಗುವಿಗೆ ಶಾರುಖ್​ ಖಾನ್​ ಕೊಟ್ಟ ಉತ್ತರ ವೈರಲ್!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts