More

    ಪಠಾಣ್​ ಸಿನಿಮಾ ಇಷ್ಟ ಆಗಲಿಲ್ಲ ಎಂದ ಮಗುವಿಗೆ ಶಾರುಖ್​ ಖಾನ್​ ಕೊಟ್ಟ ಉತ್ತರ ವೈರಲ್!​

    ನವದೆಹಲಿ: ಸುಮಾರು ಐದು ವರ್ಷಗಳ ವಿರಾಮದ ಬಳಿಕ “ಪಠಾಣ್​​” ಅವತಾರದಲ್ಲಿ ಬೆಳ್ಳಿತೆರೆಯ ಮೇಲೆ ಅಬ್ಬರಿಸುತ್ತಿರುವ ಶಾರುಖ್​ ಖಾನ್, ಸಾಲು ಸಾಲು ಸೋಲುಗಳು ಬಳಿಕ ಮತ್ತೆ ಗೆಲುವಿನ ಲಯಕ್ಕೆ ಮರಳಿದ್ದಾರೆ. ವಿಶ್ವದಾದ್ಯಂತ ಬರೋಬ್ಬರಿ 700 ಕೋಟಿ ರೂ. ಗೂ ಅಧಿಕ ಹಣ ಗಳಿಸುವ ಮೂಲಕ ಬಾಕ್ಸ್​ಆಫೀಸ್​​ನಲ್ಲಿ ಪಠಾಣ್​ ಹೊಸ ದಾಖಲೆ ಬರೆದಿದೆ.

    ಸಿನಿಮಾ ನೋಡಿದ ಪ್ರತಿಯೊಬ್ಬರು ಕಿಂಗ್​​ ಖಾನ್​ ಶಾರುಖ್​ ಅವರ ಅಭಿನಯಕ್ಕೆ ಮನಸೋತಿದ್ದಾರೆ. ಈ ವಯಸ್ಸಿನಲ್ಲೂ ಹುರಿಯಾದ ಸದೃಢ ದೇಹವನ್ನು ಶಾರುಖ್​ ನಿರ್ವಹಿಸುವ ರೀತಿಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲರಿಗೂ ಸಿನಿಮಾ ಇಷ್ಟ ಅಗಿದೆ. ಆದರೆ, ಇಲ್ಲೊಂದು ಮಗುವಿಗೆ ಪಠಾಣ್​ ಸಿನಿಮಾ ಇಷ್ಟ ಆಗಿಲ್ಲವಂತೆ. ಮಗುವಿನ ಹೇಳಿಕೆಗೆ ಮನಸೋತಿರುವ ಶಾರುಖ್​ ಮಗುವಿನಷ್ಟೇ ಮುದ್ದಾಗಿ ಪ್ರತಿಕ್ರಿಯೆ ನೀಡಿದ್ದಾರೆ.

    ಅಭಿಷೇಕ್​ ಕುಮಾರ್​ ಎಂಬುವರು ಟ್ವಿಟರ್​ನಲ್ಲಿ ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಅದರಲ್ಲಿ ಆಹಾನ ಎಂಬ ಪುಟ್ಟ ಮಗುವಿಗೆನ ಯಾವ ಸಿನಿಮಾ ನೋಡಿದೆ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಉತ್ತರ ನೀಡುವ ಆಹಾನಾ ಪಠಾಣ್​ ಎಂದು ಹೇಳುತ್ತಾಳೆ. ಬಳಿಕ ನಿನಗೆ ಆ ಸಿನಿಮಾ ಇಷ್ಟವಾಯಿತಾ? ಎಂದು ಪ್ರಶ್ನಿಸಲಾಗುತ್ತದೆ. ಇದಕ್ಕೆ ಇಷ್ಟ ಆಗಲಿಲ್ಲ ಎನ್ನುವ ಆಹಾನಾ, ಯಾಕೆ ಇಷ್ಟ ಆಗಲಿಲ್ಲ ಎಂಬ ಕಾರಣವನ್ನು ತಿಳಿಸದೇ ಸುಮ್ಮನೇ ನಗೆಯ ಬೀರುತ್ತಾಳೆ.

    ಅಭಿಷೇಕ್​ ಕುಮಾರ್ ಪೋಸ್ಟ್​ ಮಾಡಿರುವ ವಿಡಿಯೋವನ್ನು ಶೇರ್​ ಮಾಡಿ, ಶಾರುಖ್​ ಪ್ರತಿಕ್ರಿಯೆ ನೀಡಿದ್ದಾರೆ. ಓ.. ಹೋ. ಹಾಗಾದರೆ ನಾನೀಗ ಇನ್ನಷ್ಟು ಕಷ್ಟಪ್ಪಟ್ಟು ಕೆಲಸ ಮಾಡಬೇಕಿದೆ! ಡ್ರಾಯಿಂಗ್ ಬೋರ್ಡ್‌ಗೆ ಹಿಂತಿರುಗಬೇಕಿದೆ. ಯುವ ಪ್ರೇಕ್ಷಕರು ನಿರಾಶೆಗೊಳ್ಳಲು ನಾನು ಬಿಡುವುದಿಲ್ಲ. ದಯವಿಟ್ಟು ಒಮ್ಮೆ ಅವಳಿಗೆ ಡಿಡಿಎಲ್​ಜೆ ಸಿನಿಮಾ ತೋರಿಸಿ, ಬಹುಶಃ ಆಕೆ ರೊಮ್ಯಾಂಟಿಕ್​ ಅನ್ಸುತ್ತೆ ಎಂದು ಶಾರುಖ್​ ಟ್ವೀಟ್​ ಮಾಡಿದ್ದಾರೆ.

    ಶಾರುಖ್​ ಟ್ವೀಟ್​ಗೆ ಅಭಿಮಾನಿಗಳು ಫಿದಾ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಶಾರುಖ್​ ಅವರು ಅಕ್ಷರಶಃ ಪ್ರತಿ ಟ್ಯಾಗ್ ಅನ್ನು ಓದುತ್ತಾರೆ. ಈ ಮನುಷ್ಯ ಎಂದಿಗೂ ಬದಲಾಗಿಲ್ಲ. ಬದಲಾಯಿಸಿದರೆ ಅವರು ಇನ್ನೂ ಉತ್ತಮವಾಗಿ ಬದಲಾಗುತ್ತಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್​)

    ರಾಜ್ಯದಲ್ಲಿ ಗುಜರಿ ನೀತಿ ಜಾರಿ ಅಧಿಕೃತ ಆರಂಭ: ವಾಹನ ಸ್ಕ್ರ್ಯಾಪಿಂಗ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ; ವಾರ್ಷಿಕ 10 ಕೋಟಿ ವಹಿವಾಟು ಇರೋರಿಗೆ ಅವಕಾಶ

    ಇಂದು ತುಮಕೂರಿಗೆ ನಮೋ ಆಗಮನ: ಸಂಚಾರ ಮಾರ್ಗದಲ್ಲಿ ಬದಲಾವಣೆ, ಎಚ್​ಎಎಲ್​ ಬಳಿ ಪೊಲೀಸರ ಹದ್ದಿನಕಣ್ಣು

    ಗಾನಕೋಗಿಲೆಯ ಸ್ಮರಣೆ: ಲತಾ ಮಂಗೇಶ್ಕರ್ ಮರೆಯಾಗಿ ಒಂದು ವರ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts