More

    ರಾಜ್ಯದಲ್ಲಿ ಗುಜರಿ ನೀತಿ ಜಾರಿ ಅಧಿಕೃತ ಆರಂಭ: ವಾಹನ ಸ್ಕ್ರ್ಯಾಪಿಂಗ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ; ವಾರ್ಷಿಕ 10 ಕೋಟಿ ವಹಿವಾಟು ಇರೋರಿಗೆ ಅವಕಾಶ

    ಬೆಂಗಳೂರು: ಹದಿನೈದು ವರ್ಷ ಪೂರೈಸಿರುವ ಹಳೇ ವಾಹನಗಳನ್ನು ಗುಜರಿಗೆ ಹಾಕುವ ಪ್ರಕ್ರಿಯೆ ಕರ್ನಾಟಕ ರಾಜ್ಯ ಸರ್ಕಾರ ಅಧಿಕೃತವಾಗಿ ಚಾಲನೆ ನೀಡಿದೆ. ರಾಜ್ಯದಲ್ಲಿ ವಾಹನಗಳ ಗುಜರಿ ಕೇಂದ್ರಗಳನ್ನು ಸ್ಥಾಪಿಸಲು ಸಾರಿಗೆ ಇಲಾಖೆ ಶನಿವಾರ (ಫೆ.4)ದಿಂದಲೇ ಅರ್ಜಿ ಆಹ್ವಾನಿಸಿದೆ.

    ಸ್ಕ್ರ್ಯಾಪಿಂಗ್ ನೀತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಅಧಿಸೂಚನೆ ಅನ್ವಯ ಸಾರಿಗೆ ಇಲಾಖೆಯ www.transport.karnataka.gov.in ವೆಬ್​ಸೈಟ್​ನಲ್ಲಿ ನೋಂದಾಯಿತ ವಾಹನಗಳ ಸ್ಕ್ರ್ಯಾಪಿಂಗ್ ನೀತಿ 2022 ಅನ್ನು ಪ್ರಕಟಿಸಲಾಗಿದೆ. ಅದರಡಿ ಕೇಂದ್ರ ಸರ್ಕಾರದ ಪೋರ್ಟಲ್ www.news.gov.in ಜಾಲತಾಣದ ಏಕಗವಾಕ್ಷಿಯಲ್ಲಿ ಆಸಕ್ತ ಅರ್ಹ ಸಾರ್ವಜನಿಕರು ನಿಯಮಾನುಸಾರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ತಿಳಿಸಿದ್ದಾರೆ.

    ಹದಿನೈದು ವರ್ಷ ಪೂರೈಸುವ ಹಳೇ ವಾಹನಗಳನ್ನು ಕಡ್ಡಾಯವಾಗಿ ಗುಜರಿಗೆ ಹಾಕುವಂತೆ ಬಲವಂತ ಇಲ್ಲ. ಏ.1ರಿಂದ 15 ವರ್ಷ ಪೂರೈಸಿರುವ ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ಪ್ರಕ್ರಿಯೆ ಕರ್ನಾಟಕದಲ್ಲಿ ಆರಂಭವಾಗುತ್ತಿದೆ. ಹಳೇ ವಾಹನಗಳನ್ನು ಗುಜರಿಗೆ ಹಾಕಲು ಇಚ್ಛಿಸಿದರೆ ಅದರಲ್ಲಿರುವ ಸ್ಟೀಲ್​ಗೆ ತೂಕದ ಲೆಕ್ಕದಲ್ಲಿ ವಾಹನ ಮಾಲೀಕರಿಗೆ ಹಣ ನೀಡಲಾಗುತ್ತದೆ. ಜತೆಗೆ ಠೇವಣಿ ಪ್ರಮಾಣ ಪತ್ರವನ್ನು (ಸಿಒಡಿ) ವಿತರಿಸಲಾಗುತ್ತದೆ. ಹೊಸ ವಾಹನ ಖರೀದಿಸುವಾಗ ಆ ಪ್ರಮಾಣ ಪತ್ರವನ್ನು ತೋರಿಸಿದರೆ ಹಳೇ ವಾಹನಕ್ಕೆ ಪಾವತಿಸಿರುವ ತೆರಿಗೆ ಆಧಾರದಲ್ಲಿ (1 ಲಕ್ಷ ತೆರಿಗೆ ಪಾವತಿಸಿದ್ದರೆ 25 ಸಾವಿರ ರೂ. ರಿಯಾಯಿತಿ) ಸಾರಿಗೇತರ ವಾಹನಕ್ಕೆ ಶೇ.25 ಹಾಗೂ ಸಾರಿಗೆ ವಾಹನಕ್ಕೆ ಶೇ.15 ತೆರಿಗೆ ವಿನಾಯಿತಿ ಸಿಗಲಿದೆ.

    ಕ್ರಿಮಿನಲ್ ಕೇಸ್ ಇರಬಾರದು: ಗುಜರಿಗೆ ಹಾಕಲು ವಾಹನಗಳನ್ನು ಕೊಡುವ ಮುನ್ನ ವಾಹನದ ಮೇಲೆ ಯಾವುದೇ ಕ್ರಿಮಿನಲ್ ಕೇಸ್ ಹಾಗೂ ದಂಡ ಶುಲ್ಕ ಪಾವತಿ ಬಾಕಿ ಉಳಿಸಿಕೊಂಡಿಲ್ಲ ಎಂದು ಮಾಲೀಕ ಮುಚ್ಚಳಿಕೆ ಪತ್ರ ಬರೆದುಕೊಡಬೇಕು. ಸ್ಕ್ರಾ್ಯಪಿಂಗ್ ಕೇಂದ್ರದ ಮಾಲೀಕರು, ಗುಜರಿಗೆ ಹಾಕಿದ ವಾಹನ ಚಾಸ್ಸಿ ನಂಬರನ್ನು ಜೋಪಾನವಾಗಿ 6 ತಿಂಗಳು ಇಟ್ಟಿರಬೇಕು. ವಾಹನದ ಎಲ್ಲ ಭೌತಿಕ ದಾಖಲೆಗಳನ್ನು 2 ವರ್ಷದವರೆಗೆ ಹಾಗೂ ಸ್ಕ್ಯಾನ್​ ದಾಖಲಾತಿಗಳನ್ನು 10 ವರ್ಷಗಳವರೆಗೆ ಸುರಕ್ಷಿತವಾಗಿ ಇಟ್ಟಿರಬೇಕು. ಅಧಿಕಾರಿಗಳು ಪರಿಶೀಲನೆಗೆ ಬಂದ ಸಂದರ್ಭದಲ್ಲಿ ದಾಖಲಾತಿ ತೋರಿಸಬೇಕಾಗುತ್ತದೆ ಎಂದು ಷರತ್ತುಗಳನ್ನು ವಿಧಿಸಲಾಗಿದೆ.

    ಸ್ಕ್ರಾ್ಯಪಿಂಗ್ ಘಟಕ ಸ್ಥಾಪನೆಗೆ ಬೇಕು 10 ಕೋಟಿ!: ಕಾನೂನುಬದ್ಧವಾಗಿ ಸ್ಥಾಪನೆಯಾದ ವ್ಯಕ್ತಿ, ಸಂಸ್ಥೆ, ಸೊಸೈಟಿ, ಸ್ಕ್ರಾ್ಯಪಿಂಗ್ ಕೇಂದ್ರ ಸ್ಥಾಪನೆಗೆ ಅರ್ಜಿ ಸಲ್ಲಿಸಬಹುದು. ವಾರ್ಷಿಕ 10 ಕೋಟಿ ವ್ಯವಹಾರ ನಡೆಸುವ ವ್ಯಕ್ತಿ/ಕಂಪನಿ ಅರ್ಜಿ ಆಹ್ವಾನಿಸಲಾಗುತ್ತದೆ. ಒಂದು ಘಟಕ ಸ್ಥಾಪನೆಗೆ ಕನಿಷ್ಠ 10 ಕೋಟಿ ರೂ. ಬೇಕಾಗುತ್ತದೆ. ಗುಜರಿ ವಾಹನಗಳ ಸ್ಕ್ರ್ಯಾಪಿಂಗ್ ನಿರ್ವಹಣೆಗೆ ವಿಶಾಲವಾದ ಸ್ಥಳಾವಕಾಶ ಬೇಕು. ಹೀಗಾಗಿ ಘಟಕಕ್ಕೆ ಕನಿಷ್ಠ 5 ಎಕರೆ ಜಾಗ ಬೇಕು. 1 ಲಕ್ಷ ರೂ. ಪ್ರೊಸೆಸಿಂಗ್ ಶುಲ್ಕ ಹಾಗೂ 10 ಲಕ್ಷ ರೂ. ಠೇವಣಿ ಇಡಬೇಕು. ಯಂತ್ರಗಳ ಖರೀದಿ, ಮಾನವ ಸಂಪನ್ಮೂಲ ಎಲ್ಲದಕ್ಕೂ ಹಣ ಖರ್ಚು ಮಾಡಬೇಕು. ಹೀಗಾಗಿ ಉತ್ತಮ ಸಂಸ್ಥೆಗಳು ಅರ್ಜಿ ಸಲ್ಲಿಸಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

    ಎಟಿಎಮ್​ನಿಂದ ವಿಚಿತ್ರ ರೀತಿಯಲ್ಲಿ ಕಳವಾದ ಹಣ; ಬ್ಯಾಂಕ್​ನವರಿಗೆ ತಲೆನೋವಾಗಿರುವ ಖದೀಮರು!

    ವರ್ಕೌಟ್​ ಆದ 50% ಆಫರ್​: ಮೂರನೇ ದಿನವೂ ಕೋಟಿಗಟ್ಟಲೆ ಟ್ರಾಫಿಕ್​ ಫೈನ್​ ಸಂಗ್ರಹ; ಒಟ್ಟು ಮೊತ್ತವೆಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts