More

    ದೇವಳದ ಬಳಿ ಧರ್ಮ ಸಂಘರ್ಷ; ಹನುಮ ಜನ್ಮಭೂಮಿಯಲ್ಲೂ ಬಿಗುವಿನ ವಾತಾವರಣ..

    ಕೊಪ್ಪಳ: ದೇವಸ್ಥಾನಗಳ ಬಳಿ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ಉಂಟಾಗಿರುವ ಧರ್ಮ ಸಂಘರ್ಷ ರಾಜ್ಯದ ಹಲವೆಡೆಗೆ ವ್ಯಾಪಿಸಿದ್ದು, ಅದು ಹನುನ ಜನ್ಮಭೂಮಿಗೂ ತಲುಪಿ ಅಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ನಿನ್ನೆಯಷ್ಟೇ ರಾಜಧಾನಿ ಬೆಂಗಳೂರಿನಲ್ಲಿ ಸದ್ದು ಮಾಡಿದ್ದ ಈ ಧರ್ಮ ಸಂಘರ್ಷ ಇಂದು ಅಂಜನಾದ್ರಿ ಬೆಟ್ಟಕ್ಕೂ ವ್ಯಾಪಿಸಿದೆ.

    ಹಿಂದೂ ದೇವಸ್ಥಾನಗಳ ಆವರಣದಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರ-ವಹಿವಾಟು ನಡೆಸಲು ಅವಕಾಶ ಕೊಡಬಾರದು ಎಂದು ಹಿಂದೂ ಸಂಘಟನೆಗಳು ಅಭಿಯಾನ ನಡೆಸುತ್ತಿದ್ದ ನಿನ್ನೆ ಅದರ ವಿರುದ್ಧ ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಉದಯ್ ಗರುಡಾಚಾರ್​ ಮಾತನಾಡಿ, ವ್ಯಾಪಾರಕ್ಕೆ ಯಾರಿಗೂ ಅಡ್ಡಿ ಮಾಡಬಾರದು ಎಂದು ಹೇಳಿದ್ದರು. ಆ ಬಳಿ ರಿಷಿಕುಮಾರ್ ಸ್ವಾಮೀಜಿ ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಅನ್ಯಧರ್ಮೀಯರಿಗೆ ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ಅವಕಾಶವಿಲ್ಲ ಎಂದು ಕಾನೂನೇ ಇದೆ ಎಂದಿದ್ದರು. ಇಂದು ಅಂಥದ್ದೇ ಒಂದು ಪ್ರಕರಣ ನಡೆದಿದ್ದು, ಅನ್ಯಧರ್ಮೀಯರು ದೇವಸ್ಥಾನದ ಬಳಿ ವ್ಯಾಪಾರ ಮಾಡಬಾರದು ಎಂದು ಹಿಂದೂ ಜಾಗರಣಾ ವೇದಿಕೆಯ ಬ್ಯಾನರ್​​ಗಳನ್ನು ಕೊಪ್ಪಳ ಜಿಲ್ಲಾಡಳಿತ ತೆರವುಗೊಳಿಸಿದೆ.

    ಕೊಪ್ಪಳದ ಗಂಗಾವತಿಯಲ್ಲಿ ಹನುಮ ಜನ್ಮಭೂಮಿಯಾಗಿರುವ ಅಂಜನಾದ್ರಿ ಬೆಟ್ಟದಲ್ಲಿ ಅನ್ಯಧರ್ಮೀಯರು ವ್ಯಾಪಾರ ವಹಿವಾಟು ನಡೆಸಬಾರದು ಎಂದು ಎರಡು ದಿನಗಳ ಹಿಂದೆ ಹಿಂದೂ ಜಾಗರಣಾ ವೇದಿಕೆ ಬ್ಯಾನರ್​ಗಳನ್ನು ಹಾಕಿತ್ತು. ಆದರೆ ಜಿಲ್ಲಾಡಳಿತ ಈ ಬ್ಯಾನರ್​ಗಳನ್ನು ತೆರವುಗೊಳಿಸಿದೆ. ಜಿಲ್ಲಾಡಳಿತದ ಈ ನಡೆ ವಿರುದ್ಧ ಹಿಂದೂ ಜಾಗರಣಾ ವೇದಿಕೆ ತೀವ್​ರ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.

    ಕಾನೂನಿನಡಿಯಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು. ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ಅನ್ಯಧರ್ಮೀಯರು ವ್ಯಾಪಾರ ವಹಿವಾಟು ಮಾಡಬಾರದು ಎಂದು ಧಾರ್ಮಿಕ ದತ್ತಿ ಇಲಾಖೆಯಲ್ಲಿ ನಿಯಮವಿದೆ. ಅದರಂತೆ ನಾವು ಬ್ಯಾನರ್​ ಹಾಕಿದ್ದೆವು. ಆದರೆ ಅವುಗಳನ್ನು ತೆರವು ಮಾಡಿದ್ದು ಸರಿ ಅಲ್ಲ ಎಂದು ಹಿಂದೂ ಜಾಗರಾಣ ವೇದಿಕೆ ಪ್ರಾಂತ್ಯ ಸಂಚಾಲಕ ಶ್ರೀಕಾಂತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಮದ್ವೆ ಆಗದೆ 2 ವರ್ಷ ಒಂದೇ ರೂಮಲ್ಲಿದ್ರು ಬ್ಯೂಟಿಷಿಯನ್​-ಬಾರ್ಬರ್; ಕೊನೆಗೆ ಅವನ ಸಿಟ್ಟಿಗೆ ಅವಳ ಪ್ರಾಣವೇ ಹೋಯ್ತು!

    ಸಂಭ್ರಮದ ಸಾವು: ಮದುವೆ ಸಮಾರಂಭದಲ್ಲಿ ಕುಣಿಯುತ್ತ ಕುಣಿಯುತ್ತ ಕುಸಿದು ಬಿದ್ದು ಪ್ರಾಣ ಕಳ್ಕೊಂಡ!

    ಹೆಂಡ್ತಿ ಜತೆ ಜಗಳವಾಡಿ ಬಂದವನ ಕಂಡು ನಾಯಿ ಬೊಗಳಿತು; ಸಿಟ್ಟಾದ ಆತ ಅದರ ಒಡತಿಯನ್ನೇ ಕೊಂದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts