More

    ಷೇರು ಮಾರುಕಟ್ಟೆಯಿಂದ ಏಕೆ ಮಾಯವಾಗಲಿದೆ ಈ ಕಂಪನಿ?: ಬೇಸರಗೊಂಡ ಹೂಡಿಕೆದಾರರಿಂದ ಸ್ಟಾಕ್​ ಮಾರಾಟ

    ಮುಂಬೈ: ಐಸಿಐಸಿಐ ಸೆಕ್ಯುರಿಟೀಸ್ ಕಂಪನಿಯ ಷೇರು ಇನ್ನು ಮುಂದೆ ಷೇರು ಮಾರುಕಟ್ಟೆಯಿಂದ ಮಾಯವಾಗಲಿದೆ. ಷೇರು ಮಾರುಕಟ್ಟೆಯಿಂದ ಈ ಕಂಪನಿ ಡಿಲಿಸ್ಟ್ ಆಗಲಿದೆ.

    ಮಾತೃ ಕಂಪನಿಯಾದ ಐಸಿಐಸಿಐ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಲು ಐಸಿಐಸಿಐ ಸೆಕ್ಯುರಿಟೀಸ್ ವಿಲೀನವಾಗಲಿದೆ. ಅಂದಾಜು ಶೇಕಡಾ 72 ಷೇರುದಾರರಿಂದ ಇದಕ್ಕೆ ಅನುಮೋದನೆಯನ್ನು ಪಡೆದುಕೊಳ್ಳಲಾಗಿದೆ. ಆದರೂ, ಹೆಚ್ಚಿನ ಚಿಲ್ಲರೆ ಹೂಡಿಕೆದಾರರು ಈ ವಿಲೀನ ಯೋಜನೆಯನ್ನು ವಿರೋಧಿಸಿದ್ದಾರೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ, ಐಸಿಐಸಿಐ ಸೆಕ್ಯುರಿಟೀಸ್ ಷೇರುಗಳಲ್ಲಿ ಅಲ್ಲೋಲಕಲ್ಲೋಲ ಉಂಟಾಗಿದೆ. ಹೂಡಿಕೆದಾರರು ಈ ಷೇರುಗಳನ್ನು ಮಾರಾಟ ಮಾಡಿ ನಿರ್ಗಮಿಸಲು ಪ್ರಾರಂಭಿಸಿದ್ದಾರೆ.

    ಐಸಿಐಸಿಐ ಸೆಕ್ಯುರಿಟೀಸ್ ಏನು ಹೇಳಿದೆ?:

    83.8 ಪ್ರತಿಶತ ಸಾಂಸ್ಥಿಕ ಹೂಡಿಕೆದಾರರು ವಿಲೀನ ಯೋಜನೆಯ ಪರವಾಗಿ ಮತ ಚಲಾಯಿಸಿದರೆ, 67.8 ಪ್ರತಿಶತ ಸಾಂಸ್ಥಿಕವಲ್ಲದ ಹೂಡಿಕೆದಾರರು ಇದಕ್ಕೆ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ ಎಂದು ಐಸಿಐಸಿಐ ಸೆಕ್ಯುರಿಟೀಸ್ ಷೇರು ಮಾರುಕಟ್ಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ತಿಳಿಸಿದೆ. ಒಟ್ಟಾರೆಯಾಗಿ, 72 ಪ್ರತಿಶತ ಸಾರ್ವಜನಿಕ ಷೇರುದಾರರು ಷೇರು ಮಾರುಕಟ್ಟೆಯಿಂದ ನಿರ್ಗಮಿಸುವ ಹಾಗೂ ವಿಲೀನ ಯೋಜನೆಯ ಪರವಾಗಿ ಮತ ಚಲಾಯಿಸಿದ್ದಾರೆ. ಬ್ರೋಕಿಂಗ್ ಕಂಪನಿಯ ಷೇರುದಾರರು ಮಾರ್ಚ್ 27 ರಂದು ಕಂಪನಿಯನ್ನು ಷೇರು ಮಾರುಕಟ್ಟೆಯಿಂದ ಡಿಲಿಸ್ಟ್ ಮಾಡಲು ಮತ್ತು ಅದನ್ನು ಮಾತೃ ಕಂಪನಿ ಐಸಿಐಸಿಐ ಬ್ಯಾಂಕ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯನ್ನಾಗಿ ಮಾಡಲು ಪ್ರಸ್ತಾಪಿಸಿದ್ದರು.

    ಈ ಬೆಳವಣಿಗೆಯ ನಂತರ, ಐಸಿಐಸಿಐ ಸೆಕ್ಯುರಿಟೀಸ್ ಷೇರುಗಳ ಬೆಲೆ ಗುರುವಾರದ ಇಂಟ್ರಾ ಡೇ ವಹಿವಾಟಿನಲ್ಲಿ ಶೇಕಡಾ 4.2 ರಷ್ಟು ಕುಸಿದು 710 ರೂ. ತಲುಪಿತ್ತು. ನಂತರ, ಚೇತರಿಸಿಕೊಂಡು, ಅದರ ಹಿಂದಿನ ಮುಕ್ತಾಯದ ಬೆಲೆಗಿಂತ 1.63 ಇಳಿಕೆಯಾಗಿ 729 ರೂ. ಮುಟ್ಟಿತು.

    ಏತನ್ಮಧ್ಯೆ, ಹೂಡಿಕೆದಾರರು ಐಸಿಐಸಿಐ ಬ್ಯಾಂಕ್ ಷೇರುಗಳ ಖರೀದಿಗೆ ಮುಂದಾದರು. ಗುರುವಾರದ ವಹಿವಾಟಿನಲ್ಲಿ ಈ ಷೇರು ಶೇಕಡಾ ಒಂದಕ್ಕಿಂತ ಹೆಚ್ಚು ಏರಿಕೆ ಕಂಡು 1095.85 ರೂ. ತಲುಪಿತು.

    ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಕೆ ಸಾಧ್ಯ: ಈ ಎರಡು ಷೇರುಗಳಲ್ಲಿ ಹೂಡಿಕೆಗೆ ತಜ್ಞರ ಸಲಹೆ

     

    ಕೊನೆಯ ವಹಿವಾಟಿನಲ್ಲಿ ಗೂಳಿ ಅಬ್ಬರಿಸಿದ್ದೇಕೆ?: 2023-24 ಹಣಕಾಸು ವರ್ಷದಲ್ಲಿ ನಿಫ್ಟಿ 29%; ಬಿಎಸ್​ಇ 25%; ಸ್ಮಾಲ್​ಕ್ಯಾಪ್​ 70%; ಮಿಡ್​ಕ್ಯಾಪ್​ 60% ಗಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts