More

    ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಕೆ ಸಾಧ್ಯ: ಈ ಎರಡು ಷೇರುಗಳಲ್ಲಿ ಹೂಡಿಕೆಗೆ ತಜ್ಞರ ಸಲಹೆ

    ಮುಂಬೈ: ಕಡಿಮೆ ಸಮಯದಲ್ಲಿ ದೊಡ್ಡ ಲಾಭವನ್ನು ನೀಡುವ ಸ್ಟಾಕ್‌ನಲ್ಲಿ ಹೂಡಿಕೆ ಮಾಡಲು ನೀವು ಯೋಜಿಸುತ್ತಿದ್ದರೆ ಈ ಎರಡು ಷೇರುಗಳತ್ತ ಗಮನಹರಿಸಿದೆ.

    ಮಾರುಕಟ್ಟೆ ತಜ್ಞ ಸೇಥಿ ಫಿನ್‌ಮಾರ್ಟ್‌ನ ವಿಕಾಸ್ ಸೇಥಿ ಅವರು ಎರಡು ಷೇರುಗಳನ್ನು ಸೂಚಿಸಿದ್ದಾರೆ. ಪಿಕ್ಸ್ ಟ್ರಾನ್ಸ್​​ಮಿಷನ್ಸ್​ (Pix Transmissions) ಮತ್ತು ಹುಡ್ಕೊ (HUDCO) ಈ ಎರಡು ಷೇರುಗಳಾಗಿವೆ.

    ಪಿಕ್ಸ್ ಟ್ರಾನ್ಸ್​​ಮಿಷನ್ಸ್​ (· Pix Transmissions):

    ವಿಕಾಸ್ ಸೇಥಿ ಅವರು ಹೂಡಿಕೆದಾರರಿಗೆ ಆಟೋ ಆಕ್ಸಿಲಿಯರಿ ಕಂಪನಿ ಪಿಕ್ಸ್ ಟ್ರಾನ್ಸ್‌ಮಿಷನ್ಸ್ ಅನ್ನು ಆಯ್ಕೆ ಮಾಡಿದ್ದಾರೆ. ಈ ಷೇರು ಬುಧವಾರ 3.37 ರಷ್ಟು ಏರಿಕೆಯೊಂದಿಗೆ 1,342 ರೂ. ತಲುಪಿದೆ. ಇದಕ್ಕೆ ಮಾರುಕಟ್ಟೆ ತಜ್ಞರು 1400 ರೂ ಟಾರ್ಗೆಟ್ ಪ್ರೈಸ್ ನೀಡಿದ್ದಾರೆ. 1295 ರೂ. ಸ್ಟಾಪ್​ ಲಾಸ್​ ನಿಗದಿಪಡಿಸಿದ್ದಾರೆ.

    ಈ ಕಂಪನಿಯ ಷೇರು ಬೆಲೆ ಒಂದು ತಿಂಗಳ ಅವಧಿಯಲ್ಲಿ ಅಂದಾಜು ಮೂರು ಪ್ರತಿಶತದಷ್ಟು ಕುಸಿದಿದೆ. ಆದರೆ ಮುಂಬರುವ ಸಮಯದಲ್ಲಿ, ಈ ಷೇರು ಹೂಡಿಕೆದಾರರಿಗೆ ಲಾಭವನ್ನು ಗಳಿಸಬಹುದು. ಈ ಸ್ಟಾಕ್‌ನ ಕಳೆದ 52 ವಾರಗಳ ಗರಿಷ್ಠ ಬೆಲೆ 1568 ರೂ ಮತ್ತು ಕನಿಷ್ಠ 728 ರೂ. ಇದೆ. ಈ ಕಂಪನಿಯು ಕೃಷಿ, ಕೈಗಾರಿಕಾ ಮತ್ತು ಆಟೋಮೋಟಿವ್ ಬೆಲ್ಟ್‌ಗಳನ್ನು ತಯಾರಿಸುತ್ತದೆ.

    HUDCO ಷೇರು:

    ಸರ್ಕಾರಿ ಕಂಪನಿಯಾದ ಹುಡ್ಕೊ ಷೇರುಗಳೂ ತಜ್ಞರ ಪಟ್ಟಿಯಲ್ಲಿವೆ. ಈ ಷೇರು ಬುಧವಾರ ಶೇಕಡಾ 1.38 ಹೆಚ್ಚಳದೊಂದಿಗೆ 186.70 ರೂ. ತಲುಪಿತ್ತು. ಈ ಷೇರು ಬೆಲೆ ಕೂಡ ಒಂದು ತಿಂಗಳ ಅವಧಿಯಲ್ಲಿ ಕುಸಿತ ಕಂಡು ಹೂಡಿಕೆದಾರರನ್ನು ನಿರಾಸೆಗೊಳಿಸಿದೆ. ಆದರೂ, ಕಳೆದ ಆರು ತಿಂಗಳಲ್ಲಿ, ಈ ಷೇರು ಹೂಡಿಕೆದಾರರಿಗೆ 115.71 ಪ್ರತಿಶತದಷ್ಟು ಪ್ರಚಂಡ ಆದಾಯವನ್ನು ನೀಡಿದೆ. ಒಂದು ವರ್ಷದ ಅವಧಿಯಲ್ಲೂ ಶೇ. 358ರಷ್ಟು ಆದಾಯ ನೀಡುವ ಮೂಲಕ ಹೂಡಿಕೆದಾರರಿಗೆ ಭಾರಿ ಲಾಭ ತಂದುಕೊಟ್ಟಿದೆ.

    ತಜ್ಞರು ಈ ಷೇರಿಗೆ ಖರೀದಿ ರೇಟಿಂಗ್ ನೀಡಿದ್ದಾರೆ. ಇದಕ್ಕಾಗಿ 180 ರೂ.ಗಳ ಸ್ಟಾಪ್​ಲಾಸ್​ ಮತ್ತು ರೂ.205 ಗುರಿ ಬೆಲೆಯನ್ನು ನಿಗದಿಪಡಿಸಲಾಗಿದೆ. ಫೆಬ್ರವರಿ 2 ರಂದು, ಈ ಸ್ಟಾಕ್ ತನ್ನ 52 ವಾರಗಳ ಗರಿಷ್ಠ ಮಟ್ಟವಾದ ರೂ. 226 ಅನ್ನು ತಲುಪುವ ಮೂಲಕ ದಾಖಲೆಯನ್ನು ಮಾಡಿದೆ. ಈ ಕಂಪನಿಯು ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸುವ ಹಣಕಾಸು ಕಂಪನಿಯಾಗಿದೆ.

    ಕೊನೆಯ ವಹಿವಾಟಿನಲ್ಲಿ ಗೂಳಿ ಅಬ್ಬರಿಸಿದ್ದೇಕೆ?: 2023-24 ಹಣಕಾಸು ವರ್ಷದಲ್ಲಿ ನಿಫ್ಟಿ 29%; ಬಿಎಸ್​ಇ 25%; ಸ್ಮಾಲ್​ಕ್ಯಾಪ್​ 70%; ಮಿಡ್​ಕ್ಯಾಪ್​ 60% ಗಳಿಕೆ

    ಒಂದು ವರ್ಷದಲ್ಲಿ ಹೂಡಿಕೆದಾರರಿಗೆ 182% ಲಾಭ ನೀಡಿದ ರಕ್ಷಣಾ ಕಂಪನಿ ಸ್ಟಾಕ್​: ಗುರುವಾರ ಒಂದೇ ದಿನದಲ್ಲಿ 14% ಏರಿಕೆ ಆಗಿದ್ದೇಕೆ?

    ರಾಕೆಟ್​ನಂತೆ ಜಿಗಿದ ವಿಐಪಿ ಷೇರು ಬೆಲೆ: ಒಂದೇ ದಿನದಲ್ಲಿ 15% ಹೆಚ್ಚಳ ಆಗಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts