More

    ದುಶ್ಚಟಗಳನ್ನು ತ್ಯೆಜಿಸಿ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಬೇಕು: ತೋಂಟದ ಸಿದ್ಧರಾಮ ಶ್ರೀಗಳು

    ವಿಜಯವಾಣಿ ಸುದ್ದಿಜಾಲ ಗದಗ
    ಪ್ರಸ್ತುತ ದಿನಮಾನದ ಆಹಾರ, ಜೀವನಶೈಲಿಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಹೃದಯಾಘಾತ, ರಕ್ತದ ಒತ್ತಡ, ಸಕ್ಕರೆ ಖಾಯಿಲೆ ಹೆಚ್ಚಾಗುತ್ತಿರುದಕ್ಕೆ ನಮ್ಮ ಜೀವನಶೈಲಿಯಲ್ಲಿನ ಬದಲಾವಣೆಗಳೇ ಕಾರಣ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
    ತೊಂಟದಾರ್ಯ ಮಠದಲ್ಲಿ ಇತ್ತೀಚೆಗೆ ಜರುಗಿದ ಶಿವಾನುಭ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ದೈಹಿಕ ಶ್ರಮಗಳು ಕಡಿಮೆಯಾಗಿ, ಮಾನಸಿಕ ಒತ್ತಡಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಮನುಷ್ಯನ ಆಯುಷ್ಯ ಕೂಡ ಬಹಳಷ್ಟು ಕಡಿಮೆಯಾಗುತ್ತಿದೆ. ದುಶ್ಚಟಗಳನ್ನು ತ್ಯೆಜಿಸಿ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂದು ಶ್ರೀಗಳು ಹೇಳಿದರು.
    ವೈದ್ಯ ಡಾ. ಗಣೇಶ ಕುಂದಾಪೂರ ಉಪನ್ಯಾಸ ನೀಡಿ, ಕ್ಯಾನ್ಸರ್​ನ್ನು ಮೊದಲನೇ ಹಂತದಲ್ಲಿ ಪತ್ತೆ ಹಚ್ಚಿ ಸೂಕ್ತ ವೈದ್ಯಕಿಯ ಚಿಕಿತ್ಸೆ ಪಡೆಯಬೇಕು. ಕ್ಯಾನ್ಸರ್​ ವಾಸಿಯಾಗುವುದು ಖಚಿತ. ಕ್ಯಾನ್ಸರ್​ ರೋಗ ಎಂದ ತಣ ಭಯಪಡಬಾರದು. ಸಿಗರೇಟ್​, ಗುಟಕಾ, ಸೇವನೆಯಿಂದ ಕ್ಯಾನ್ಸರ್​ಗೆ ಬಹಳಷ್ಟು ಜನ ತುತ್ತಾಗುತ್ತಿದ್ದಾರೆ. ಸಾಧ್ಯವಾದಷ್ಟು ದುಶ್ಚಟಗಳಿಂದ ದೂರವಿರಬೇಕು ಎಂದು ತಿಳಿಸಿದ ಅವರು ಕ್ಯಾನ್ಸರ್​ ಕುರಿತು ಅನೇಕ ಮಹತ್ವದ ಸಂಗತಿಗಳನ್ನು ಜನರಿಗೆ ತಿಳಿಸಿಕೊಟ್ಟರು.
    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಪಡೆದ ವಿ. ವಿ. ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ಲಲಿತಾ ಇಂಗಳಳ್ಳಿ, ಸ್ನೇಹಾ ಬಳ್ಳೊಳ್ಳಿ, ದೀಪಾ ನಿಲೂಗಲ್​, ಬಸವರಾಜ ರಾಮನಕೊಪ್ಪ, ಉಮೇಶ ಗಂಗಾಧರಪ್ಪ, ವಿಜಯಕುಮಾರ ಹಿರೇಮಠ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts