More

    ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಪ್ರಾರಂಭಿಸಿದ್ದಾರೆ ‘ಆಪರೇಶನ್​ ದುರಾಚಾರಿ’

    ಲಖನೌ: ಉತ್ತರಪ್ರದೇಶದಲ್ಲಿ 2017ರಲ್ಲಿ ಆ್ಯಂಟಿ ರೋಮಿಯೋ ಸ್ಕ್ವಾಡ್​ ರಚನೆಯಾಗಿದ್ದು ಹಳೇ ವಿಷಯ. ಕಾಲೇಜಿಗೆ ಹೋಗುವ ಹೆಣ್ಣುಮಕ್ಕಳು, ಮಹಿಳೆಯರ ಸುರಕ್ಷತೆಗಾಗಿ ಸಿಎಂ ಯೋಗಿ ನೇತೃತ್ವದ ಸರ್ಕಾರ ಈ ಸ್ಕ್ವಾಡ್​ ರಚನೆ ಮಾಡಿತ್ತು.

    ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಇನ್ನೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ರಾಜ್ಯದಲ್ಲಿ ಸೆಕ್ಸ್​ ಸಂಬಂಧಿತ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ‘ಆಪರೇಶನ್​ ದುರಾಚಾರಿ’ ಎಂಬ ಕಾರ್ಯಾಚರಣೆ ಶುರುವಾಗಿದೆ. ಇದನ್ನೂ ಓದಿ: ಕಂಗನಾಗ್ಯಾಕೆ ಇನ್ನೂ ಸಮನ್ಸ್​ ಕೊಟ್ಟಿಲ್ಲ? ನಗ್ಮಾ ಪ್ರಶ್ನೆ

    ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ, ಅತ್ಯಾಚಾರಗಳನ್ನು ತಡೆಯುವ ನಿಟ್ಟಿನಲ್ಲಿ ‘ಆಪರೇಶನ್​ ದುರಾಚಾರಿ’ ಪ್ರಾರಂಭ ಮಾಡಲಾಗಿದೆ. ಯಾರಾದರೂ ಲೈಂಗಿಕ ಸಂಬಂಧ ಅಪರಾಧಗಳನ್ನು ಮಾಡಿದರೆ, ಸೆಕ್ಸ್​ ಕ್ರೈಂಗಳಲ್ಲಿ ಸಿಕ್ಕಿಬಿದ್ದರೆ ಅವರ ಫೋಟೊ, ಮಾಡಿದ ಅಪರಾಧದ ಉಲ್ಲೇಖ ಇರುವ ದೊಡ್ಡ ಪೋಸ್ಟರ್​​ಗಳನ್ನು ರಸ್ತೆಗಳ ಪಕ್ಕದಲ್ಲಿ ಹಾಕಲಾಗುವುದು. ಈ ಕಾರ್ಯಾಚರಣೆಯನ್ನು ಅನುಷ್ಠಾನಗೊಳಿಸಲು ಸಿಎಂ ಯೋಗಿ ಅವರೇ ನಿರ್ದೇಶನ ನೀಡಿದ್ದಾಗಿ ಸರ್ಕಾರದ ವಕ್ತಾರ ತಿಳಿಸಿದ್ದಾರೆ. ಇದನ್ನೂ ಓದಿ:  ಮಗುವಾಯಿತೆಂದು ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಮೇಘನಾ ರಾಜ್​ ಮನವಿ

    ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ನಡೆಸುವವರ ಹೆಸರು ಹೇಳಿ ಮಾನ ಕಳೆಯುವುದು, ತನ್ಮೂಲಕ ಅವರಿಗೆ ಪಾಠ ಕಲಿಸುವುದೇ ಈ ಕಾರ್ಯಾಚರಣೆಯ ಉದ್ದೇಶ ಎಂದಿದ್ದಾರೆ. (ಏಜೆನ್ಸೀಸ್​)

    ಬೆಂಗಳೂರಿಗೆ ಬರೋರು, ಬೆಂಗಳೂರಿಂದ ಬೇರೆ ಊರಿಗೆ ಹೋಗೋರು ನಾಳೆ ಹುಷಾರು!

    ಡ್ರಗ್ಸ್ ಕೇಸ್​; ಖ್ಯಾತ ನಿರೂಪಕಿ ಅನುಶ್ರೀಗೆ ಸಿಸಿಬಿ ಬುಲಾವ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts