More

    ಮಧ್ಯಮ ವರ್ಗದ ಗ್ರಾಹಕರಿಗಾಗಿ ಹೊಸ ಸ್ಮಾರ್ಟ್​ಫೋನ್​ ಬಿಡುಗಡೆ ಮಾಡಿದ ಒನ್​​ಪ್ಲಸ್​​..!

    ದೆಹಲಿ: ಮಧ್ಯಮ ವರ್ಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಹಲವಾರು ಫೋನ್​ಗಳನ್ನು ಬಿಡುಗಡೆ ಮಾಡಿರುವ ಪ್ರಸಿದ್ಧ ಒನ್​ಪ್ಲಸ್ ಕಂಪನಿಯು ತನ್ನ ನೂತನ ಸ್ಮಾರ್ಟ್​ಫೋನ್​ ಒನ್​ಪ್ಲಸ್ ನಾರ್ಡ್​-3ನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

    ಇದನ್ನೂ ಓದಿ: ವಿನಾಕಾರಣ ಜಗಳದಿಂದ ವಿಷ ಸೇವಿಸಿದ ದಂಪತಿ; ಪತ್ನಿ ಸಾವು, ಪತಿ ಚೇತರಿಕೆ

    ಗ್ರಾಹಕರಿಗೆ ಒನ್​ಪ್ಲಸ್ ನಾರ್ಡ್​-3 ಕಪ್ಪು ಮತ್ತು ತಿಳಿ ಹಸಿರು ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದ್ದು, 8GB RAM+128GB ಮತ್ತು 16GB RAM+256GB ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಎರಡು ರೂಪಾಂತರಗಳಲ್ಲಿ ದೊರೆಯಲಿದೆ. ಇದು 6.74 ಇಂಚಿನ ಸೂಪರ್ ಫೂಯಿಡ್ ಅಮೋಲ್ಡ್​​ ಡಿಸ್ಪ್ಲೇಯನ್ನು ಹೊಂದಿದೆ.
     
    ಈ ರ್ಟ್​ಫೋನ್, ಮೀಡಿಯಾ ಟೆಕ್​ ಡೈಮೆನ್ಸಿಟಿ 9000 Soc ಪ್ರೋಸೆಸರ್​ ಬೆಂಬಲದ ಜತೆಗೆ ಆಕ್ಸಿಜೆನ್​ 13.1 ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಬೆಂಬಲ ಹೊಂದಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. 80W ಸೂಪರ್​ವೂಕ್​ ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುವ ಈ ಸ್ಮಾರ್ಟ್​ಫೋನ್​ 5000mAh ಬ್ಯಾಟರಿ ಮತ್ತು USB ಟೈಪ್-ಸಿ ಚಾರ್ಜಿಂಗ್​ ಬೆಂಬಲ ಹೊಂದಿದೆ.

    ಇದನ್ನೂ ಓದಿ: ವಿಶ್ವಕಪ್​ ಬೆನ್ನಲ್ಲೇ ನಿವೃತ್ತಿ ಘೋಷಿಸಿ ಬಾಂಗ್ಲಾದೇಶ ತಂಡಕ್ಕೆ ಆಘಾತ ಮೂಡಿಸಿದ ತಮಿಮ್​ ಇಕ್ಬಾಲ್

    ಒನ್​ಪ್ಲಸ್ ನಾರ್ಡ್​-3 ಹಿಂಬದಿಯಲ್ಲಿ ಮೂರು ಕ್ಯಾಮರಾಗಳನ್ನುಹೊಂದಿದ್ದು, ಪ್ರಾಥಮಿಕ ಕ್ಯಾಮರಾ 50 ಮೆಗಾಪಿಕ್ಸೆಲ್ ಜತೆಗೆ ಸೋನಿ IMX890 ಸಂವೇದಕವನ್ನು ಒಳಗೊಂಡಿದೆ. ಇನ್ನೊಂದು ಕ್ಯಾಮರಾ 8 ಮೆಗಾಪಿಕ್ಸೆಲ್ ಸೋನಿ IMX355 ವೈಡ್ ಆಂಗಲ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಮುಂಭಾಗದಲ್ಲಿ, ಸೆಲ್ಫಿಗಾಗಿ ಮತ್ತು ವೀಡಿಯೊ ಕರೆಗಳಿಗಾಗಿ 16-ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.

    ಒನ್​ಪ್ಲಸ್ ನಾರ್ಡ್​-3 ಇನ್-ಡಿಸ್ಸೇ ಫಿಂಗರ್‌ಪ್ರಿಂಟ್‌ ಸಂವೇದಕದ ಜತೆಗೆ, ಡಾಲ್ಟಿ ಅಟ್ರ್ಯಾಸ್‌ನೊಂದಿಗೆ ಸ್ಟೀರಿಯೋ ಸ್ಪೀಕರ್‌ಗಳನ್ನು ಹೊಂದಿದ್ದು, ಇದರ ಆಡಿಯೋ ಕೇಳಲು ಉತ್ತಮವಾಗಿದೆ. ಈ ಮೊಬೈಲ್​ನ ಅಂದಾಜು ಬೆಲೆ ರೂ 34,999 ಮತ್ತು 37,999 ರೂ. ಆಗಿರಲಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts