More

    ನಾನು-ನಾನು ಎನ್ನುವವರು ಸಿಎಂ ಆಗಲ್ಲ: ಕಂದಾಯ ಸಚಿವ ಆರ್. ಅಶೋಕ್

    ಬೆಂಗಳೂರು: ನಾನು-ನಾನು ಎಂದು ಹೇಳುವ ಯಾರೂ ಮುಂದಿನ ಮುಖ್ಯಮಂತ್ರಿ ಆಗುವುದಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ರಾಷ್ಟ್ರೀಯ ನಾಯಕರು ಅವರ ಮೂಲಗಳ ಪ್ರಕಾರ ಮಾಹಿತಿ ಪಡೆಯುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
    ಸಿಎಂ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಬಹುತೇಕ ಖಚಿತಗೊಂಡಿದೆ. ಹೊಸ ಆಯ್ಕೆ ಹೈಕಮಾಂಡ್‌ಗೆ ಬಿಟ್ಟದ್ದು ಎಂದು ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

    ಸಿಎಂ ಸ್ಥಾನಕ್ಕೆ ಯಾರು ಅಭ್ಯರ್ಥಿ ಎಂಬ ಮತ್ತೊಂದು ಪ್ರಶ್ನೆಗೆ, ಮಂತ್ರಿಮಂಡಲದಲ್ಲಿ ಯಾರು ಸಕ್ರಿಯರಾಗಿ ಇದ್ದಾರೆ ಅವರ ಹೆಸರು ಇದೆ. ಯಾರ್ಯಾರು ಶಾಸಕರಿದ್ದಾರೆ ಅವರ ಹೆಸರು ಕೂಡ ಇದೆ. ಆದರೆ, ಸದ್ಯ ಸಿಎಂ ಖರ್ಚಿ ಖಾಲಿ ಇಲ್ಲ. ಹೈಕಮಾಂಡ್​ನವರು ಕರ್ನಾಟಕದ ಹಿತದೃಷ್ಟಿಯಿಂದ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು.

    ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ. ಜುಲೈ 25ರಂದು ವರಿಷ್ಠರು ಏನು ಸೂಚನೆ ನೀಡುತ್ತಾರೆ ಅದರಂತೆ ನಡೆದುಕೊಳ್ಳುತ್ತೇನೆ ಎಂದಿದ್ದಾರೆ. ಆದರೆ, ಬಿ.ಎಸ್. ಯಡಿಯೂರಪ್ಪ ಯಾವ ದಿನದಂದು ರಾಜೀನಾಮೆ ಕೊಡುತ್ತಾರೆ ಎಂಬುವುದು ಇನ್ನೂ ಅಧಿಕೃತಗೊಂಡಿಲ್ಲ ಎಂದು ಹೇಳಿದರು.

    ಕಾಶಿಯಲ್ಲಿ ಕೋಮುಸೌಹಾರ್ದ: ವಿಶ್ವನಾಥ ದೇವಸ್ಥಾನಕ್ಕೆ ಮಸೀದಿಯಿಂದಲೇ ವರ್ಗಾಯಿಸಲಾಯಿತು 1,700 ಚದರಡಿ ಸ್ಥಳ

    ಉತ್ತರಪ್ರದೇಶ ಮೂಲದ ನಕಲಿ ಶಾಪಿಂಗ್ ವೆಬ್‌ಸೈಟ್ ವಂಚಕ ಬನಶಂಕರಿಯಲ್ಲಿದ್ದ, ಸೈಬರಾಬಾದ್ ಪೊಲೀಸರ ಕೈಗೆ ಸಿಕ್ಕಿಬಿದ್ದ..

    ಧಾರಾಕಾರ ಮಳೆ, ಸೇತುವೆ ಮೇಲೆ ಹರಿಯುತ್ತಿದೆ ನಾಲ್ಕಡಿಗೂ ಹೆಚ್ಚು ನೀರು; ಶಿವಮೊಗ್ಗ-ಮಂಗಳೂರು ಹೆದ್ದಾರಿ ಬಂದ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts