More

    ಧಾರಾಕಾರ ಮಳೆ, ಸೇತುವೆ ಮೇಲೆ ಹರಿಯುತ್ತಿದೆ ನಾಲ್ಕಡಿಗೂ ಹೆಚ್ಚು ನೀರು; ಶಿವಮೊಗ್ಗ-ಮಂಗಳೂರು ಹೆದ್ದಾರಿ ಬಂದ್​…

    ಶಿವಮೊಗ್ಗ: ಮಲೆನಾಡಿನಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಧಾರಾಕಾರ ಮಳೆಗೆ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಇದೀಗ ಶಿವಮೊಗ್ಗ-ಮಂಗಳೂರು ಹೆದ್ದಾರಿ ಕೂಡ ಬಂದ್ ಆಗಿದೆ.

    ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದ ಶಿವರಾಜಪುರ ಬಳಿ ಹಳ್ಳಕ್ಕೆ ಹಿಮ್ಮುಖವಾಗಿ ನುಗ್ಗಿದ‌ ತುಂಗಾ ನದಿ ನೀರು, ಸೇತುವೆ ಮೇಲೆ ಕೂಡ ಹರಿಯಲಾರಂಭಿಸಿದೆ. ಸೇತುವೆ ಮೇಲೆ ಸುಮಾರು ನಾಲ್ಕು ಅಡಿಗೂ ಹೆಚ್ಚಿನ ಮಟ್ಟದಲ್ಲಿ ನೀರು ಹರಿಯುತ್ತಿದೆ.

    ಹೀಗೆ ನೀರು ಹರಿಯುತ್ತಿದ್ದ ಸೇತುವೆ ಮೇಲೆ ಗ್ಯಾಸ್​ ಸಿಲಿಂಡರ್ ತುಂಬಿಕೊಂಡಿದ್ದ ಲಾರಿಯೊಂದು ಚಲಾಯಿಸಿಕೊಂಡು ಹೋಗಲು ಯತ್ನಿಸಿ ಚಾಲಕ ಲಾರಿ ಸಮೇತ ಸಿಕ್ಕಿಹಾಕಿಕೊಂಡಿದ್ದಾನೆ. ತುಂಗೆಯ ರಭಸಕ್ಕೆ ಕೊಚ್ಚಿಕೊಂಡು ಹೋಗುವ ಸ್ಥಿತಿಯಲ್ಲಿರುವ ಲಾರಿಯನ್ನು ಬಳಿಕ ಅಲ್ಲೇ ಬಿಟ್ಟು ಚಾಲಕ ಸುರಕ್ಷಿತ ಸ್ಥಳಕ್ಕೆ ಸೇರಿಕೊಂಡಿದ್ದಾನೆ.

    ಇದನ್ನೂ ಓದಿ: ‘ಸದನ ಬಿಟ್ಟು ಹೋಗಿ’! ಹೇಳಿಕೆ ಪತ್ರ ಹರಿದು ಚೆಲ್ಲಾಡಿದ ಸಂಸದ ಸಸ್ಪೆಂಡ್! 

    ಇದೇ ರೀತಿ ಮಳೆ‌ ಮುಂದುವರಿದಲ್ಲಿ ನೀರಿನಲ್ಲಿ ಲಾರಿ ಕೊಚ್ಚಿ ಹೋಗುವ ಸಾಧ್ಯತೆಯೂ ಇದೆ. ಅಲ್ಲದೆ ಯಾವುದಾದರೂ ಬೇರೆ ವಾಹನ ಸೇತುವೆ ಮೇಲೆ ಸಾಗಲು ಯತ್ನಿಸಿದರೆ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುವುದರಿಂದ ಸೇತುವೆ ಮೇಲೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಪರಿಣಾಮವಾಗಿ ಶಿವಮೊಗ್ಗ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್​ ಆಗಿದೆ. ಪ್ರಯಾಣಿಕರಿಗೆ ಬೊಬ್ಬಿ ಮೂಲಕ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಸೂಚನೆ ನೀಡಲಾಗಿದೆ.

    ಇದನ್ನೂ ಓದಿ: ಮಾಮೂಲಿ ಕೊಡದ್ದಕ್ಕೆ ಸುಳ್ಳು ಕೇಸ್ ದಾಖಲಿಸಿದ್ದ ಲೇಡಿ ಇನ್​ಸ್ಪೆಕ್ಟರ್, ಸಬ್​ ಇನ್​ಸ್ಪೆಕ್ಟರ್ ಸೇರಿ ಮೂವರ ಸಸ್ಪೆಂಡ್

    VIDEO | ಪ್ರವಾಹಪೀಡಿತ ಪಟ್ಟಣದಿಂದ ಭಯಾನಕ ವಿಡಿಯೋ ವೈರಲ್!

    ಭಾರಿ ಮಳೆಗೆ ಹಳಿಗಳು ಜಲಾವೃತ: ತಾಳಗುಪ್ಪ-ಮೈಸೂರು ರೈಲು ಸಂಚಾರ ಸ್ಥಗಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts