More

    ಭಾರಿ ಮಳೆಗೆ ಹಳಿಗಳು ಜಲಾವೃತ: ತಾಳಗುಪ್ಪ-ಮೈಸೂರು ರೈಲು ಸಂಚಾರ ಸ್ಥಗಿತ

    ಶಿವಮೊಗ್ಗ: ರಾಜ್ಯದ ಹಲವೆಡೆಗಳಲ್ಲಿ ಮಳೆ ಭಾರಿ ಕೋಲಾಹಲವನ್ನೇ ಸೃಷ್ಟಿಸಿದೆ. ಶಿವಮೊಗ್ಗದಲ್ಲಿ ಕೂಡ ಧಾರಾಕಾರ ಮಳೆಯಾಗುತ್ತಿದ್ದು ರೈಲು ಹಳಿಗಳು ಸಂಪೂರ್ಣ ಜಲಾವೃತಗೊಂಡಿದೆ.

    ಈ ಹಿನ್ನೆಲೆಯಲ್ಲಿ ತಾಳಗುಪ್ಪ-ಮೈಸೂರು ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ತಾಳಗುಪ್ಪದಿಂದ ಮೈಸೂರು ಮಾರ್ಗವಾಗಿ ಇರುವ ರೈಲಿನ ಹಳಿಗಳು ಸಾಗರದ ಅನೇಕ ಕಡೆಯಲ್ಲಿ ಜಲಾವೃತಗೊಂಡಿರುವ ಹಿನ್ನೆಲೆಯಲ್ಲಿ ರೈಲು ಸಂಚಾರ ರದ್ದುಗೊಂಡಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.

    ತಾಳಗುಪ್ಪದಿಂದ 4 ಕಿಮಿ ದೂರದಲ್ಲಿ ಕಾನ್ಲೆ ಎಂಬಲ್ಲಿ ರೈಲ್ವೆ ಅಳಿಯ ಮಟ್ಟಕ್ಕೆ ನೀರು ನಿಂತಿರುವ ಕಾರಣ, ರೈಲು ಇಂದು ತಾಳಗುಪ್ಪ ನಿಲ್ದಾಣದಿಂದ ಚಲಿಸುತ್ತಿಲ್ಲ. ರಾತ್ರಿ 8-20 ರ ರೈಲು, ಮಳೆ ಕಡಿಮೆಯಾದರೆ ಸಂಚರಿಸಲಿದ್ದು, ಒಂದು ವೇಳೆ ಮಳೆ ಕಡಿಮೆಯಾಗದಿದ್ದರೆ ಸಾಗರದಿಂದಲೇ ಚಲಿಸಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

    ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪ ಸಮೀಪದ ಕಾನ್ಲೆ ಎಂಬಲ್ಲಿ ರೈಲು ಹಳಿ ಜಲಾವೃತಗೊಂಡಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಅಧಿಕ ಮಳೆಯಿಂದ ಮೈಸೂರು ತಾಳಗುಪ್ಪ ರೈಲು ತಾಳಗುಪ್ಪ ರೈಲ್ವೆ ನಿಲ್ದಾಣ ಸೇರದೆ ಸಾಗರಕ್ಕೆ ಬಂದು ತಲುಪಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts