More

    ಡ್ರಾಪ್ ಕೊಡ್ತೇನೆ ಅಂತ ಹೇಳಿ ಕರ್ಕೊಂಡು ಹೋಗಿ ರೇಪ್ ಮಾಡ್ದ; ಎರಡು ತಿಂಗಳ ಬಳಿಕ ದೂರು ಕೊಟ್ಟ ಮಹಿಳೆ

    ಕಲಬುರಗಿ: ಡ್ರಾಪ್​ ಕೊಡ್ತೇನೆ ಅಂತ ಹೇಳಿ ಮಹಿಳೆಯೊಬ್ಬರನ್ನು ತನ್ನ ವಾಹನದಲ್ಲಿ ಕರೆದುಕೊಂಡು ಹೋಗಿದ್ದ ವ್ಯಕ್ತಿ, ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅತ್ಯಾಚಾರ ನಡೆದ ಎರಡು ತಿಂಗಳ ಬಳಿಕ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ.

    ಸರ್ಕಾರಿ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆ ಸಂತ್ರಸ್ತೆಯಾಗಿದ್ದು, ಆಕೆ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಲಬುರಗಿ ಜಿಲ್ಲೆಯ ಸೇಡಂ ವಾಸವದತ್ತ ಕಂಪನಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಸೇಡಂ ತಾಲ್ಲೂಕಿನ ಇಂಜಳ್ಳಿ ಗ್ರಾಮದ ನಾಗರಾಜ್ (26) ಎಂಬಾತನೇ ಆರೋಪಿ.

    ಇದನ್ನೂ ಓದಿ: ಪರಿಚಿತನಿಂದಲೇ ವಿದ್ಯಾರ್ಥಿನಿ ಮೇಲೆ ಹಲ್ಲೆ-ಅತ್ಯಾಚಾರ ಯತ್ನ; ಮೈಸೂರಿನಲ್ಲಿ ನಡೆದ ಪ್ರಕರಣದ ಆರೋಪಿಯ ಬಂಧನ

    ಮೇ ತಿಂಗಳಲ್ಲಿ ಲಾಕ್​ಡೌನ್​ ಇದ್ದ ಸಂದರ್ಭದಲ್ಲಿ ಈ ಅತ್ಯಾಚಾರ ನಡೆದಿದೆ. ಕಚೇರಿಯಿಂದ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಾಗ, ಬಸ್​ ಇಲ್ಲದ್ದರಿಂದ ಡ್ರಾಪ್ ಕೊಡುವ ನೆಪದಲ್ಲಿ ಆರೋಪಿ ಈ ಮಹಿಳೆಯನ್ನು ತನ್ನ ವಾಹನದಲ್ಲಿ ಕರೆದುಕೊಂಡು ಹೋಗಿದ್ದ.

    ಸೇಡಂನಿಂದ ಕುರುಕುಂಟಾ ಗ್ರಾಮಕ್ಕೆ ಹೋಗುವ ಸೇತುವೆ ಕೆಳಗಡೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಮೇ 24ರಂದು ಈ ಅತ್ಯಾಚಾರ ನಡೆದಿತ್ತು. ಅದಾಗ್ಯೂ ಸುಮ್ಮನಿದ್ದ ಮಹಿಳೆ ಜುಲೈ 28ರಂದು ನಾಗರಾಜ್ ವಿರುದ್ಧ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡಿದ್ದ ಕುರುಕುಂಟಾ ಪೊಲೀಸರು ಆ. 31ರಂದು ಆರೋಪಿಯನ್ನು ಬಂಧಿಸಿದ್ದರು.

    ಒಂದೇ ಬಾರ್​ನಲ್ಲಿ ಕುಡಿದಿದ್ದರು; ಆಮೇಲೆ ನಡೆದ ಜಗಳದಲ್ಲಿ ಒಬ್ಬ ಬಾರದ ಲೋಕಕ್ಕೆ, ಇನ್ನಿಬ್ಬರು ಜೈಲುಪಾಲು…

    ಪತ್ನಿಗೆ ಭಯೋತ್ಪಾದಕರ ಸಂಪರ್ಕ?!; ಪತಿಯಿಂದಲೇ ಪೊಲೀಸರಿಗೆ ದೂರು, ಈ ಮಧ್ಯೆ ಪತ್ನಿ ನಾಪತ್ತೆ!

    17ರ ಬಾಲೆಯ ಹೊಟ್ಟೆಯೊಳಗಿತ್ತು 2 ಕೆ.ಜಿ. ಕೂದಲು; ಕೃಶವಾಗುತ್ತಲೇ ಇದ್ದವಳ ಕಾಡುತ್ತಿದೆ ವಿಚಿತ್ರ ರೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts