More

    ಉಡುಪಿ ಜಿಲ್ಲೆಯಲ್ಲಿ ಬೋನಿಗೆ ಬಿತ್ತು ಮತ್ತೊಂದು ಚಿರತೆ; ನಿದ್ರೆ ಕೆಟ್ಟಿದ್ದ ಜನರೀಗ ನಿರಾಳ..

    ಉಡುಪಿ: ಉಡುಪಿ ಜಿಲ್ಲೆಯಲ್ಲಿ ಐದು ದಿನಗಳ ಹಿಂದಷ್ಟೇ ಒಂದು ಚಿರತೆಯನ್ನು ಬೋನಿಗೆ ಹಾಕಿ ಕಾಡಿಗೆ ಬಿಟ್ಟಿದ್ದ ಅರಣ್ಯಾಧಿಕಾರಿಗಳು, ಮತ್ತೊಂದು ಕಾರ್ಯಾಚರಣೆ ನಡೆಸಿ ಇನ್ನೊಂದು ಚಿರತೆಯನ್ನು ಬೋನಿಗೆ ಕೆಡವಿದ್ದಾರೆ. ಈ ಮೂಲಕ ಚಿರತೆಯಿಂದ ನಿದ್ರೆ ಕೆಟ್ಟಿದ್ದ ಸ್ಥಳೀಯರು ಸದ್ಯಕ್ಕೆ ನಿರಾಳರಾಗಿದ್ದಾರೆ.

    ಕಾಪು ತಾಲೂಕಿನ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡು ಮರೆಯಾಗಿ ಭಯ ಹುಟ್ಟಿಸಿದ್ದ ಚಿರತೆಯಿಂದಾಗಿ ಸ್ಥಳೀಯರು ನಿದ್ರೆ ಕೆಡುವಂತಾಗಿತ್ತು. ಕಾಪುವಿನ ಮಜೂರು ಗ್ರಾಮ ಪಂಚಾಯತ್​ ಪಾದೂರು ಕುರಾಲು ಎಂಬಲ್ಲಿನ ರೆನ್ನಿ ಕುಂದರ್ ಎಂಬವರ ಮನೆ ಬಳಿ ಈ ಚಿರತೆ ಓಡಾಟ ನಡೆಸುತ್ತಿತ್ತು. ಇದರಿಂದ ಸುತ್ತಮುತ್ತಲ ಸ್ಥಳೀಯರಲ್ಲಿ ಆತಂಕ ಉಂಟಾಗಿತ್ತು.

    ಚಿರತೆಯ ಓಡಾಟದ ಕುರಿತು ಸ್ಥಳೀಯರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರು. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ರೆನ್ನಿ ಕುಂದರ್ ಅವರ ಮನೆ ಬಳಿ ಭಾನುವಾರ ಬೋನನ್ನು ಇರಿಸಿದ್ದರು. ಅದೇ ದಿನ ತಡರಾತ್ರಿ ಚಿರತೆ ಬೋನಿಗೆ ಬಿದ್ದಿದೆ. ನಾಲ್ಕು ವರ್ಷ ಪ್ರಾಯದ ಈ ಗಂಡು ಚಿರತೆಯನ್ನು ಕಾರ್ಯಾಚರಣೆ ಮೂಲಕ ಸೆರೆ ಹಿಡಿದಿರುವ ಅರಣ್ಯಾಧಿಕಾರಿಗಳು ಮುಂದಿನ ಸೂಕ್ತ ಕ್ರಮ ಜರುಗಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಜೀವನ್ ದಾಸ್ ಶೆಟ್ಟಿ, ಗುರುಪ್ರಸಾದ್, ಅರಣ್ಯ ರಕ್ಷಕ ಎಚ್. ಜಯರಾಮ ಶೆಟ್ಟಿ ಮತ್ತಿತರು ಭಾಗಿಯಾಗಿದ್ದರು.

    ಇದನ್ನೂ ಓದಿ: ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!

    ಐದು ದಿನಗಳ ಹಿಂದೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಡ್ಲಾಡಿಯಲ್ಲಿಯೂ ಒಂದು ಚಿರತೆ ಕಾಣಿಸಿಕೊಂಡಿತ್ತು. ಮಂಗಳವಾರ ಬೆಳಗಿನ ಜಾವ ಆಹಾರ ಅರಸಿಕೊಂಡು ಬಂದ 5 ವರ್ಷದ ಗಂಡು ಚಿರತೆಯೊಂದು ಇಲ್ಲಿನ ಚಂದ್ರ ಶೆಟ್ಟಿಯವರ ಮನೆ ಮುಂದಿನ ನೀರಿನ ಟ್ಯಾಂಕ್​ ಒಳಗೆ ಬಿದ್ದಿತ್ತು. ಮಧ್ಯಾಹ್ನ ಮನೆಯವರು ಗಮನಿಸಿ ಅರಣ್ಯಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ರಾತ್ರಿಯ ಸುಮಾರಿಗೆ ಚಿರತೆಯನ್ನು ರಕ್ಷಿಸಿ ಕಾಡಿಗೆ ಬಿಡಲಾಗಿತ್ತು.

    ನಟಿ ವಿಜಯಲಕ್ಷ್ಮೀಗೆ ಮತ್ತೊಂದು ಸಂಕಷ್ಟ; ಸಹೋದರಿಗಾಗಿ ಶಿವಣ್ಣನ ಸಹಾಯ ಯಾಚನೆ..

    ಫಸ್ಟ್ ಡೋಸ್​ ಲಸಿಕೆ ತೆಗೆದುಕೊಳ್ಳುತ್ತಿದ್ದಂತೆ ಫಸ್ಟ್​ ಹೀಗೇನಾದ್ರೂ ಮಾಡ್ಬಿಟ್ಟೀರಾ ಜೋಕೆ..!!!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts