More

    ಇವರೇನು ಮನುಷ್ಯರಾ? ಕೊರೆಯೋ ಚಳಿಯಲ್ಲೂ ವಯಸ್ಸಾದವರನ್ನು ನಗರದಿಂದ ಹೊರದಬ್ಬಲು ಯತ್ನ!

    ಇಂದೋರ್​: ಎಲ್ಲಿದೆ ಮಾನವೀಯತೆ? ಎಂದು ಪ್ರಶ್ನಿಸುವ ಅನೇಕ ಘಟನೆಗಳು ಪ್ರತಿನಿತ್ಯ ಬೆಳಕಿಗೆ ಬರುತ್ತಿರುವುದು ದುರಾದೃಷ್ಟವೇ ಸರಿ. ಇಂಥದ್ದೇ ಘಟನೆ ದೇಶದ ಸ್ವಚ್ಛ ನಗರದ ಗರಿಮೆಯನ್ನು ಹೊಂದಿರುವ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದ್ದು, ಇಲ್ಲಿನ ಮುನ್ಸಿಪಾಲಿಟಿ ನೌಕರರು ವಯಸ್ಸಾದವರನ್ನು ಹಾಗೂ ನಿರಾಶ್ರಿತರನ್ನು ವಾಹನದಲ್ಲಿ ತುಂಬಿಕೊಂಡು ಹೋಗಿ ನಗರದ ಹೊರವಲಯದಲ್ಲಿ ಡಂಪಿಂಗ್​ ಮಾಡುವ ಪ್ರಯತ್ನವನ್ನ ಮಾಡಿರುವುದ ಜನಾಕ್ರೋಶಕ್ಕೆ ಕಾರಣವಾಗಿದೆ.

    ನಿರಾಶ್ರಿತರನ್ನು ಹೊರಹಾಕುವ ನಿರ್ಧಾರವನ್ನು ಅಲ್ಲಿನ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ. ನಗರದ ಒಳಗಡೆಯಿದ್ದ ವಯಸ್ಸಾದ ನಿರಾಶ್ರಿತರನ್ನು ವಾಹನವೊಂದರಲ್ಲಿ ತುಂಬಿಕೊಂಡು ಹೋಗಿ ನಗರದ ಹೊರವಲಯದ ಹೆದ್ದಾರಿ ಪಕ್ಕದಲ್ಲಿ ಬಿಡಲು ಮುಂದಾಗಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿದ ಹೆದ್ದಾರಿ ಪಕ್ಕದ ಗ್ರಾಮಸ್ಥರು, ಮುನ್ಸಿಪಾಲ್​ ನೌಕರರ ಜತೆ ವಾಗ್ವಾದಕ್ಕೆ ಇಳಿದರು. ನಿರಾಶ್ರಿತರನ್ನು ಮತ್ತೆ ಅವರ ಜಾಗಕ್ಕೆ ಬಿಡುವಂತೆ ಒತ್ತಾಯಿಸಿದರು. ಕೊನೆಗೆ ಒತ್ತಾಯಕ್ಕೆ ಮಣಿದ ನೌಕರರು ನಿರಾಶ್ರಿತರನ್ನು ವಾಪಸ್ಸು ಕರೆತಂದು ಅವರ ಜಾಗಕ್ಕೆ ಬಿಟ್ಟರು.

    ಇದನ್ನೂ ಓದಿರಿ: ಪ್ರಿಯಕರನೊಂದಿಗೆ ಓಡಿ ಹೋಗುವುದಕ್ಕಾಗಿ ಎರಡು ವರ್ಷದ ಕಂದನನ್ನು ಗೋಡೆಗೆ ಗುದ್ದಿ ಕೊಂದ ಪಾಪಿ ಅಮ್ಮ!

    ಮೊದಲೇ ಚಳಿಗಾಲ ಆಗಿರುವುದರಿಂದ ಈ ರೀತಿ ದಿಢೀರನೇ ನಗರದ ಹೊರವಲಯದಲ್ಲಿ ತಂದು ಬಿಟ್ಟರೆ ವಯಸ್ಸಾದವರು ಏನು ತಾನೇ ಮಾಡಬೇಕು? ನಗರದಲ್ಲಿ ಯಾವುದೋ ಒಂದು ಬೆಚ್ಚನೆಯ ಸ್ಥಳವನ್ನು ಸೇರಿಕೊಳ್ಳುತ್ತಿದ್ದರು. ಆದರೆ, ಸರ್ಕಾರದ ಈ ನಡೆಯಿಂದಾಗಿ ಮಾನವೀಯತೆಗೆ ಕೊಡಲಿ ಪೆಟ್ಟು ಬಿದ್ದಂತಾಗಿದೆ.

    ಮುನ್ಸಿಪಾಲ್​ ನೌಕರರು ನಿರಾಶ್ರಿತರನ್ನು ಕೆಳಗಿಳಿಸುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್​ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ವೈರಲ್​ ಆಗಿದ್ದು, ಸರ್ಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ, ನಿರಾಶ್ರಿತರನ್ನು ಕರೆತಂದು ಹೊರವಲಯದ ಹೆದ್ದಾರಿಯ ಪಕ್ಕದಲ್ಲಿ ಬಿಟ್ಟು ಹೋಗುತ್ತಿದ್ದಾರೆ. ಇವರಿಗೆ ಮಾನವೀಯತೆ ಇದೆಯಾ? ಎಂದು ವ್ಯಕ್ತಿಯೊಬ್ಬ ಟೀಕಿಸುತ್ತಿರುವುದು ವಿಡಿಯೋದಲ್ಲಿದೆ. ಇನ್ನೊಂದು ವಿಡಿಯೋದಲ್ಲಿ ತೀವ್ರ ಆಕ್ರೋಶದ ಬಳಿ ಎಲ್ಲರನ್ನೂ ಮರಳಿ ಅವರ ಜಾಗಕ್ಕೆ ಬಿಟ್ಟ ದೃಶ್ಯವಿದೆ.

    ಈ ಅಮಾನವೀಯ ಘಟನೆ ಬಗ್ಗೆ ಮುನ್ಸಿಪಲ್​ ಕಾರ್ಪೊರೇಷನ್​ ಹೆಚ್ಚುವರಿ ಆಯುಕ್ತ ಅಭಯ್​ ರಾಜಂಗಾಂಕರ್​ನನ್ನು ಕೇಳಿದ್ರೆ ಆರೋಪವನ್ನು ಅಲ್ಲಗೆಳೆದು, ರಾತ್ರಿ ಉಳಿದುಕೊಳ್ಳಲು ಒಳ್ಳೆಯ ವ್ಯವಸ್ಥೆ ಮಾಡುವ ಬಗ್ಗೆ ನೌಕರರು ನಿರಾಶ್ರಿತರೊಂದಿಗೆ ಮಾತನಾಡುತ್ತಿದ್ದರು ಎಂದು ಸಮರ್ಥನೆ ನೀಡಿದರು.

    ಇದನ್ನೂ ಓದಿರಿ: ಸೋದರತ್ತೆಯನ್ನೇ ರೇಪ್​ ಮಾಡಲು ಪ್ರಯತ್ನಿಸಿದ ಯುವಕ! ಕುತ್ತಿಗೆ ಕೊಯ್ದು ಕೊಂದೇ ಬಿಟ್ಟ

    ಪ್ರತಿಪಕ್ಷ ಕಾಂಗ್ರೆಸ್ ಇದೇ ಘಟನೆ ಮುಂದಿಟ್ಟುಕೊಂಡು ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರನ್ನು ಸಹ ಬಿಜೆಪಿ ಪಕ್ಷವು ಹೊರಹಾಕುತ್ತಿದೆ ಎಂದು ವ್ಯಂಗ್ಯವಾಡಿದೆ. ಹೀಗಾಗಿ ಸರ್ಕಾರದ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. (ಏಜೆನ್ಸೀಸ್​)

    ಸ್ಕೂಟರ್​ನಲ್ಲಿ ಶವ ಕೂರಿಸ್ಕೊಂಡು ಬಂದು ರಸ್ತೆ ಬದಿ ಎಸೆದ ಯುವಕರು: ಬರ್ತಡೇ ಪಾರ್ಟಿಗೆ ಹೋದವಳು ದುರಂತ ಅಂತ್ಯ!

    ತನ್ನನ್ನು ಭೇಟಿಯಾಗಲು ಮಗಳೊಂದಿಗೆ ಬಂದವಳನ್ನು ಅವನು ಚುಚ್ಚಿ ಚುಚ್ಚಿ ಕೊಂದ; ಗಂಡ-ಹೆಂಡತಿ-ಮಗಳು ಮತ್ತು ಅವನು..!!!

    ತನ್ನಿಂದ ಗರ್ಭಿಣಿಯಾದ ಬಾಲಕಿಯನ್ನು ಮದ್ವೆಯಾಗ್ತೇನೆಂದ ವಿವಾಹಿತ- ಅಮ್ಮನ ಸಮ್ಮತಿ; ಕೋರ್ಟ್​ ನೀಡಿತು ಜಾಮೀನು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts