More

    ರಸ್ತೆಗುಂಡಿಗೆ ಅಂಗವಿಕಲ ವೃದ್ಧ ಬಲಿ; ಜಲಮಂಡಳಿಯ ಕಳಪೆ ಕಾಮಗಾರಿಯೇ ಸಾವಿಗೆ ಕಾರಣವಾಯಿತಾ?

    ಬೆಂಗಳೂರು: ಕಾಮಾಕ್ಷಿಪಾಳ್ಯದ ಮಂಗಮ್ಮನಪಾಳ್ಯ ಮುಖ್ಯ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ವೃದ್ಧರೊಬ್ಬರು ಗುಂಡಿ ತಪ್ಪಿಸಲು ಹೋಗಿ ಆಯತಪ್ಪಿ ರಸ್ತೆಗೆ ಬಿದ್ದು ಮೃತಪಟ್ಟಿದ್ದಾರೆ. ಮೈಕೋ ಲೇಔಟ್‌ನ ಬಿಸ್ಮಿಲ್ಲಾನಗರದ ಖುರ್ಷಿದ್ ಅಹಮ್ಮದ್ (65) ಮೃತಪಟ್ಟವರು. ಮಂಗನಹಳ್ಳಿ ಮುಖ್ಯರಸ್ತೆಯಲ್ಲಿ ಸೋಮವಾರ ರಾತ್ರಿ ದುರ್ಘಟನೆ ಸಂಭವಿಸಿದೆ.

    ಖುರ್ಷಿದ್ ನಗರದ ಮಸೀದಿಯೊಂದರ ಬಳಿ ಟೀ ಹಾಗೂ ಸುಗಂಧ ದ್ರವ್ಯ ಮಾರಾಟ ಮಾಡುತ್ತಿದ್ದರು. ಅವರು ಅಂಗವಿಕಲರಾಗಿದ್ದು, ಮೂರು ಚಕ್ರದ ಸ್ಕೂಟರ್‌ನಲ್ಲಿ ಓಡಾಡುತ್ತಿದ್ದರು. ಬೆಂಗಳೂರಿನ ಬಿಸ್ಮಿಲ್ಲಾ ನಗರದಲ್ಲಿ ಒಬ್ಬರೇ ವಾಸವಾಗಿದ್ದರು. ಅವರಿಗೆ 2 ಗಂಡು ಹಾಗೂ ನಾಲ್ವರು ಹೆಣ್ಣು ಮಕ್ಕಳಿದ್ದು, ಪತ್ನಿ ಹಾಗೂ ಮಕ್ಕಳು ಹರಿಯಾಣದಲ್ಲಿ ವಾಸವಾಗಿದ್ದಾರೆ.

    ಇದನ್ನೂ ಓದಿ: ಮೂರು ದಿನ ಮನೆಯೊಳಗೇ ಇತ್ತು ಕಾಳಿಂಗ ಸರ್ಪ!; ಬರೋಬ್ಬರಿ 7 ಅಡಿ ಉದ್ದದ ಉರಗ..

    ಖುರ್ಷಿದ್ ಅಹಮ್ಮದ್ ಎಂದಿನಂತೆ ತಮ್ಮ ಕೆಲಸ ಮುಗಿಸಿಕೊಂಡು ಸ್ಕೂಟರ್‌ನಲ್ಲಿ ಉಲ್ಲಾಳ ಕಡೆಯಿಂದ ಮಂಗನಹಳ್ಳಿ ಮುಖ್ಯರಸ್ತೆ ಮೂಲಕ ಮೈಕೋ ಲೇಔಟ್ ಕಡೆಗೆ ಬರುತ್ತಿದ್ದರು. ಮಂಗನಹಳ್ಳಿ ಮುಖ್ಯ ರಸ್ತೆಯಲ್ಲಿ ನೀರು ತುಂಬಿದ್ದರಿಂದ ಗುಂಡಿ ಇರುವುದು ಗೊತ್ತಾಗದೆ ಅದರ ಮೇಲೆ ಸ್ಕೂಟರ್ ಚಲಾಯಿಸಿದ್ದರು. ಪರಿಣಾಮ ಸ್ಕೂಟರ್ ರಸ್ತೆಗೆ ಬಿದ್ದು ಇವರ ತಲೆಗೆ ಗಂಭೀರವಾದ ಗಾಯಗಳಾಗಿದ್ದವು. ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲು ಮುಂದಾದ ವೇಳೆ ಖುರ್ಷಿದ್ ಮೃತಪಟ್ಟಿದ್ದರು.

    ಇದನ್ನೂ ಓದಿ: ಎರಡನೇ ಮದ್ವೆಯಾಗಿ ಹೊಸ ಜೀವನದ ಕನಸು ಕಂಡಿದ್ದವಳು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ಯಾಗ್ ಕದ್ದು ಜೈಲುಪಾಲಾದ್ಲು…

    ಮಂಗನಹಳ್ಳಿ ಮುಖ್ಯರಸ್ತೆಯಲ್ಲಿ ಜಲಮಂಡಳಿ ಸಿಬ್ಬಂದಿ ಒಳಚರಂಡಿ ದುರಸ್ತಿಗಾಗಿ ಇತ್ತೀಚೆಗೆ ಇಡೀ ರಸ್ತೆಯನ್ನು ಅಗೆದಿದ್ದರು. ಅಗೆದ ರಸ್ತೆಯನ್ನು ಸರಿಯಾಗಿ ಕಾಮಗಾರಿ ನಡೆಸದೆ ಮುಚ್ಚಿದ ಪರಿಣಾಮ ರಸ್ತೆಯಲ್ಲಿ ಗುಂಡಿ ಬಿದ್ದಿತ್ತು. ಕಳೆದ ವಾರದಿಂದ ನಿರಂತರ ಮಳೆಯಾಗುತ್ತಿರುವ ಪರಿಣಾಮ ರಸ್ತೆಯ ಗುಂಡಿಗಳೆಲ್ಲ ನೀರಿನಿಂದ ತುಂಬಿದ್ದವು ಎಂದು ತಿಳಿದು ಬಂದಿದೆ. ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸ್ನಾನಕ್ಕೆಂದು ಹೋಗಿದ್ದ ಎಂಬಿಬಿಎಸ್​ ವಿದ್ಯಾರ್ಥಿನಿ ಸಾವು; 2 ಗಂಟೆ ಬಳಿಕ ಬಾತ್​ರೂಮ್​ ಬಾಗಿಲು ಮುರಿದು ನೋಡಿದ ಮನೆಯವರಿಗೆ ಶಾಕ್​!

    ಇವಳು ಊರಿನವರ ನಿದ್ದೆ ಕೆಡಿಸಿದ ಮಹಿಳೆ; 40 ವರ್ಷಗಳಿಂದ ನಿದ್ರೆಯನ್ನೇ ಮಾಡಿಲ್ವಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts