More

    ಕಲಾವಿದರ ಪೋಷಣೆ, ರಕ್ಷಣೆ ಸರ್ಕಾರದ ಹೊಣೆ

    ಹಗರಿಬೊಮ್ಮನಹಳ್ಳಿ: ಬಡ ಕಲಾವಿದರಿಗೆ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ ವಿಶೇಷ ಯೋಜನೆ ರೂಪಿಸಬೇಕು. ಆ ಮೂಲಕ ಸಾಂಸ್ಕೃತಿಕ ಕಲಾ ತಂಡಗಳನ್ನು ಪ್ರೋತ್ಸಾಹಿಸಬೇಕು ಎಂದು ತಾಪಂ ಮಾಜಿ ಸದಸ್ಯ ಮೈನಳ್ಳಿ ಪ್ರಭಾಕರ ಹೇಳಿದರು.

    ಇದನ್ನೂ ಓದಿ: ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ

    ತಾಲೂಕಿನ ಸೊನ್ನ ಗ್ರಾಮದಲ್ಲಿ ಶ್ರೀಗೊರವಪ್ಪ ಸಾಂಸ್ಕೃತಿಕ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ಗೊರವಪ್ಪನವರ ನೃತ್ಯ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಲೆಯನ್ನೇ ನಂಬಿ ಕೆಲ ಕಲಾವಿದರು ಜೀವನ ಸಾಗಿಸುತ್ತಿದ್ದಾರೆ.

    ಇತ್ತೀಚೆಗೆ ಸೂಕ್ತ ವೇದಿಕೆಗಳು ಸಿಗದೇ ಕುಟುಂಬ ನಿರ್ವಹಣೆಗಾಗಿ ಬಹುತೇಕರು ಬೇರೆ ವೃತ್ತಿಗಳನ್ನು ಹುಡುಕುತ್ತ ವಲಸೆ ಹೋಗುತ್ತಿದ್ದಾರೆ. ಮುಂದಿನ ಪೀಳಿಗೆಗೆ ಕಲೆಗಳ ಬಗ್ಗೆ ಕಥೆಗಳ ಮೂಲಕ ತಿಳಿಸಬೇಕಾಗುತ್ತದೆ. ಹಾಗಾಗೀ ರಾಜ್ಯ ಸರ್ಕಾರ ಕಲಾವಿದರ ಪೋಷಣೆ ಮತ್ತು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.

    ಸೊನ್ನ ಗ್ರಾಪಂ ಉಪಾಧ್ಯಕ್ಷೆ ಎಚ್.ನಿಂಗಮ್ಮ , ಶ್ರೀಗೊರವಪ್ಪ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎಸ್.ನಿಂಗನಗೌಡ್ರು, ಗ್ರಾಪಂ ಸದಸ್ಯರಾದ ಎಚ್.ಮಹಾಂತೇಶ, ಎಚ್.ಪ್ರಕಾಶ್, ಮುಖಂಡರಾದ ಜಿ.ಎಂ.ಗುರುವಯ್ಯ, ಎಂ.ನಿಂಗಣ್ಣ, ಎಂ.ಶಿವರಾಜ್, ಜಿ.ಮುದಿಯಪ್ಪ,

    ಬಿ.ಚಂದ್ರಗೌಡ, ಎಚ್.ಜಾತಪ್ಪ, ಸರ್ಕಾರಿ ಪ್ರೌಢಶಾಲೆ ಎಸ್ಡಿಎಂಸಿ ಅಧ್ಯಕ್ಷ ಕೆ.ನಾಗಪ್ಪ, ಜನನಿ ಕಲಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎ.ಕೇಶವಮೂರ್ತಿ, ಕಲಾವಿದ ಮೋರಿಗೇರಿ ಮಂಜುನಾಥ, ಎಚ್.ಗುಡ್ಡಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts