More

    ಮೇಲ್ವರ್ಗದವನ ಹಿತ್ತಿಲಲ್ಲಿದ್ದ ಹೂ ಕಿತ್ತಿದ್ದಕ್ಕೆ ನಾಯ್ಕ್​ ಸಮುದಾಯದ 40 ಕುಟುಂಬಗಳಿಗೆ ಬಹಿಷ್ಕಾರ…!

    ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ ಅಸ್ಪೃಶ್ಯತೆ ಇಂದಿಗೂ ಜಾರಿಯಲ್ಲಿದೆ ಎನ್ನುವುದಕ್ಕೆ ಮತ್ತೊಂದು ನಿದರ್ಶನ ಬೆಳಕಿಗೆ ಬಂದಿದೆ. 15 ವರ್ಷದ ಬಾಲಕಿಯೊಬ್ಬಳು ಮೇಲ್ವರ್ಗದವನ ಮನೆಯ ಹಿತ್ತಲಿನಲ್ಲಿದ್ದ ಹೂಗಳನ್ನು ಕಿತ್ತಿದ್ದಕ್ಕೆ ನಾಯ್ಕ್​ ಸಮುದಾಯದ ನಲ್ವತ್ತು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ.

    ಈ ಘಟನೆ ಎರಡು ತಿಂಗಳ ಹಿಂದಿನದು. ಒಂದು ಕುಟುಂಬ ಇದನ್ನು ಪ್ರಶ್ನಿಸಿದ್ದಕ್ಕೆ ಅಂದಿನಿಂದ ಮಾತುಕತೆ, ಚರ್ಚೆ, ವಾಗ್ವಾದಗಳು ನಡೆದು ಪರಿಸ್ಥಿತಿ ವಿಕೋಪಕ್ಕೆ ತಲುಪಿದೆ. ಊರಿನ 800 ಕುಟುಂಬಗಳ ಪೈಕಿ ಯಾರೊಬ್ಬರು ಇವರ ಜತೆ ಮಾತನಾಡುತ್ತಿಲ್ಲ ಎಂದು ದೂರಲಾಗಿದೆ.

    ಓಡಿಶಾದ ದೇನ್​ಕಾನಲ್​ ಜಿಲ್ಲೆಯ ತಮುಸಿಂಗ್​ ಪೊಲೀಸ್​ ಠಾಣೆ ವ್ಯಾಪ್ತಿಯ ಕಾಂತಿಯೋ ಕಾಟೇನಿ ಗ್ರಾಮದ ಘಟನೆಯಿದು. 15 ದಿನಗಳಿಂದ ತಮಗೆ ಸಾಮಾಜಿಕ ಬಹಿಷ್ಕಾರ ವಿಧಿಸಲಾಗಿದೆ ಎಂದು ನಾಯ್ಕ್​ ಸಮುದಾಯದ ಸದಸ್ಯರು ನೀಡಿರುವ ದೂರಿನಲ್ಲಿ ಹೇಳಿದ್ದಾರೆ.

    ಇದನ್ನೂ ಓದಿ; ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗೆ ಮಗನನ್ನು 105 ಕಿ.ಮೀ. ದೂರದ ಕೇಂದ್ರಕ್ಕೆ ಸೈಕಲ್​ನಲ್ಲಿ ಕರೆತಂದ ತಂದೆ..! 

    ಪ್ರಕರಣ ತಣ್ಣಗಾಗಲೆಂದು ಹೂ ಕಿತ್ತಿದ್ದಕ್ಕೆ ಕೂಡಲೇ ಕ್ಷಮೆ ಕೇಳಿದ್ದೇವೆ. ಆದರೂ ನಂತರದ ಘಟನೆಗಳು, ಸಂಧಾನ ಮಾತುಕತೆ ಬಳಿಕ ನಮಗೆ ಬಹಿಷ್ಕಾರ ವಿಧಿಸಿದ್ದಾರೆ ಎಂದು ಬಾಲಕಿಯ ತಂದೆ ನಿರಂಜನ ನಾಯ್ಕ್​ ಹೇಳಿದ್ದಾರೆ.

    ಊರಿನ ಅಂಗಡಿಯಲ್ಲಿ ಅಗತ್ಯ ದಿನಸಿ ನೀಡುತ್ತಿಲ್ಲ. ಯಾರೂ ಕೆಲಸಕ್ಕೆ ಕರೆಯುತ್ತಿಲ್ಲ. ಊರಿನಲ್ಲಿ ನಡೆಯುವ ಮದುವೆ ಇತ್ಯಾದಿ ಸಮಾರಂಭದಲ್ಲಿ ಪಾಲ್ಗೊಳ್ಳುವಂತಿಲ್ಲ. ಶಾಲೆಯಲ್ಲಿರುವ ನಮ್ಮ ಸಮುದಾಯದ ಶಿಕ್ಷಕರೇ ಮಕ್ಕಳನ್ನು ಬೇರೆಡೆಗೆ ಸೇರಿಸಿ ಎನ್ನುತ್ತಿರುವುದು ದುರಂತ ಎನ್ನುತ್ತಾರೆ ದಲಿತರು.

    ಇದನ್ನೂ ಓದಿ; ಶುಭಸುದ್ದಿ…! ಮೋದಿ ಬಯಸಿದಲ್ಲಿ ತುರ್ತು ಬಳಕೆಗೆ ಸಜ್ಜಾಗುತ್ತೆ ದೇಶಿಯ ಕರೊನಾ ಲಸಿಕೆ 

    ಅವರೊಂದಿಗೆ ಯಾರೂ ಮಾತನಾಡದಂತೆ ನಿರ್ಣಯಿಸಿರುವುದು ನಿಜ ಎನ್ನುವ ಗ್ರಾಮದ ಸರ್​ಪಂಚ್​, ಉಳಿದೆಲ್ಲ ಆರೋಪಗಳು ಸತ್ಯಕ್ಕೆ ದೂರ ಎನ್ನುತ್ತಾರೆ. ಅವರು ಮಾಡಿದ ತಪ್ಪಿನಿಂದಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ ಎನ್ನುವುದು ಇನ್ನೊಬ್ಬ ಮುಖಂಡನ ಆರೋಪ.

    ಈ ನಡುವೆ ಸ್ಥಳೀಯಾಡಳಿತ ಸಮಸ್ಯೆಯನ್ನು ಬಗೆಹರಿಸಲು ಶ್ರಮಿಸುತ್ತಿದ್ದು, ಪರಿಹಾರ ಕಾಣದಿದ್ದರೆ, ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ಕೆಲಸ ಕಳೆದುಕೊಂಡಿದ್ದೀರಾ…? ಸರ್ಕಾರವೇ ಕೊಡುತ್ತೆ ಮೂರು ತಿಂಗಳ ಸಂಬಳ; ಅರ್ಹತೆಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts