More

    ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗೆ ಮಗನನ್ನು 105 ಕಿ.ಮೀ. ದೂರದ ಕೇಂದ್ರಕ್ಕೆ ಸೈಕಲ್​ನಲ್ಲಿ ಕರೆತಂದ ತಂದೆ..!

    ತಂದೆಗಿದ್ದದ್ದು ಒಂದೇ ಕಾಳಜಿ…! ಮಗನ ಒಂದು ವರ್ಷದ ಶೈಕ್ಷಣಿಕ ವರ್ಷ ಹಾಳಾಗಬಾರದು. ಇದಕ್ಕಾಗಿ ಆತನ ಪರೀಕ್ಷೆ ಬರೆಯಲೇ ಬೇಕು. ಆದರೆ, ಕೋವಿಡ್​19ನಿಂದಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೇ ಇಲ್ಲದಿರುವಾಗ ಹಾಜರಾಗುವುದಾದರೂ ಹೇಗೆ?

    ಮಧ್ಯಪ್ರದೇಶದ ಧಾರ್​ ಜಿಲ್ಲೆಯ ಮನವಾರ್​ ತಾಲೂಕಿನ ಬೇಡಿಪುರ ಗ್ರಾಮದ ನಿವಾಸಿ ಶೋಭ್​ರಾಮ್​ ಮಗನನ್ನು ತನ್ನೂರಿನಿಂದ 105 ಕಿ.ಮೀ. ದೂರದಲ್ಲಿದ್ದ ಜಿಲ್ಲಾಕೇಂದ್ರವಾದ ಧಾರ್​ಗೆ ಸೈಕಲ್​ನಲ್ಲಿಯೇ ಕರೆತಂದಿದ್ದಾರೆ. ಈ ದೂರವನ್ನು ಅವರು ಎರಡು ದಿನಗಳಲ್ಲಿ ಕ್ರಮಿಸಿದ್ದಾರೆ.

    ಇದನ್ನೂ ಓದಿ; ಶುಭಸುದ್ದಿ…! ಮೋದಿ ಬಯಸಿದಲ್ಲಿ ತುರ್ತು ಬಳಕೆಗೆ ಸಜ್ಜಾಗುತ್ತೆ ದೇಶಿಯ ಕರೊನಾ ಲಸಿಕೆ 

    ಊರಿನಿಂದ ಹೊರಟು ರಾತ್ರಿ ಮನ್​ವಾರ್​ ಪಟ್ಟಣದಲ್ಲಿ ತಂಗಿದ್ದರು. ಅಲ್ಲಿಂದ ಬೆಳಗ್ಗೆ ಸೈಕಲ್​ ತುಳಿಯುವುದನ್ನು ಮುಂದುವರಿಸಿದ ತಂದೆ, ಪರೀಕ್ಷೆ ಆರಂಭವಾಗುವ ಹೊತ್ತಿಗೆ ಎಕ್ಸಾಂ ಸೆಂಟರ್​ ತಲುಪಿಕೊಂಡಿದ್ದಾರೆ.

    ಊರಿನಿಂದ ಬರೋಕೆ ಬಸ್​ಗಳಿಲ್ಲ. ಬೇರೆ ವಾಹನಗಳಲ್ಲಿ ಬರಲು ದುಡ್ಡಿರಲಿಲ್ಲ. ಹೀಗಾಗಿ ಮಗನನ್ನು ಸೈಕಲ್​ನಲ್ಲಿ ಕರೆ ತಂದಿದ್ದೇನೆ ಎನ್ನುತ್ತಾರೆ 38 ವರ್ಷದ ಶೋಭ್​ರಾಮ್​. ನನಗೆ ಶಿಕ್ಷಣದ ಮಹತ್ವದ ಅರಿವಿದೆ. ಆತನ ಒಂದು ಹಾಳಾಗುವುದು ಬೇಡ ಎಂಬುದು ನನ್ನ ಉದ್ದೇಶ. ಆದ್ದರಿಂದ ಅಷ್ಟು ದೂರದಿಂದ ಸೈಕಲ್​ ತುಳಿದುಕೊಂಡು ಬಂದಿದ್ದೇನೆ ಎಂದು ಹೇಳುತ್ತಾರೆ.

    ಇದನ್ನೂ ಓದಿ; ಸರ್ಕಾರಿ ಉದ್ಯೋಗಕ್ಕೆ ಒಂದೇ ಅರ್ಹತಾ ಪರೀಕ್ಷೆ; ಒಂದೇ ನೇಮಕಾತಿ ಪ್ರಾಧಿಕಾರ; ಕೇಂದ್ರ ಸಂಪುಟ ಸಮ್ಮತಿ

    ಬೇರಾರಿಂದಲೂ ಸಹಾಯ ಸಿಗಲಿಲ್ಲ ಎಂದು ನೋಮದು ನುಡಿಯುವ ಶೋಭ್​ರಾಮ್​, ಪರೀಕ್ಷೆ ಮುಗಿಯುವ ತನಕ 2-3 ದಿನ ತಂಗಬೇಕಾದ ಅನಿವಾರ್ಯತೆ ಇರುವುದರಿಂದ ಊಟವನ್ನು ಊರಿನಿಂದಲೇ ಕಟ್ಟಿಕೊಂಡು ಬಂದಿದ್ದಾರೆ.  ತಂದೆ ತನಗಾಗಿ ಇಷ್ಟು ಕಷ್ಟಪಟ್ಟಿದ್ದನ್ನು ಹೇಳಿಕೊಳ್ಳುವ ಮಗ ಆಶೀಷ್​, ಈ ಬಾರಿ 10ನೇ ತರಗತಿಯನ್ನು ಪೂರಕ ಪರೀಕ್ಷೆಯಲ್ಲಿ ಖಂಡಿತ ಪಾಸ್​ ಮಾಡಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾನೆ.

    ಮಸೀದಿಗಳನ್ನು ಒಡೆದು ಅದೇ ಜಾಗದಲ್ಲಿ ಶೌಚಗೃಹ, ಮದ್ಯದಂಗಡಿ ನಿಮಿರ್ಸಿದ ಚೀನಾ ಸರ್ಕಾರ….!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts