More

    ಮಾಡಿದ ಒಂದೇ ಒಂದು ತಪ್ಪಿನಿಂದಾಗಿ ಯುವತಿಗೆ ಕೋಟಿ ಕೋಟಿ ಹಣ ನೀಡಲು ಮುಂದಾದ ಆ್ಯಪಲ್ ಸಂಸ್ಥೆ

    ಕ್ಯಾಲಿಫೋರ್ನಿಯಾ: ಪ್ರಸಿದ್ಧ ಐ ಫೋನ್​ ತಯಾರಿಸುವ ಆ್ಯಪಲ್​ ಸಂಸ್ಥೆಯು ಮಾಡಿದ ಒಂದೇ ತಪ್ಪಿನಿಂದಾಗಿ ಯುವತಿಯೊಬ್ಬಳಿಗೆ ಕೋಟಿ ಕೋಟಿ ಹಣ ನೀಡಲು ಮುಂದಾಗಿದೆ. ಅಷ್ಟಕ್ಕೂ ಸಂಸ್ಥೆ ಮಾಡಿದ ತಪ್ಪೇನು? ಯುವತಿಗಾದ ನಷ್ಟವೇನು ಎಂದು ತಿಳಿಯಲು ಮುಂದೆ ಓದಿ.

    ಕ್ಯಾಲಿಫೋರ್ನಿಯಾದ 21 ವರ್ಷದ ಯುವತಿಯ ಐ ಫೋನ್​ ಹಾಳಾಗಿತ್ತಂತೆ. ಅದನ್ನು ಸರಿಪಡಿಸಲೆಂದು ಆಕೆ ಹತ್ತಿರದಲ್ಲಿದ್ದ ಐ ಫೋನ್​ ಕಂಟ್ಯಾಕ್ಟರ್​ ಆಗಿರುವ ಪೆಗಟ್ರಾನ್​ ಸಂಸ್ಥೆಯ ಅಂಗಡಿಗೆ ಮೊಬೈಲ್​ನ್ನು ಕೊಟ್ಟುಹೋಗಿದ್ದಾಳೆ. ಆಕೆ ಮೊಬೈಲ್​ ಕೊಟ್ಟು ಹೋದ ನಂತರ ಆಕೆಯ ಇನ್ನೊಂದು ಫೋನ್​ಗೆ ಕರೆ ಬರಲಾರಂಭಿಸಿವೆ. ನಿನ್ನ ಬೆತ್ತಲೆ ಫೋಟೋ ಮತ್ತು ವಿಡಿಯೋಗಳನ್ನು ಫೇಸ್​ಬುಕ್​ ಪೇಜ್​ನಲ್ಲಿ ಏಕಾಗಿ ಹಾಕುತ್ತಿರುವೆ ಎಂದು ಆಕೆಯ ಸ್ನೇಹಿತರು ವಿಚಾರಿಸಲಾರಂಭಿಸಿದ್ದಾಳೆ. ತಕ್ಷಣ ಗಾಬರಿ ಬಿದ್ದ ಯುವತಿ ಇದರ ಬಗ್ಗೆ ವಿಚಾರಿಸಿದಾಗ, ಸರಿ ಮಾಡಲು ಕೊಟ್ಟಿದ್ದ ಮೊಬೈಲ್​ನಿಂದಲೇ ಈ ರೀತಿಯ ಫೋಟೋಗಳು ಅಪ್​ಲೋಡ್ ಆಗಿರುವುದು ತಿಳಿದುಬಂದಿದೆ.

    ಈ ಬಗ್ಗೆ ಯುವತಿ ದೂರು ನೀಡಿದ್ದಾಳೆ. ಮಾನ ನಷ್ಟ ಮಾಡಿದ ಸಂಸ್ಥೆಯು ತನಗೆ 5 ಮಿಲಿಯನ್ ಡಾಲರ್​ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾಳೆ. ಅದಕ್ಕೆ ಆ್ಯಪಲ್​ ಸಂಸ್ಥೆ ಒಪ್ಪಿಕೊಂಡಿದ್ದು, ಆಕೆಗೆ 5 ಮಿಲಿಯನ್ ಡಾಲರ್ ನೀಡಿದೆ ಎನ್ನಲಾಗಿದೆ. ಯುವತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗ ಪಡಿಸಲಾಗಿಲ್ಲ. (ಏಜೆನ್ಸೀಸ್)

    17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

    ಗಂಡನನ್ನು ಕೊಂದು ಆತನ ಮರ್ಮಾಂಗ ಫ್ರೈ ಮಾಡಿದ ಹೆಂಡತಿ! ಮಹಿಳೆಯ ಹುಚ್ಚಾಟ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts