More

    ಟ್ವಿಟರ್​ ನೌಕರರು ಈಗ ಆಫೀಸ್​ಗೆ ಸ್ವಂತ ಟಾಯ್ಲೆಟ್​ ಪೇಪರ್​ ತರಬೇಕಂತೆ..!

    ನವದೆಹಲಿ: ಇತ್ತೀಚೆಗೆ ಟ್ವಿಟರ್​ ಸಂಸ್ಥೆ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿ ಭಾರಿ ಸುದ್ದಿಇಗೆ ಗ್ರಾಸವಾಗಿತ್ತು. ಸಂಸ್ಥೆ ಮಾಲೀಕ, ಎಲಾನ್​ ಮಸ್ಕ್​ ತಮ್ಮ ಅನೇಕ ವಿಚಿತ್ರ ನಿರ್ಧಾರಗಳಿಂದಾ ವಿಶ್ವಾದ್ಯಂತ ಟೀಕೆಗೆ ಗುರಿಯಾಗಿದ್ದರು. ಇದೀಗ ಇಷ್ಟೆಲ್ಲಾ ರಾದ್ಧಾಂತದ ನಂತರ ಟ್ವಿಟರ್​ ನೌಕರರು ಸ್ವಂತ ಟಾಯ್ಲೆಟ್​ ಪೇಪರ್​ ತಂದು ಕಛೇರಿಯಲ್ಲಿ ಬಳಸುತ್ತಿದ್ದಾರೆ!

    ಇದಕ್ಕೆ ಕಾರಣ ಕೂಡ ಇದೆ. ಹಣ ಉಳಿಸಲು ಇವರು ಇತ್ತೀಚೆಗೆ ತಮ್ಮ ಕಛೇರಿಯ ಹೌಸ್​ಕೀಪಿಂಗ್​ ಸಿಬ್ಬಂದಿ ಹಾಗೂ ಸ್ವಚ್ಛತಾಕರ್ಮಿಗಳನ್ನೂ ಕೆಲಸದಿಂದ ಕಿತ್ತು ಹಾಕಿದ್ದರು!

    ಈ ಕ್ರಮಗಳ ಬಗ್ಗೆ ತಿಳಿದಿರುವ ಜನರು ಕ್ಯಾಲಿಫೋರ್ನಿಯಾ ಕಚೇರಿ ಈಗ ಅವ್ಯವಸ್ಥೆಯಲ್ಲಿದೆ ಎಂದು ಹೇಳುತ್ತಿದ್ದಾರೆ. ನಾಲ್ವರು ಹಾಲಿ ಮತ್ತು ಮಾಜಿ ಉದ್ಯೋಗಿಗಳ ಪ್ರಕಾರ ಹೆಚ್ಚು ಸೀಮಿತ ಸ್ಥಳಗಳಲ್ಲಿ ಜನರು ತುಂಬಿರುವುದರಿಂದ, ಕಛೇರಿ ವಾಸನೆ ಹೊಡೆಯುತ್ತಿದೆ. ಬಾತ್​ರೂಮ್​ಗಳಲ್ಲಿ ಕೊಳಕು ತುಂಬಿದ್ದು ಕೆಲವು ಕೆಲಸಗಾರರು ತಮ್ಮ ಸ್ವಂತ ಟಾಯ್ಲೆಟ್ ಪೇಪರ್‌ಗಳನ್ನು ಮನೆಯಿಂದ ತರಲು ಶುರುಮಾಡಿದ್ದಾರೆ.

    ಈ ಪ್ರಕರಣ ನಿಜವೇ ಎಂದು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾಗ, ಎಲಾನ್​ ಮಸ್ಕ್ ಅದನ್ನು ಖಚಿತಪಡಿಸಿದ್ದಾರೆ. ತಮ್ಮ ಟ್ವೀಟ್​ನಲ್ಲಿ “BYOTP! LOL, ಅರ್ಧ ದಿನ ಈ ಪರಿಸ್ಥಿತಿ ನಿಜವಾಗಿತ್ತು’ ಎಂದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts