More

    ಬೆಂಗಳೂರಲ್ಲಿ ಶುರುವಾಯ್ತು ಇ.ವಿ ಪವರ್; ಹೈಟೆಕ್​ ಎಲೆಕ್ಟ್ರಿಕ್​ ಬಸ್​ ಈಗ ಜನರ ಸೇವೆಯಲ್ಲಿ..!

    ಬೆಂಗಳೂರು: ಈಗ ದೇಶಾದ್ಯಂತ ಎಲೆಕ್ಟ್ರಿಕ್​ ವಾಹನಗಳ ಹಾವಳಿ ಹೆಚ್ಚಾಗಿದ್ದು ಈಗ ಸಾರ್ವಜನಿಕ ಸಾರಿಗೆಯಲ್ಲಿ ಕೂಡ ಇ.ವಿ ಸದ್ದು ಮಾಡುತ್ತಿದೆ. ಇದೀಗ ಬೆಂಗಳೂರಿನಲ್ಲಿ BMTC ಎಲೆಕ್ಟ್ರಿಕ್​ ಬಸ್​ ಪರಿಚಯಿಸಿದ ನಂತರ KSRTC ಕೂಡ ಇವನ್ನು ಸಾರ್ವಜನಿಕರಿಗೆ ಪರಿಚಯಿಸಿದೆ.

    ಇಂದಿನಿಂದ KSRTC ಇಲೆಕ್ಟ್ರಿಕ್ ಬಸ್ ರಸ್ತೆಗಿಳಿಯುತ್ತಿದ್ದು ಇದು ಪರಿಸರ ಸಂರಕ್ಷಣೆಗೆ ಹೊಸ ಹೆಜ್ಜೆಯಾಗಿದೆ ಎಂದೇ ಹೇಳಬಹುದು.

    BMTC ಬಳಿಕ ಇಲೆಕ್ಟ್ರಿಕ್ ಬಸ್ ರಸ್ತೆಗಿಳಿಸಿರುವ KSRTC MEIL ಜೊತೆಗೆ ಜಂಟಿಯಾಗಿ ಪರಿಸರ ಸ್ನೇಹಿ ಬಸ್ ಪರಿಚಯಿಸಿದೆ. ಸಾರಿಗೆ ಸಚಿವ ಶ್ರೀರಾಮುಲು ಈ ಎಲೆಕ್ಟ್ರಿಕ್​ ಬಸ್​ ಲೋಕಾರ್ಪಣೆಗೊಳ್ಳಲಿದೆ. ಈ ಹೊಸ ಬಸ್‌ಗೆ ಇ.ವಿ ಪವರ್ ಪ್ಲಸ್ ಎಂದು KSRTC ಹೆಸರಿಟ್ಟಿದೆ.

    KSRTC ಇ.ವಿ ಪವರ್ ಪ್ಲಸ್​ನಲ್ಲಿ ಏನೇನು ವಿಶೇಷ?
    ಈ ಬಸ್​ ಎರಡೂವರೆ ತಾಸು ಚಾರ್ಜ್ ಮಾಡಿದರೆ 300 ಕಿ.ಮೀ ಕ್ರಮಿಸುತ್ತೆ. ಇ.ವಿ ಪವರ್​ ಪ್ಲಸ್​ನಲ್ಲಿ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಇದ್ದು ನೂತನ ತಂತ್ರಜ್ಞಾನವಾದ ರಿ ಜನರೇಷನ್ ಸಿಸ್ಟಮ್ ಅಳವಡಿಕೆ ಮಾಡಲಾಗಿದೆ. ಅಂದರೆ ಈ ಬಸ್​ ಸಂಚಾರ ಮಾಡುವಾಗಲೇ ಅರ್ಧದಷ್ಟು ಬ್ಯಾಟರಿಯನ್ನು ಚಾರ್ಜ್​ ಮಾಡಿಕೊಳ್ಳುತ್ತದೆ.

    ಅಷ್ಟೇ ಅಲ್ಲದೇ ಬಸ್ ಒಳಗೆ ಪ್ರಯಾಣಿಕರ ಅನುಕೂಲಕ್ಕೆ ಮೊಬೈಲ್ ಚಾರ್ಜಿಂಗ್ ಸ್ಪಾಟ್ಸ್ ಕೂಡ ಅಳವಡಿಕೆ ಮಾಡಲಾಗಿದೆ. ಇದರ ಜೊತೆಗೆ ಪ್ರಯಾಣದಲ್ಲಿ ಸಾರ್ವಜನಿಕರಿಗೆ ಮನರಂಜನೆ ಸಿಗಲಿ ಎಂದು ಎರಡು ಟಿವಿ ಕೂಡ ಅಳವಡಿಕೆ ಮಾಡಲಾಗಿದೆ.

    ಒಟ್ಟಾರೆ, ಈ ಬಸ್ ನಲ್ಲಿ 43 + 2 ಸೀಟಿಂಗ್ ಕೆಪಾಸಿಟಿ ಇದ್ದು ಒಟ್ಟು 45 ಜನರನ್ನು ಹೊತ್ತೊಯ್ಯಬಲ್ಲದು. ಈ ಬಸ್​ನಲ್ಲಿ ಅನೇಕ ಸೆನ್ಸಾರ್​ಗಳನ್ನು ಅಳವಡಿಸಲಾಗಿದ್ದು ಪ್ರತಿಯೊಂದು ಮಾಹಿತಿಯೂ ಸ್ಟೋರ್​ ಆಗುತ್ತದೆ. ಹೀಗಾಗಿ ಈ ಬಸ್ ಸಂಪೂರ್ಣ ಸೆನ್ಸಾರ್ ಹಿಡಿತದಲ್ಲಿ ಇರಲಿದೆ ಎಂದೇ ಹೇಳಬಹುದು. ಅಷ್ಟೇ ಅಲ್ಲದೇ ಈಗಿನ ಐಷಾರಾಮಿ ಕಾರುಗಳಲ್ಲಿ ಇರುವಂತೆಯೇ ಫ್ರಂಟ್ ಲಾಗ್ & ಬ್ಯಾಕ್ ಲಾಗ್ ಕ್ಯಾಮೆರಾ ವ್ಯವಸ್ಥೆ ಕೂಡ ಈ ಬಸ್​ನಲ್ಲಿ ಇದೆ. ಡ್ರೈವರ್​ನ ಭಾಗ ಸಂಪೂರ್ಣವಾಗಿ ಡಿಜಿಟಲೈಸ್ಡ್ ಸಿಸ್ಟಮ್ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts