More

    ಮರಾಠಿ ಪ್ರೇಮ ಮೆರೆದಿದ್ದಕ್ಕೆ ಸಚಿವೆ ಶಶಿಕಲಾ ಜೊಲ್ಲೆಗೆ ನೋಟಿಸ್!

    ಕಲಬುರಗಿ: ಮರಾಠಿಯಲ್ಲಿ ಮಾತನಾಡಿದ್ದಲ್ಲದೆ ಅದನ್ನು ಸಮರ್ಥಿಸಿಕೊಂಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಸದ್ಯದಲ್ಲೇ ವಿವರಣೆ ಕೇಳಿ ನೋಟಿಸ್ ಜಾರಿಯಾಗಲಿದೆ. ‘‘ನಿಪ್ಪಾಣಿಯಲ್ಲಿ ಸಚಿವೆ ಜೊಲ್ಲೆ ಮೆರೆದಿದ್ದ ಮರಾಠಿ ಪ್ರೇಮದ ಬಗ್ಗೆ ವಿವರಣೆ ನೀಡುವಂತೆ ನಾನು ಬೆಂಗಳೂರಿಗೆ ಹೋದ ತಕ್ಷಣಪತ್ರ ಬರೆಯುವೆ’’ ಎಂದು ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಹೇಳಿದ್ದಾರೆ.

    ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಇತ್ತೀಚಿನ ಭದ್ರಾವತಿ ಕಾರ್ಯಕ್ರಮದಲ್ಲಿ ಹಿನ್ನೆಲೆಯಲ್ಲಿ ಹಾಕಿದ್ದ ಬೃಹತ್ ಫಲಕದಲ್ಲಿ ಹಿಂದಿಯಲ್ಲಿ ವಿವರ ಬರೆಯಲಾಗಿತ್ತು. ಕರ್ನಾಟಕದಲ್ಲೇ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಬಳಸಿರಲಿಲ್ಲ. ಅದಕ್ಕೆ ಸಂಬಂಧಿಸಿದಂತೆಯೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಗೃಹ ಇಲಾಖೆ ಕಾರ್ಯದರ್ಶಿಗಳಿಗೆ ಪ್ರಾಧಿಕಾರ ನೋಟಿಸ್ ನೀಡಿದೆ.

    ಇದನ್ನೂ ಓದಿ: ಕರೊನಾ ಲಸಿಕೆ ಪಡೆದ ಹತ್ತೇ ದಿನಗಳಲ್ಲಿ ಸತ್ತ!; ಸಾವಿಗೆ ಕಾರಣ ವಿಷ ಎಂದಿತ್ತು ಮರಣೋತ್ತರ ಪರೀಕ್ಷೆಯಲ್ಲಿ…

    ಕನ್ನಡ ಬಳಸದ ಐಎಎಸ್, ಐಪಿಎಸ್ ಸೇರಿ 107 ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಆಯಾ ಇಲಾಖೆ ಮುಖಸ್ಥರಿಗೆ ಶಿಫಾರಸು ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕ್ರಮ ಕೈಗೊಳ್ಳುವ ಅಧಿಕಾರ ಇಲ್ಲ. ಹಲ್ಲು ಕಿತ್ತಿರುವ ಹಾವಿನಂತೆ ಭುಸ್ ಎನ್ನುವುದಷ್ಟೆ ನಮ್ಮ ಕೆಲಸ. ಹೆಚ್ಚು ಅಧಿಕಾರ ನೀಡುವ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕು ಎಂದರು.

    ಕರ್ನಾಟಕ ಏಕೀಕರಣ ನಂತರ ಮರಾಠಿ ಭಾಷಿಕರು ಎಷ್ಟು ಜನ ಕನ್ನಡ ಕಲಿತಿದ್ದಾರೆ, ಅವರ ಆಗಿನ ಮತ್ತು ಈಗಿನ ಸ್ಥಿತಿ ಏನು, ಗಡಿ ಜಿಲ್ಲೆಗಳಲ್ಲಿನ ಕನ್ನಡದ ವಾಸ್ತವ ಪರಿಸ್ಥಿತಿ ಏನು ಎಂಬುದರ ಬಗ್ಗೆ ಅರಿಯಲು ಕನ್ನಡ ಸಂಸ್ಕೃತಿ ಮತ್ತು ಇತಿಹಾಸ ಕುರಿತು ಸೋಷಿಯಲ್ ಆಡಿಟ್ ನಡೆಸಲಾಗುವುದು. ಇದರಿಂದ ನಾಡಿನ ನೆಲದ ಬಗ್ಗೆ ಮಾತನಾಡುವವರಿಗೆ ಸೂಕ್ತ ದಾಖಲೆಗಳು ಸಿಗುವಂತಾಗಲಿದೆ ಎಂದರು.

    ಇದನ್ನೂ ಓದಿ: ರಾಜಧಾನಿಯಲ್ಲಿ ಕರೊನಾ ಲಸಿಕೆ ಪಡೆದ 51 ಮಂದಿಯಲ್ಲಿ ಅಡ್ಡ ಪರಿಣಾಮ!

    ಭಾಷಾ ಸಮಾನತೆ ಕುರಿತು ಸಂವಿಧಾನದಲ್ಲಿ ಸ್ಪಷ್ಟವಾದ ನಿಲುವು ಇಲ್ಲ. ಹೀಗಾಗಿ ಕನ್ನಡ ಇತರ ಭಾಷೆಗಳು ರಾಜಭಾಷೆ ಆಗಬೇಕು ಎಂದರೆ ಸಂವಿಧಾನದ 8ನೇ ಪರಿಚ್ಛೇದ ತಿದ್ದುಪಡಿ ಅಗತ್ಯವಿದೆ. ಸಂವಿಧಾನದ ಕಲಂ 343ರಿಂದ 352ವರೆಗಿರುವ ಕೆಲ ಗೊಂದಲಗಳನ್ನು ಸರಿಪಡಿಸಲು ಸೂಕ್ತ ತಿದ್ದುಪಡಿ ಮಾಡಬೇಕು. ಆಗಲೇ ಕನ್ನಡ ರಾಜ್ಯಭಾಷೆ ಆಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ತಿದ್ದುಪಡಿಯಾದರೆ ಕೇಂದ್ರ ಸರ್ಕಾರದ ನೇಮಕ ಇತರ ಸ್ಪರ್ಧಾತ್ಮಕ ಪರೀಕ್ಷೆ ಕನ್ನಡದಲ್ಲಿ ಬರೆಯಲು ಅನುವಾಗಲಿದೆ. ಬ್ಯಾಂಕಿಂಗ್‌ನಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸಲಾಗಿದೆ. ಈ ಕುರಿತು ಸಿಎಲ್‌ಸಿಬಿಗೆ ಪತ್ರ ಬರೆದು ಸೂಚಿಸಲಾಗಿದೆ ಎಂದರು.

    ‘ಟಾಪ್​ ಬಿಚ್ಚಿ, ಬರಿ ಬ್ರಾನಲ್ಲಿ ಡೈಲಾಗ್​ ಹೇಳು ಅಂದಿದ್ರು!’ ಜಿಯಾ ಖಾನ್​ ಬದುಕಿನ ಕಹಿ ಘಟನೆ ಬಿಚ್ಚಿಟ್ಟ ಸಹೋದರಿ

    ಮದ್ವೆಯಾಗಿ, ಮಗು ಇರುವವನ ಮೇಲೇ ದಾಖಲಾಯ್ತು ಮೊದಲ ಲವ್​ ಜಿಹಾದ್​ ಕೇಸ್​!

    ನಾನ್​ವೆಜ್​ ಪ್ರಿಯರಿಗೆ ಶುಭ ಸುದ್ದಿ! 1 ಗಂಟೆಯಲ್ಲಿ ಇಷ್ಟು ತಿಂದರೆ ನಿಮಗೆ ಸಿಗುತ್ತೆ ಬುಲೆಟ್​ ಬೈಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts