More

    ಮದ್ವೆಯಾಗಿ, ಮಗು ಇರುವವನ ಮೇಲೇ ದಾಖಲಾಯ್ತು ಮೊದಲ ಲವ್​ ಜಿಹಾದ್​ ಕೇಸ್​!

    ಭೋಪಾಲ್​: ಮಧ್ಯಪ್ರದೇಶದಲ್ಲಿ ಲವ್​ ಜಿಹಾದ್​ ಸುಗ್ರೀವಾಜ್ಞೆ ಜಾರಿಯಾಗಿ ಒಂಬತ್ತು ದಿನಗಳ ನಂತರ ಮೊದಲನೇ ಲವ್​ ಜಿಹಾದ್​ ಪ್ರಕರಣ ದಾಖಲಾಗಿದೆ. ಈಗಾಗಲೇ ಮದುವೆಯಾಗಿ ಒಂದು ಮಗುವಿರುವ ವ್ಯಕ್ತಿಯೇ ಮೊದಲನೇ ಪ್ರಕರಣದ ಆರೋಪಿ.

    ಇದನ್ನೂ ಓದಿ: ವಕೀಲರ ಡ್ರೆಸ್​ಕೋಡ್​ಗಿದ್ದ ವಿನಾಯಿತಿ ರದ್ದು, ಕೋಟ್​ ಧರಿಸುವಿಕೆ ಕಡ್ಡಾಯ

    ಬಾರ್ವಾನಿ ಪ್ರದೇಶದ 22 ವರ್ಷದ ಹೆಣ್ಣು ಮಗಳು ಈ ದೂರನ್ನು ನೀಡಿದ್ದಾಳೆ. ಆಕೆ ನಾಲ್ಕು ವರ್ಷಗಳ ಹಿಂದೆ ನಗರದಲ್ಲಿ ವ್ಯಕ್ತಿಯೊಬ್ಬನನ್ನು ಭೇಟಿಯಾಗಿದ್ದಳಂತೆ. ತಾನೊಬ್ಬ ಡ್ರೈವರ್​ ಎಂದು ಪರಿಚಯ ಮಾಡಿಕೊಂಡಿದ್ದ ಆತ ಯುವತಿಯ ನಂಬರ್​ ಕೇಳಿ ಪಡೆದಿದ್ದಾನೆ. ಮದುವೆ ಕಾರ್ಯಕ್ರಮಗಳಲ್ಲಿ ಸಂಗೀತ ಕಚೇರಿ ನಡೆಸುವುದಾಗಿಯೂ ಹೇಳಿಕೊಂಡಿದ್ದಾನೆ. ನಾನು ನಿಮ್ಮದೇ ಸಮುದಾಯಕ್ಕೆ ಸೇರಿದವನು ಎಂದು ನಂಬಿಸಿದ ಆತ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದಾನೆ. ನಂತರ ಸುಳ್ಳು ಭರವಸೆಗಳನ್ನು ಕೊಟ್ಟು ದೈಹಿಕ ಸಂಪರ್ಕವನ್ನೂ ಹೊಂದಿದ್ದಾನೆ.

    ಇತ್ತೀಚೆಗೆ ಆ ವ್ಯಕ್ತಿಯ ನಿಜ ಬಣ್ಣ ಬಯಲಾಗಿದೆ. ಆತ ಬೇರೊಂದು ಧರ್ಮಕ್ಕೆ ಸೇರಿರುವ ವ್ಯಕ್ತಿ ಎನ್ನುವುದು ತಿಳಿದುಬಂದಿದೆ. ತನ್ನ ನಿಜ ಧರ್ಮ ಗೊತ್ತಾದ ಮೇಲೆ ಅದೇ ಧರ್ಮಕ್ಕೆ ಪರಿವರ್ತನೆ ಆಗು ಎಂದು ಆತ ಯುವತಿಗೆ ಹಿಂಸೆ ಕೊಡಲಾರಂಭಿಸಿದ್ದಾನೆ. ಇದರಿಂದಾಗಿ ಬೇಸತ್ತ ಆಕೆ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾಳೆ.

    ಇದನ್ನೂ ಓದಿ: ‘ಟಾಪ್​ ಬಿಚ್ಚಿ, ಬರಿ ಬ್ರಾನಲ್ಲಿ ಡೈಲಾಗ್​ ಹೇಳು ಅಂದಿದ್ರು!’ ಜಿಯಾ ಖಾನ್​ ಬದುಕಿನ ಕಹಿ ಘಟನೆ ಬಿಚ್ಚಿಟ್ಟ ಸಹೋದರಿ

    ಇದೀಗ ಆರೋಪಿಯ ಮೇಲೆ ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ 2020, ಭಾರತೀಯ ದಂಡ ಸಂಹಿತೆಯ 376 (ಅತ್ಯಾಚಾರ), 506 (ಕ್ರಿಮಿನಲ್ ಬೆದರಿಕೆ), 323 (ಸ್ವಯಂಪ್ರೇರಣೆಯಿಂದ ನೋವನ್ನುಂಟುಮಾಡುವುದು) ಮತ್ತು 294 (ಅಶ್ಲೀಲ ಕಾಯ್ದೆ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. (ಏಜೆನ್ಸೀಸ್​)

    ಸ್ನೇಹಿತೆಯ ದೈಹಿಕ ಸಂಪರ್ಕ ಮಾಡಿದಾಗ ಕೆಲವು ಅನುಮಾನ ಶುರುವಾಗಿದೆ; ಹೇಗೆ ಬಗೆಹರಿಸಿಕೊಳ್ಳಲಿ?

    ಮದ್ವೆಗೆ ಬರ್ದಿದ್ರೂ ಉಡುಗೊರೆ ಹಾಕಿ! ಲಗ್ನಪತ್ರಿಕೆಯಲ್ಲೇ ಗೂಗಲ್​ ಪೇ, ಫೋನ್​ ಪೇ ಕ್ಯೂಆರ್​ ಕೋಡ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts