More

    ಬುಕಿಂಗ್​ಗೂ ಮುನ್ನ ಯೋಚಿಸಿ, ವಿಮಾನದಲ್ಲಿ ವ್ಯಕ್ತಿಗತ ಅಂತರ ಸಾಧ್ಯವಿಲ್ಲ, ಸೀಟು ಖಾಲಿ ಬಿಡಲ್ಲ

    ನವದೆಹಲಿ: ವಿಮಾನದಲ್ಲಿ ಮಧ್ಯದ ಸೀಟುಗಳನ್ನು ಖಾಲಿ ಬಿಟ್ಟರೂ ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು ಸಾಧ್ಯವಾಗದು. ಈ ಕಾರಣಕ್ಕಾಗಿ ಅವನ್ನು ಖಾಲಿ ಬಿಡದೆ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಕೇಂದ್ರ ಸಚಿವ ಹರ್ದೀಪ್​ ಸಿಂಗ್​ ಪುರಿ ಹೇಳಿದ್ದಾರೆ.

    ಜತೆಗೆ, ಅಲ್ಪ ಕಾಲಾವಧಿಯ ವಿಮಾನದ ಪ್ರಯಾಣಿಕರಿಗೆ ಕ್ವಾರಂಟೈನ್​ ಅಗತ್ಯವಿಲ್ಲವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸೋಮವಾರದಿಂದ ದೇಶಿಯ ವಿಮಾನಗಳ ಹಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಹರ್ದೀಪ್​ ಪುರಿ, ಇದೇ ಮೊದಲ ಬಾಋರಿಗೆ ವಿಮಾನ ಪ್ರಯಾಣದ ದರವನ್ನು ಸರ್ಕಾರ ನಿಗದಿಪಡಿಸಿದೆ. ಎರಡು ತಿಂಗಳ ಕಾಲ ಇದು ಚಾಲ್ತಿಯಲ್ಲಿರಲಿದೆ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ; ಭಾರತದೊಂದಿಗೆ ಗಡಿ ಕ್ಯಾತೆ ತೆಗೆದ ಚೀನಾ ಸ್ವಾಟೆಗೆ ತಿವಿದ ಅಮೆರಿಕ

    ಲಾಕ್​ಡೌನ್​ ಹಿನ್ನೆಲೆಯಲ್ಲಿ ವಿಮಾನ ಪ್ರಯಾಣಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಅಲ್ಲದೇ, ಮಹಾನಗರಗಳ ನಡುವಿನ ನಿಗದಿತ ಹಾರಾಟದ ಪೈಕಿ ಶೇ.33 ವಿಮಾನಗಳಷ್ಟೇ ಹಾರಾಟ ನಡೆಸುತ್ತಿವೆ. ಈ ಕಾರಣಕ್ಕಾಗಿ ಸರ್ಕಾರ ದರ ನಿಗದಿ ಮಾಡಿದೆ. ಮುಂಬೈ- ದೆಹಲಿ ನಡುವಿನ ಪ್ರಯಾಣಕ್ಕೆ ಕನಿಷ್ಠ 3,500 ರು. ಹಾಗೂ ಗರಿಷ್ಠ 10,000 ರೂ. ನಿಗದಿಪಡಿಸಲಾಗಿದೆ.

    ಗರಿಷ್ಠ ಹಾಗೂ ಕನಿಷ್ಠ ಬೆಲೆಯ ನಡುವಿನ ಮೊತ್ತಕ್ಕೆ ಅಂದರೆ ಅಂದಾಜು 6,700 ರೂ.ಗೆ ಕನಿಷ್ಠ ಶೇ.40 ಸೀಟುಗಳನ್ನು ಪ್ರಯಾಣಿಕರಿಗೆ ನೀಡಬೇಕಾಗುತ್ತದೆ ಎಂಬ ಷರತ್ತನ್ನು ವಿಧಿಸಲಾಗಿದೆ ಎಂದಿ ನಾಗರಿಕ ವಿಮಾನ ಯಾನ ಸಚಿವಾಲಯದ ಕಾರ್ಯದರ್ಶಿ ಪ್ರದೀಪ್ ಸಿಂಗ್​ ಖರೋಲಾ ಹೇಳಿದ್ದಾರೆ.
    ದೇಶೀಯ ವಿಮಾನ ಮಾರ್ಗಗಳನ್ನು ಏಳು ವಲಯಗಳಾಗಿ ವಿಂಗಡಿಸಲಾಗಿದೆ. ಪ್ರಯಾಣದ ಅವಧಿ ಆಧರಿಸಿ ಟಿಕಎಟ್​ ಬೆಲೆ ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ; 25 ವರ್ಷಗಳ ಹಿಂದೆ ವಶಕ್ಕೆ ಪಡೆದ ಪಂಚೇನ್​ ಲಾಮಾ ಎಲ್ಲಿದ್ದಾರೆ? ಅಮೆರಿಕ ಪ್ರಶ್ನೆಗೆ ಅಚ್ಚರಿಯ ಉತ್ತರ ನೀಡಿದ ಚೀನಾ 

    ವಿಮಾನ ಯಾನಕ್ಕೆ ಈಗಾಗಲೇ ನಿಗದಿತ ಮಾನದಂಡಗಳನ್ನು ರೂಪಿಸಲಾಗಿದೆ. ಅದರಂತೆ, ಪ್ರಯಾಣಕ್ಕೂ ಎರಡು ತಾಸು ಮುಂಚೆ ಪ್ರಯಾಣಿಕರು ನಿಲ್ದಾಣದಲ್ಲಿ ಹಾಜರಿರಬೇಕು. ಒಂದೇ ಬ್ಯಾಗ್​ ಕೊಂಡೊಯ್ಯಲಷ್ಟೇ ಅವಕಾಶವಿದೆ. ಕಂಟೇನ್​ಮೆಂಟ್​ ಝೋನ್​ನಲ್ಲಿರುವ ಪ್ರಯಾಣಿಕರಿಗೆ ವಿಮಾನದಲ್ಲಿ ತೆರಳಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

    ಸಂಬಳ ಕಡಿತ ಮಾಡಲ್ಲ, ಬೋನಸ್ಸೂ ಕೊಡ್ತೀವಿ…! ಈ ಕಂಪನಿ ಉದ್ಯೋಗಿಗಳೇ ಧನ್ಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts