More

    ನಡುರಾತ್ರಿ ಬಸ್ಸಿನಲ್ಲಿ ಅನುಮಾನಾಸ್ಪದವಾಗಿ ಸಿಕ್ಕ ಯುವತಿ-ಯುವಕರಿಗೆ ಬಟ್ಟೆ ಹಾಕಿಕೊಳ್ಳುವುದಕ್ಕೂ ಬಿಡದೆ ಎಳೆದೊಯ್ದ ಪೊಲೀಸರು!

    ಭೋಪಾಲ್: ಮಧ್ಯ ರಾತ್ರಿ 1 ಗಂಟೆಯ ಹೊತ್ತಿಗೆ ಬಸ್​ ಒಂದರಲ್ಲಿ ಸಿಕ್ಕ ಯುವತಿ-ಯುವಕರಿಗೆ ಬಟ್ಟೆ ಹಾಕಿಕೊಳ್ಳುವುದಕ್ಕೂ ಸಮಯ ಕೊಡದ ಪೊಲೀಸರು ಹಾಗೆಯೇ ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗಿರುವ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ.

    ಯುವತಿಯೊಬ್ಬಳು ಅರೆನಗ್ನ ಸ್ಥಿತಿಯಲ್ಲಿ ಬಸ್ಸಿನಲ್ಲಿದ್ದಳು. ಆಕೆಯ ಜತೆ ಓರ್ವ ವ್ಯಕ್ತಿ ಅರೆ ನಗ್ನ ಸ್ಥಿತಿಯಲ್ಲಿದ್ದರೆ ಇನ್ನೊಬ್ಬ ನೈಟ್​ ಪ್ಯಾಂಟ್ ಹಾಗೂ ಟೀ ಶರ್ಟ್ ತೊಟ್ಟಿದ್ದವನಿದ್ದ. ಅವರ ಬಗ್ಗೆ ಅನುಮಾನ ಬಂದ ಪೊಲೀಸರು ಅವರನ್ನು ಪೊಲೀಸ್ ವಾಹನ ಹತ್ತುವಂತೆ ಹೇಳಿದ್ದಾರೆ. ಬಟ್ಟೆ ಹಾಕಿಕೊಳ್ಳುವುದಕ್ಕೆ ಸಮಯ ಕೊಡಿ ಎಂದು ಯುವತಿ ಕೈ ಮುಗಿದು ಬೇಡಿಕೊಂಡರೂ ಒಪ್ಪದ ಅವರು ಅವರನ್ನು ಹಾಗೆಯೇ ಠಾಣೆಗೆ ಕರೆದೊಯ್ದಿದ್ದಾರೆ.

    ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಪೊಲೀಸರು ತಪ್ಪು ಮಾಡಿದ್ದಾರೆ ಎಂದು ಅನೇಕರು ಆಕ್ರೋಶ ಹೊರಹಾಕಲಾರಂಭಿಸಿದ್ದಾರೆ. ನಡುರಾತ್ರಿಯಲ್ಲಿ ಆ ರೀತಿ ಬಸ್ಸಿನಲ್ಲಿದ್ದದ್ದು ಅವರ ತಪ್ಪು ಎಂದು ಒಂದಿಷ್ಟು ಮಂದಿ ಆರೋಪಿಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಲಾರಂಭಿಸಿದ್ದಾರೆ. (ಏಜೆನ್ಸೀಸ್)

    ಒಂಬತ್ತು ಗಿನ್ನೆಸ್ ರೆಕಾರ್ಡ್ ಬರೆದ ಜೆಎನ್​ಯು ಕಂಪ್ಯೂಟರ್ ಆಪರೇಟರ್! ಹೇಗೆಲ್ಲಾ ಟೈಪಿಂಗ್ ಮಾಡ್ತಾರಂತೆ ಗೊತ್ತಾ?

    ಕ್ಲಬ್​ಹೌಸ್​ನಲ್ಲಿ ಶೀಘ್ರವೇ ಶುರುವಾಗಲಿದೆ ಹೊಸ ಫೀಚರ್​! ಏನದು? ಹೇಗಿರುತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts