More

    ಕ್ಲಬ್​ಹೌಸ್​ನಲ್ಲಿ ಶೀಘ್ರವೇ ಶುರುವಾಗಲಿದೆ ಹೊಸ ಫೀಚರ್​! ಏನದು? ಹೇಗಿರುತ್ತೆ?

    ಬೆಂಗಳೂರು: ಸದ್ಯ ಟ್ರೆಂಡಿಂಗ್​ನಲ್ಲಿರುವ ಸೋಶಿಯಲ್ ಆ್ಯಪ್​ ಅಂದರೆ ಅದು ಕ್ಲಬ್​ಹೌಸ್. ಅನೇಕರು ಕ್ಲಬ್​ ಹೌಸ್​ನಲ್ಲಿ ರೂಂ ಮಾಡಿಕೊಂಡು ಹಲವು ರೀತಿಯ ಚರ್ಚೆಗಳನ್ನು ಮಾಡಿಕೊಳ್ಳಲಾರಂಭಿಸಿದ್ದಾರೆ. ಈ ಆ್ಯಪ್​ಗೆ ಸದ್ಯದಲ್ಲೇ ಹೊಸದೊಂದು ಫೀಚರ್​ ಸೇರ್ಪಡೆಯಾಗುವ ಸಾಧ್ಯತೆಯಿದೆ. ಏನದು ಫೀಚರ್​ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.

    ಕ್ಲಬ್​ಹೌಸ್ ಬಳಕೆದಾರರಲ್ಲಿ ಕೆಲವರಿಗೆ ಕಳೆದ ವಾರ ಹೊಸದೊಂದು ಫೀಚರ್ ಕಾಣಿಸಿಕೊಂಡಿತ್ತು. ಬ್ಯಾಕ್​ಚಾನೆಲ್​ ಹೆಸರಿನ ಅದನ್ನು ತೆರೆದಾಗ ಕೇವಲ ಖಾಲಿ ಸ್ಕ್ರೀನ್ ಒಂದು ತೆರೆದುಕೊಂಡಿತ್ತು. ಆದರೆ ಕೆಲವೇ ಹೊತ್ತಿನಲ್ಲಿ ಆ ಫೀಚರ್​ ಮಾಯವಾಗಿತ್ತು. ಸಂಸ್ಥೆಯು ಹೊಸದೊಂದು ಫೀಚರ್​ ಅಳವಡಿಕೆಗೆ ಪ್ರಯತ್ನಿಸುತ್ತಿದೆ ಎನ್ನುವುದಕ್ಕೆ ಸೂಚನೆ ಅದಾಗಿತ್ತು.

    ನೀವು ಗಮನಿಸಿರುವಂತೆ ಕ್ಲಬ್​ಹೌಸ್​​ನಲ್ಲಿ ಮೆಸೇಜ್ ಮಾಡುವುದಕ್ಕೆ ಅವಕಾಶವಿಲ್ಲ. ಈಗ ಬರಲಿರುವ ಫೀಚರ್​ನಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಮೆಸೇಜ್ ಮಾಡಲು ಅವಕಾಶ ಮಾಡಿಕೊಡಲಾಗುವುದು ಎನ್ನಲಾಗಿದೆ. ಒಬ್ಬರಿಂದ ಒಬ್ಬರಿಗೆ ನೇರ ಸಂದೇಶ ಅಥವಾ ರೂಂಗಳಲ್ಲಿ ಸಂದೇಶ ಕಳುಹಿಸಿಕೊಳ್ಳಲು ಅವಕಾಶ ಮಾಡಿಕೊಡುವ ಸಾಧ್ಯತೆ ಹೆಚ್ಚಿದೆ. ಆದರೆ ಈ ಕುರಿತಾಗಿ ಸಂಸ್ಥೆ ಯಾವುದೇ ಮಾಹಿತಿ ಹೊರ ಬಿಟ್ಟುಕೊಟ್ಟಿಲ್ಲ. ಈ ಆ್ಯಪ್​ ಟ್ರೆಂಡಿಂಗ್​ನಲ್ಲಿರುವುದರಿಂದಾಗಿ ಅತಿ ಶೀಘ್ರದಲ್ಲಿ ಫೀಚರ್​ ಬರಬಹುದು ಎನ್ನಲಾಗಿದೆ. ಆದರೆ ನೇರ ಸಂದೇಶ ಕಳುಹಿಸಲು ಅವಕಾಶ ಮಾಡಿಕೊಡುವುದು ತೀರಾ ಕಷ್ಟದ ಕೆಲಸ ಎನ್ನುವ ಮಾತುಗಳೂ ಇವೆ. (ಏಜೆನ್ಸೀಸ್)

    ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು! ಡೆತ್​ನೋಟ್​ನಿಂದ ಬಯಲಾಯ್ತು ಕಾರಣ

    ಮಗ ಎಂದುಕೊಂಡಿದ್ದವ ನನ್ನ ಚಿಕ್ಕಪ್ಪನಾದ! ಅಜ್ಜನ ಜತೆ ತನ್ನ ಗರ್ಲ್​ಫ್ರೆಂಡ್​ ಆಡುತ್ತಿದ್ದ ಆಟವನ್ನು ಬಿಚ್ಚಿಟ್ಟ ಯುವಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts