More

    ಮೊಬೈಲ್-ಚಾರ್ಜರ್ ಒಂದೇ ಬಾಕ್ಸ್​ನಲ್ಲಿದ್ರೆ ಪ್ರತ್ಯೇಕ ತೆರಿಗೆ ಇಲ್ಲ: ಹೈಕೋರ್ಟ್​ ಆದೇಶ

    ಬೆಂಗಳೂರು: ಒಂದೇ ಪ್ಯಾಕ್​ನಲ್ಲಿ ಚಾರ್ಜರ್ ಹಾಗೂ ಮೊಬೈಲ್ ಫೋನ್ ಇಟ್ಟು ಮಾರಾಟ ಮಾಡಿದ ಸಂದರ್ಭದಲ್ಲಿ ಚಾರ್ಜರ್​ಗೆ ಪ್ರತ್ಯೇಕವಾಗಿ ಹೆಚ್ಚುವರಿ ತೆರಿಗೆ ವಿಧಿಸಲಾಗದು ಎಂದು ಹೈಕೋರ್ಟ್ ಆದೇಶಿಸಿದೆ.

    ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಹಾಗೂ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಅವರಿದ್ದ ಪೀಠ ಈ ಆದೇಶ ಮಾಡಿದೆ.

    ಪ್ರಕರಣವೇನು?
    2008ರಿಂದ 2013ರ ಅವಧಿಯಲ್ಲಿ ಹೆಸರಾಂತ ಮೊಬೈಲ್ ಫೋನ್ ಮತ್ತದರ ಬಿಡಿ ಭಾಗಗಳ ಮಾರಾಟ ಕಂಪನಿಯು ರಾಜ್ಯದ ಚಿಲ್ಲರೆ ಮಾರಾಟಗಾರರಿಗೆ ಮೊಬೈಲ್ ಫೋನ್ ಮತ್ತು ಚಾರ್ಜರ್ ಮಾರಾಟ ಮಾಡಿರುವುದನ್ನು ಮೌಲ್ಯಮಾಪನ ನಡೆಸಿದ್ದ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು, ಚಾರ್ಜರ್​ಗೆ ಶೇ.12ರಿಂದ ಶೇ.14.5 ತೆರಿಗೆ ವಿಧಿಸಿ ನೋಟಿಸ್ ನೀಡಿದ್ದರು. ಅದನ್ನು ಪ್ರಶ್ನಿಸಿ ಕಂಪನಿ 2017ರಲ್ಲಿ ಕರ್ನಾಟಕ ಮೇಲ್ಮನವಿ ಪ್ರಾಧಿಕಾರಕ್ಕೆ (ಕೆಎಟಿ) ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕೆಎಟಿ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಚಾರ್ಜರ್​ಗೆ ಹೆಚ್ಚುವರಿ ತೆರಿಗೆ ಪಾವತಿಗೆ ನೀಡಿದ್ದ ನೋಟಿಸ್ ರದ್ದುಗೊಳಿಸಿತ್ತು. ಅದನ್ನು ಪ್ರಶ್ನಿಸಿ ವಾಣಿಜ್ಯ ತೆರಿಗೆ ಇಲಾಖೆ (ಸರ್ಕಾರ) ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿತ್ತು.

    ಇದನ್ನೂ ಓದಿ: ಕಾಣೆಯಾದ ಹಸು ಹುಡುಕಿಕೊಂಡು ಹೋದ ರೈತನಿಗಾಗಿ ಕಾಡಲ್ಲಿ ಕಾದಿದ್ದ ಜವರಾಯ!

    ವಿಚಾರಣೆ ನಡೆಸಿದ ಹೈಕೋರ್ಟ್, ಕರ್ನಾಟಕ ಮೌಲ್ಯವರ್ಧಿತ ತೆರಿಗೆ (ಕೆವಿಎಟಿ) ಕಾಯ್ದೆ ಅನ್ವಯ ಹೊರಡಿಸಿರುವ ಅಧಿಸೂಚನೆಯಲ್ಲಿ ‘ಟೆಲಿಫೋನ್ ಸೆಟ್’ ಎಂದರೆ ಮೊಬೈಲ್ ಫೋನ್ ಮತ್ತು ಚಾರ್ಜರ್ ಸಹಿತ ಎಂದಾಗುತ್ತದೆ. ಹೀಗಿರುವಾಗ, ಚಾರ್ಜರ್ ಸಮೇತ ಮೊಬೈಲ್ ಫೋನ್ ಪ್ಯಾಕ್ ಮಾಡಿ ಮಾರಾಟ ಮಾಡಿದ ಸಂದರ್ಭದಲ್ಲಿ ಚಾರ್ಜರ್​ಗೆ ಪ್ರತ್ಯೇಕವಾಗಿ ಅಧಿಕ ತೆರಿಗೆ ವಿಧಿಸಲಾಗದು. ಕಾಯ್ದೆಯ ಪ್ರಕಾರ ಮೊಬೈಲ್ ಫೋನ್​ಗೆ ಶೇ.5 ತೆರಿಗೆ ಇದೆ. ಅದರಲ್ಲಿ ಚಾರ್ಜರ್ ಸೇರಿದ್ದರೂ ಮತ್ತೆ ಚಾರ್ಜರ್​ಗೆ ಹೆಚ್ಚುವರಿ ತೆರಿಗೆ ವಿಧಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟು, ಮೇಲ್ಮನವಿ ವಜಾಗೊಳಿಸಿ ಆದೇಶಿಸಿದೆ.

    ಹಂಪಿ ಸ್ಮಾರಕಗಳ ಮೇಲೆ ನೃತ್ಯ ಪ್ರಕರಣ: FIR ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೋರಿದ ಯುವಕ

    ಆಂಟಿ ಎಂಬುದು ಇಂದು ಅಶ್ಲೀಲ ಪದವಾಗಿದೆ: ಆಂಟಿ ಟ್ರೆಂಡ್​ಗೆ ನಟಿ ಕಸ್ತೂರಿ ಖಡಕ್​ ತಿರುಗೇಟು

    ಸಲಿಂಗ ಕಾಮದ ಅನುಭವವಿದೆಯೇ? ನೆಟ್ಟಿಗನ ಪ್ರಶ್ನೆಗೆ ಅನಸೂಯ ಕೊಟ್ಟ ಬೋಲ್ಡ್​ ಉತ್ತರ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts