More

    ಹಂಪಿ ಸ್ಮಾರಕಗಳ ಮೇಲೆ ನೃತ್ಯ ಪ್ರಕರಣ: FIR ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೋರಿದ ಯುವಕ

    ವಿಜಯನಗರ: ಹಂಪಿ ಸ್ಮಾರಕಗಳ ಮೇಲೆ ಡಾನ್ಸ್​ ಮಾಡಿ ವಿವಾದ ಮೈಮೇಲೆ ಎಳೆದುಕೊಂಡು ವ್ಯಾಪಕ ಟೀಕೆಗೆ ಗುರಿಯಾಗಿದ್ದ ಯುವಕ ಇದೀಗ ವಿಡಿಯೋ ಮೂಲಕ ಕ್ಷಮೆಯಾಚಿಸಿದ್ದಾನೆ.

    ಹಂಪಿ ಪೊಲೀಸರು ಯುವಕನ ಮೇಲೆ ಪ್ರಕರಣ ದಾಖಲಿಸುತ್ತಿದ್ದಂತೆಯೇ ಆತ ಕ್ಷಮೆ ಕೋರಿರುವ ವಿಡಿಯೋವನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಮಂಡ್ಯ ಮೂಲದ ದೀಪಕ್ ಗೌಡ ಎಂಬ ಹಂಪಿ ಸ್ಮಾರಕಗಳ ಮೇಲೆ ಮನಬಂದಂತೆ ಡಾನ್ಸ್​ ಮಾಡಿ, ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಈ ವಿಡಿಯೋ ಸಾಕಷ್ಟು ವೈರಲ್​ ಆದ ಬಳಿಕ ದೀಪಕ್​ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

    ಇದನ್ನೂ ಓದಿ: ಕಾಣೆಯಾದ ಹಸು ಹುಡುಕಿಕೊಂಡು ಹೋದ ರೈತನಿಗಾಗಿ ಕಾಡಲ್ಲಿ ಕಾದಿದ್ದ ಜವರಾಯ!

    ದೀಪಕ್​ ಗೌಡ ವಿಶ್ವ ಪಾರಂಪಾರಿಕ ತಾಣ, ಹಂಪಿಯ ಹೇಮಕೂಟ ಪರ್ವತದ ಜೈನ ದೇಗುಲದ ಮೇಲೆ ಹತ್ತಿ ನೃತ್ಯ ಮಾಡಿದ್ದ. ಇದನ್ನು ದಿಗ್ವಿಜಯ ನ್ಯೂಸ್ ಸಹ ವರದಿ ಮಾಡಿತ್ತು. ವರದಿ ಮಾಡಿದ ಬೆನ್ನೆಲ್ಲೆ ಪೊಲೀಸರು ಅಲರ್ಟ್ ಆಗಿ, ದೀಪಕ್​ ಗೌಡನ ವಿರುದ್ಧ ಎಫ್​ಐಆರ್​ ದಾಖಲಿಸಿದ್ದಾರೆ. ಅತ್ತ ಎಫ್​ಐಆರ್​ ದಾಖಲಾಗುತ್ತಿದ್ದಂತೆ ಇತ್ತ ಯುವಕ ಕ್ಷಮೆಯಾಚಿಸಿದ್ದಾನೆ. ನಾನು ಹಳ್ಳಿ ಹುಡುಗ. ನನಗೆ ಗೊತ್ತಿಲ್ಲದೆ ವಿಡಿಯೋ ಪೋಸ್ಟ್​ ಮಾಡಿದ್ದೇನೆ. ನನ್ನನ್ನು ಕ್ಷಮಿಸಿ ಎಂದು ಕೇಳಿಕೊಂಡಿದ್ದಾನೆ.

    ವಿಜಯನಗರ ಡಿಸಿ ಟಿ. ವೆಂಕಟೇಶ್ ಸ್ವತಃ ಸ್ಥಳ ಪರಿಶೀಲನೆ ಮಾಡಿದರು. ಪೊಲೀಸ್​ ವರಿಷ್ಠಾಧಿಕಾರಿ ಶ್ರೀ ಹರಿಬಾಬು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಫ್​ಐಆರ್​ ದಾಖಲಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಪೊಲೀಸ್ ಪತಿ-ಪತ್ನಿ ವರ್ಗಕ್ಕೆ ಹೊಸ ಫಜೀತಿ: ಏಳು ವರ್ಷ ಸೇವೆ ಕಡ್ಡಾಯಕ್ಕೆ ಸಿಬ್ಬಂದಿ ಆಕ್ಷೇಪ

    ಈ ಒಂದು ಕಾರಣಕ್ಕೆ ನಟ ಶಾರುಖ್​ ಖಾನ್​ ಮಹಿಳಾ ಬಾಡಿಗಾರ್ಡ್ಸ್​ ಹೊಂದಿದ್ದಾರಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts