More

    ಪೊಲೀಸ್ ಪತಿ-ಪತ್ನಿ ವರ್ಗಕ್ಕೆ ಹೊಸ ಫಜೀತಿ: ಏಳು ವರ್ಷ ಸೇವೆ ಕಡ್ಡಾಯಕ್ಕೆ ಸಿಬ್ಬಂದಿ ಆಕ್ಷೇಪ

    ಬೆಂಗಳೂರು: ಸ್ವಂತ ಕೋರಿಕೆ ಮೇರೆಗೆ ಪತಿ-ಪತ್ನಿ ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶ ಸಿಕ್ಕ ಖುಷಿಯಲ್ಲಿದ್ದ ಸಬ್ ಇನ್​ಸ್ಪೆಕ್ಟರ್ ಹಾಗೂ ಕಾನ್​ಸ್ಟೆಬಲ್​ಗಳಿಗೆ ಮತ್ತೆ ನಿರಾಸೆಯಾಗಿದೆ. ಪ್ರೊಬೇಷನರಿ ಅವಧಿ ಮುಗಿಸುವ ಜತೆಗೆ ಒಂದೇ ಸ್ಥಳದಲ್ಲಿ 7 ವರ್ಷ ಸೇವಾವಧಿ ಪೂರೈಸಿರಬೇಕು ಎಂದು ಪೊಲೀಸ್ ಇಲಾಖೆ, ಬುಧವಾರ ಹೊರಡಿಸಿರುವ ಆದೇಶದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಗೆಜೆಟ್ ನೋಟಿಫಿಕೇಷನ್​ನಲ್ಲಿ ಇಲ್ಲದ ನಿಯಮವನ್ನು ಇಲಾಖೆ ಜ್ಞಾಪನಾ ಪತ್ರದಲ್ಲಿ ಸೇರಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

    ಈ ಮೊದಲು ಕರ್ನಾಟಕ ನಾಗರಿಕ ಸೇವಾ (ತಿದ್ದುಪಡಿ) ನಿಯಮ 2021 ಹೊರಡಿಸುವ ಮೂಲಕ ಸ್ವಂತ ಕೋರಿಕೆ ವರ್ಗಾವಣೆಗೆ ಅವಕಾಶವಿದ್ದ 16 (ಎ) ನಿಯಮವನ್ನು ಕಾಯ್ದೆಯಿಂದ ತೆಗೆದುಹಾಕಲಾಗಿತ್ತು. ಇದರಿಂದ ಸಿ ಮತ್ತು ಡಿ ದರ್ಜೆಯ ನೌಕರರನ್ನು ಒಂದು ಜೇಷ್ಠತಾ ಘಟಕದಿಂದ ಇನ್ನೊಂದು ಘಟಕದ ಸಮಾನ ಹುದ್ದೆಗೆ ಸ್ವಂತ ಕೋರಿಕೆ ಮೇರೆಗೆ ವರ್ಗಾವಣೆಗೊಳಿಸಲು ಇಲಾಖಾ ಮುಖ್ಯಸ್ಥರಿಗಿದ್ದ ಅಧಿಕಾರವನ್ನು ಮೊಟಕುಗೊಳಿಸಲಾಗಿತ್ತು. ಪತಿ-ಪತ್ನಿ ವರ್ಗಾವಣೆಗೂ ಅವಕಾಶ ಇರಲಿಲ್ಲ. ಆದರೆ, ಪೊಲೀಸ್ ವಲಯದಿಂದ ಅತೃಪ್ತಿ ವ್ಯಕ್ತವಾದ ಹಿನ್ನೆಲೆಯಲ್ಲಿ ಪುನಃ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (ವರ್ಗಾವಣೆ) (ವಿಶೇಷ) ನಿಯಮ 2022ಅನ್ನು ಜಾರಿಗೊಳಿಸಿ 16 (ಎ) ನಿಯಮವನ್ನು ಮರುಸ್ಥಾಪನೆ ಮಾಡುವ ಮೂಲಕ ಸ್ವಂತ ಕೋರಿಕೆ ಮೇರೆಗೆ ಪತಿ-ಪತ್ನಿ ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶ ಕೊಡಲಾಗಿತ್ತು. ಈ ಸಂಬಂಧ ಗೆಜೆಟ್ ಅಧಿಸೂಚನೆಯನ್ನೂ ಹೊರಡಿಸಿತ್ತು.

    ಇದನ್ನೂ ಓದಿ: ಮನೆಯೊಳಗಿನ ಗಣೇಶನ ಫೋಟೋ ಫ್ರೇಮ್​ ಒಳಗಿತ್ತು ನಾಗರಹಾವು!

    16 (ಎ) ನಿಯಮ ಮರುಸ್ಥಾಪನೆ ಬಳಿಕ 2023 ಫೆ.22ರಂದು ರಾಜ್ಯಪತ್ರ ಹೊರಡಿಸಿದ್ದ ಸರ್ಕಾರ, ಸಬ್ ಇನ್​ಸ್ಪೆಕ್ಟರ್ ಮತ್ತು ಕಾನ್​ಸ್ಟೆಬಲ್​ಗಳು (ಪತ್ನಿ ಸರ್ಕಾರಿ ನೌಕರರಾಗಿದ್ದರೆ) ಪ್ರೊಬೇಷನರಿ ಅವಧಿ ಮುಗಿದ ತಕ್ಷಣ ಅಂತರ ಜಿಲ್ಲಾ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಉಲ್ಲೇಖಿಸಿತ್ತು. ಆದರೆ, ಬುಧವಾರ (ಮಾ.1) ಪೊಲೀಸ್ ಇಲಾಖೆ ಹೊರಡಿಸಿರುವ ಮೆಮೋರಂಡಮ್ಲ್ಲಿ ಪ್ರೊಬೇಷನರಿ ಅವಧಿ ಮುಗಿಸಿರುವ ಜತೆಗೆ ಒಂದೇ ಕಡೆ 7 ವರ್ಷ ಸೇವಾವಧಿ ಪೂರ್ಣಗೊಳಿಸಿರಬೇಕು ಎಂದು ಷರತ್ತು ವಿಧಿಸಿದೆ. ರಾಜ್ಯಪತ್ರದಲ್ಲಿ ಇರದ ನಿಯಮವನ್ನು ಪೊಲೀಸ್ ಇಲಾಖೆ ಆದೇಶದಲ್ಲಿ ನಮೂದಿಸಿರುವುದಕ್ಕೆ ಗೊಂದಲ ಸೃಷ್ಟಿಯಾಗಿದೆ.

    ಸಿಬ್ಬಂದಿ ಆಗ್ರಹ ಏನು?
    ಪತಿ-ಪತ್ನಿ ವರ್ಗಾವಣೆಗೆ 7 ವರ್ಷ ಸೇವೆ ಪೂರ್ಣಗೊಂಡಿರಬೇಕು ಎಂಬುದು ಸರಿಯಲ್ಲ. ಹೊಸದಾಗಿ ಮದುವೆಯಾದವರು 7 ವರ್ಷ ಬೇರೆ ಬೇರೆ ಜಿಲ್ಲೆಗಳಲ್ಲಿ ಕೆಲಸ ಮಾಡಿಕೊಂಡಿದ್ದರೆ ಸಂಸಾರ ನಡೆಸುವುದು ಕಷ್ಟ. ಯಾವುದೇ ಷರತ್ತು ವಿಧಿಸದೆ ಪತಿ-ಪತ್ನಿ ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ವರ್ಗಾವಣೆಗೊಳಿಸಬೇಕು ಎಂಬುದು ನೌಕರರ ಒತ್ತಾಯವಾಗಿದೆ.

    ರಾಜ್ಯಪತ್ರದಲ್ಲೇನಿತ್ತು?
    * ಪಿಎಸ್​ಐ ಹಾಗೂ ಕಾನ್​ಸ್ಟೆಬಲ್​ಗಳು (ಪತಿ-ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದರೆ) ಪ್ರೊಬೇಷನರಿ ಅವಧಿ ತೃಪ್ತಿಕರವಾಗಿ ಮುಗಿಸಿದ್ದರೆ ವರ್ಗಾವಣೆಗೆ ಪರಿಗಣಿಸಬಹುದು.
    * ಕರ್ನಾಟಕ ನಾಗರಿಕ ಸೇವಾ ನಿಯಮ (ಸಾಮಾನ್ಯ ನೇಮಕಾತಿ) 16-ಎ ಅನ್ವಯ ವರ್ಗಾವಣೆಗೊಳ್ಳುವ ಹುದ್ದೆ ಖಾಲಿ ಇದ್ದರೆ ಜೇಷ್ಠತೆ ಬಿಟ್ಟು ವರ್ಗಾವಣೆ ಮಾಡಬಹುದು.
    * ಮಾಜಿ ಸೈನಿಕರಾಗಿದ್ದಲ್ಲಿ ಒಂದೇ ಕಡೆ ಕನಿಷ್ಠ 3 ವರ್ಷ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕು.

    ಇದನ್ನೂ ಓದಿ: ಎರಡನೇ ಪತಿಯೂ ಸಾವಿಗೀಡಾದ್ದರಿಂದ ನೊಂದು ಹೆಣ್ಣುಮಕ್ಕಳಿಬ್ಬರ ಜತೆ ಒಂದೇ ಕುಣಿಕೆಗೆ ಕೊರಳೊಡ್ಡಿದ ತಾಯಿ!

    ಪೊಲೀಸ್ ಆದೇಶದಲ್ಲೇನಿದೆ?
    * ಮದುವೆಯಾಗಿರುವ ಆಧಾರದಲ್ಲಿ ಎಸ್​ಐ ಮತ್ತು ಕಾನ್​ಸ್ಟೆಬಲ್​ಗಳಿಗೆ ಒಂದು ಘಟಕದಿಂದ ಇನ್ನೊಂದು ಘಟಕಕ್ಕೆ ವರ್ಗಾವಣೆಗೆ ಅವಕಾಶ.
    * ಎಸ್​ಐ ಮತ್ತು ಕಾನ್​ಸ್ಟೆಬಲ್​ಗಳು 7 ವರ್ಷ ಸೇವಾವಧಿ ಮುಗಿಸಿರಬೇಕು. (ಮಾಜಿ ಯೋಧರು 3 ವರ್ಷ ಸೇವಾವಧಿ ಆಗಿರಬೇಕು)
    * ಪ್ರೊಬೇಷನರಿ ಅವಧಿ ತೃಪ್ತಿಕರವಾಗಿ ಪೂರ್ಣಗೊಳಿಸಿದ್ದು, ಹುದ್ದೆ ಖಾಲಿ ಇದ್ದರೆ ವರ್ಗಾವಣೆ ಮಾಡಲಾಗುತ್ತದೆ.

    ಈ ಒಂದು ಕಾರಣಕ್ಕೆ ನಟ ಶಾರುಖ್​ ಖಾನ್​ ಮಹಿಳಾ ಬಾಡಿಗಾರ್ಡ್ಸ್​ ಹೊಂದಿದ್ದಾರಂತೆ!

    ಕೈಲಾಸಕ್ಕೆ ವಿಶ್ವಸಂಸ್ಥೆ ಮಾನ್ಯತೆ ಸಿಕ್ಕಿತೆಂದು ಕತೆ ಕಟ್ಟಿದ ನಿತ್ಯಾನಂದ- ಅಸಲಿ ಕಥೆ ಏನು ಗೊತ್ತಾ?

    ಎಲಾನ್​ ಮಸ್ಕ್ ಮತ್ತೆ ನಂ.1 ಶ್ರೀಮಂತ: ಗೌತಮ್ ಅದಾನಿಗೆ ಎಷ್ಟೇ ಸ್ಥಾನ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts