More

    ರಾಜ್ಯ ಪೊಲೀಸ್ ಇಲಾಖೆಯ 92,841 ಅಧಿಕಾರಿ, ಸಿಬ್ಬಂದಿಗೆ 20 ಲಕ್ಷ ರೂ. ಗುಂಪು ವಿಮೆ

    ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ 92,841 ಅಧಿಕಾರಿ, ಸಿಬ್ಬಂದಿಗೆ 20 ಲಕ್ಷ ರೂ. ಮೌಲ್ಯದ ವಿಶೇಷ ಗುಂಪು ವಿಮಾ ಪಾಲಿಸಿ ಪಡೆಯಲು ಪೊಲೀಸ್ ಇಲಾಖೆ ಆದೇಶಿಸಿದೆ.

    2023-24ನೇ ಸಾಲಿನ ಅಕ್ಟೋಬರ್ 11 ರಿಂದ 2024ರ ಅಕ್ಟೋಬರ್ 10ರ ವರೆಗೂ ಅವಧಿ ಇದೆ. ಪೊಲೀಸ್ ಇಲಾಖೆಯ ಅನುಯಾಯಿ, ಕಾನ್‌ಸ್ಟೆಬಲ್, ಮುಖ್ಯಪೇದೆ, ಸಹಾಯಕ ಸಬ್‌ಇನ್‌ಸ್ಪೆಕ್ಟರ್, ಸಬ್‌ಇನ್‌ಸ್ಪೆಕ್ಟರ್, ಇನ್‌ಸ್ಪೆಕ್ಟರ್ ಹುದ್ದೆಯಲ್ಲಿ ಇರುವ 92,841 ಅಧಿಕಾರಿ, ಸಿಬ್ಬಂದಿಗೆ ಅನ್ವಯ ಆಗಲಿದೆ. ಕರ್ತವ್ಯದ ಮೇಲಿರುವಾಗ ಆಕಸ್ಮಿಕ/ಅಪಘಾತದಲ್ಲಿ ಮೃತಪಟ್ಟಲ್ಲಿ ಮೃತರ ಕುಟುಂಬಕ್ಕೆ 20 ಲಕ್ಷ ರೂ. ವಿಮಾ ಹಣ ಸಿಗಲಿದೆ ಎಂದು ಡಿಜಿ-ಐಜಿಪಿ ಡಾ. ಅಲೋಕ್ ಮೋಹನ್ ತಿಳಿಸಿದ್ದಾರೆ.

    ಹಲಸೂರು ಗೇಟ್ ಪೊಲೀಸ್ ಠಾಣೆ ಪಕ್ಕದಲ್ಲಿ ಇರುವ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್‌ನಲ್ಲಿ ವಿಮಾ ಪಾಲಿಸಿ ಮುಂದುವರಿಸಲಾಗಿದೆ. ಆಕಸ್ಮಿಕ, ಅಪಘಾತದಲ್ಲಿ ಮೃತಪಟ್ಟಲ್ಲಿ (ಸ್ವಾಭಾವಿಕ ಮರಣಗಳಾದ ಕಾಯಿಲೆ, ಹೃದಯಾಘಾತ, ಆತ್ಮಹತ್ಯೆ ಹೊರತುಪಡಿಸಿ) 1 ತಿಂಗಳ ಒಳಗಾಗಿ ವಿಮಾ ಪರಿಹಾರ ಸಿಗಲಿದೆ. ಅದಕ್ಕಾಗಿ ಮೃತಪಟ್ಟ ದಿನಾಂಕದಿಂದ 7 ದಿನಗಳ ಒಳಗಾಗಿ ವಿಮಾ ಕಂಪನಿಗೆ ನೇರವಾಗಿ ಪತ್ರದ ಮೂಲಕ ಅಥವಾ ಇಮೇಲ್‌ಗೆ ಮಾಹಿತಿ ರವಾನೆ ಮಾಡಬೇಕು. 15 ದಿನಗಳ ಒಳಗೆ ಕ್ಲೈಂ ಭರ್ತಿ ಮಾಡಿ ಘಟಕಾಧಿಕಾರಿಗಳೇ ಖುದ್ದು ದೃಢೀಕರಿಸಿ ನೇರವಾಗಿ ವಿಮಾ ಕಂಪನಿ ‘ಸೀನಿಯರ್ ಡಿವಿಜನಲ್ ಮ್ಯಾನೇಜರ್’ಗೆ ತಲುಪಿಸಬೇಕು.

    ನಿಗದಿತ ಸಮಯದಲ್ಲಿ ವಿಮಾ ಕಂಪನಿಗೆ ಮಾಹಿತಿ, ದಾಖಲೆ ಒದಗಿಸದೆ ಇದ್ದರೇ ವಿನಾಕಾರಣ ವಿಳಂಬ ಮಾಡಿದರೇ ಸಂಬಂಧಪಟ್ಟ ಘಟಕಾಧಿಕಾರಿಗಳೇ ಹೊಣೆಗಾರರು. ವಿಮಾ ಕಂಪನಿಗಳು ಕೇಳುವ ದಾಖಲೆ ಮತ್ತು ಸಮಸ್ಯೆಗಳನ್ನು ಶೀಘ್ರದಲ್ಲಿಯೇ ಬಗೆಹರಿಸಬೇಕು. ಇಲ್ಲವಾದರೆ, ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಪ್ರತಿ ತಿಂಗಳು 5ಕ್ಕೆ ಸಲ್ಲಿಸಿ

    ಅಪಘಾತ, ಆಕಸ್ಮಿಕವಾಗಿ ಮರಣ ಹೊಂದಿದ್ದರೇ ಅಂತಹ ಅಧಿಕಾರಿ, ಸಿಬ್ಬಂದಿ ವಿವರವನ್ನು ಪ್ರತಿ ತಿಂಗಳು 5ನೇ ತಾರೀಖಿನ ಒಳಗಾಗಿ ವಿಮಾ ಕಂಪನಿಗೆ ಮಾಹಿತಿ ನೀಡಬೇಕು. ನಿಗದಿತ ದಿನಾಂಕಕ್ಕೆ ವಿಮಾ ಕ್ಲೈಮ್‌ಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಒದಗಿಸಬೇಕು ಎಂದು ಡಿಜಿ-ಐಜಿಪಿ ಡಾ. ಅಲೋಕ್ ಮೋಹನ್ ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts