More

    ಉತ್ತರಪ್ರದೇಶದಲ್ಲಿ ನ. 25ರಂದು ನೋ ನಾನ್ ವೆಜ್ ಡೇ/ಮಾಂಸ ಮಾರಾಟ ನಿಷೇಧ

    ನವದೆಹಲಿ: ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ಸಂತ ಟಿ.ಎಲ್. ವಾಸ್ವಾನಿ ಅವರ ಜನ್ಮದಿನದ ಅಂಗವಾಗಿ ನವೆಂಬರ್ 25 ಅನ್ನು “ನೋ ನಾನ್ ವೆಜ್ ಡೇ” (ಮಾಂಸಾಹಾರರಹಿತ ದಿನ)ಎಂದು ಘೋಷಿಸಿದೆ. ರಾಜ್ಯಾದ್ಯಂತ ಎಲ್ಲಾ ಮಾಂಸದ ಅಂಗಡಿಗಳು ಮತ್ತು ಕಸಾಯಿಖಾನೆಗಳನ್ನು I ಈ ದಿನ ಮುಚ್ಚಲಾಗುವುದು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

    ಸಂತ ತನ್ವರದಾಸ್​ ಲೀಲಾರಾಮ್ ವಾಸ್ವಾನಿ ಅವರು ಭಾರತೀಯ ಶಿಕ್ಷಣತಜ್ಞರಾಗಿದ್ದು, ಅವರು ಶಿಕ್ಷಣದಲ್ಲಿ ಮೀರಾ ಚಳವಳಿ ಪ್ರಾರಂಭಿಸಿದರು. ಹೈದರಾಬಾದ್‌ನ ಸಿಂಧ್‌ನಲ್ಲಿ (ಈಗ ಪಾಕಿಸ್ತಾನದಲ್ಲಿದೆ) ಸಂತ ಮೀರಾ ಶಾಲೆ ಸ್ಥಾಪಿಸಿದರು. ಪುಣೆಯಲ್ಲಿ ಅವರ ಜೀವನ ಮತ್ತು ಬೋಧನೆಗೆ ಮೀಸಲಾದ ದರ್ಶನ್ ಮ್ಯೂಸಿಯಂ ತೆರೆಯಲಾಗಿದೆ.

    ನವೆಂಬರ್ 25 ರಂದು ಸಾಧು ವಾಸ್ವಾನಿ ಅವರ ಜನ್ಮದಿನವನ್ನು ಅಂತಾರರಾಷ್ಟ್ರೀಯ ಮಾಂಸರಹಿತ ದಿನವೆಂದು ಗುರುತಿಸಲಾಗಿದೆ.

    ರಫ್ತಿಗಾಗಿ ತಯಾರಿಸಿದ ಉತ್ಪನ್ನಗಳಿಗೆ ವಿನಾಯಿತಿ ನೀಡುವುದರೊಂದಿಗೆ ತಕ್ಷಣವೇ ಜಾರಿಗೆ ಬರುವಂತೆ ಹಲಾಲ್ ಪ್ರಮಾಣೀಕರಣದೊಂದಿಗೆ ಆಹಾರ ಉತ್ಪನ್ನಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಮಾರಾಟದ ಮೇಲೆ ಯುಪಿ ಸರ್ಕಾರವು ನಿಷೇಧ ಹೇರಿದ ಕೆಲವು ದಿನಗಳ ನಂತರ ಈಗ ಈ ಪ್ರಕಟಣೆ ಬಂದಿದೆ.

    ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ನಿಷೇಧದ ನಂತರ, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (ಎಫ್‌ಎಸ್‌ಡಿಎ) ಆಹಾರ ಪದಾರ್ಥಗಳನ್ನು ಪರೀಕ್ಷಿಸಲು ಹಲವಾರು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ನವೆಂಬರ್ 22 ರಂದು, ಎಫ್‌ಎಸ್‌ಡಿಎ ತಂಡವು ಉತ್ತರ ಪ್ರದೇಶದ ಲಖನೌದಲ್ಲಿ ಫಾಸ್ಟ್ ಫುಡ್ ದೈತ್ಯ ಮೆಕ್‌ಡೊನಾಲ್ಡ್ಸ್ ಔಟ್‌ಲೆಟ್ ಮೇಲೆ ದಾಳಿ ನಡೆಸಿತು, ಇದು ಅನಧಿಕೃತ ಹಲಾಲ್-ಪ್ರಮಾಣೀಕೃತ ಉತ್ಪನ್ನಗಳ ಮೇಲೆ ರಾಜ್ಯ ಸರ್ಕಾರದ ಇತ್ತೀಚಿನ ಶಿಸ್ತುಕ್ರಮದ ಭಾಗವಾಗಿದೆ.

    ಲಕ್ನೋದ ಸಹಾರಾ ಮಾಲ್‌ನಲ್ಲಿಯೂ ದಾಳಿ ನಡೆಸಲಾಗಿದ್ದು, ಎಂಟು ಕಂಪನಿಗಳು ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ.

    52 ಲಕ್ಷಕ್ಕೂ ಮತದಾರರ ಒಲವು ಯಾರ ಪರ?: ರಾಜಸ್ಥಾನ ವಿಧಾನಸಭೆ ಚುನಾವಣೆಗೆ ನ. 25ರಂದು ಮತದಾನ

    ಸುರಂಗ ರಕ್ಷಣಾ ಕಾರ್ಯದಲ್ಲಿ ಗುರುವಾರದಿಂದ ಪ್ರಗತಿಯಿಲ್ಲ/ ಕಾರ್ಮಿಕರ ರಕ್ಷಣೆ ಇನ್ನಷ್ಟು ವಿಳಂಬ

    ಚೀನಾದಲ್ಲಿ ಈ ಬಾರಿ ಕೋವಿಡ್ ಬದಲು ಇನ್‌ಫ್ಲುಯೆಂಜಾ/ ಭಾರತದಲ್ಲಿ ಸದ್ಯಕ್ಕಿಲ್ಲ ಆತಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts