More

    ಸರ್ಕಾರದ ವರ್ಷದ ಈ ಗಿಫ್ಟ್‌ ಬೇಡ: ನಿಗಮ-ಮಂಡಳಿ ಸ್ಥಾನ ತಿರಸ್ಕರಿಸಿದರು!

    ಬೆಂಗಳೂರು: ಸಚಿವ ಸ್ಥಾನದ ಆಕಾಂಕ್ಷಿಗಳೂ ಸೇರಿದಂತೆ ಕೆಲವು ಶಾಸಕರನ್ನು ಸಮಾಧಾನಪಡಿಸುವ ಸಲುವಾಗಿ ನಿಗಮ-ಮಂಡಳಿಗೆ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಬೆನ್ನಲ್ಲೇ ಇದೀಗ ಕೆಲವು ಶಾಸಕರಲ್ಲಿ ಅಸಮಾಧಾನದ ಜ್ವಾಲೆ ಭುಗಿಲೆದ್ದಿದೆ.

    ನಾನು‌‌ ಮ್ಯಾರಾಥಾನ್ ರೇಸ್ ಓಡಲು ಬಂದಿದ್ದೇನೆ, ನೂರು ಮೀಟರ್‌ ಓಡೋಕೆ ಅಲ್ಲ ಎನ್ನುತ್ತಲೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ ಹಾಸನ ಶಾಸಕ ಪ್ರೀತಂಗೌಡ. ಇವರಿಗೆ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ.

    ಈ ಸ್ಥಾನವನ್ನು ನಯವಾಗಿ ತಿರಸ್ಕರಿಸಿರುವ ಇವರು, ನನಗೆ ಅರ್ಜೆಂಟಾಗಿ ಏನೋ ಆಗಬೇಕೆಂಬ ಆಸೆ ಕೂಡ‌ ಇಲ್ಲ. ಈಗಲೇ ಇಂಥದ್ದೊಂದು ಸ್ಥಾನ ಬೇಕಿಲ್ಲ. ಇನ್ನೂ ನನಗೆ 38 ವರ್ಷ. 40-45 ವರ್ಷ ರಾಜಕೀಯದಲ್ಲಿ ಇರುತ್ತೇನೆ. ನನಗೆ ಅಧಿಕಾರದ ಆಸೆಯಿಲ್ಲ ಎನ್ನುತ್ತಲೇ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನಾನು ಯಾವ ಕೆಲಸ ಕೇಳಿದ್ದೇನೋ‌ ಅದನ್ನೆಲ್ಲಾ ಮುಖ್ಯಮಂತ್ರಿಗಳು ಮಾಡಿಕೊಟ್ಟಿದ್ದಾರೆ. ನನಗೆ ನಿಗಮ ಮಂಡಳಿ ಸ್ಥಾನ ಸಿಕ್ಕಿರುವ ವಿಷಯ ಮಾಧ್ಯಮಗಳಿಂದ ಗೊತ್ತಾಗಿದೆ. ಸಿಎಂ ಪ್ರೀತಿಗೆ ಋಣಿಯಾಗಿದ್ದೇನೆ. ಬೇರೆ ಯಾರಾದರೂ ಶಾಸಕರು ನಿಗಮ ಮಂಡಳಿ ಆಸೆ ಇಟ್ಟುಕೊಂಡಿದ್ದಾರೊ ಅವರಿಗೆ ಈ ಸ್ಥಾನ ಕೊಡಲಿ. ನನಗೆ ನಿಗಮ, ಮಂಡಳಿಯಂತಹ ದೊಡ್ಡ ಸ್ಥಾನದ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

    ಇನ್ನೂ ಮೂರು ವರ್ಷ ಸರ್ಕಾರ ಸುಭದ್ರವಾಗಿರಲಿದೆ. ಮುಖ್ಯಮಂತ್ರಿಗಳ ಕೈ ಬಲಪಡಿಸೋ‌ ನಿಟ್ಟಿನಲ್ಲಿ ಬೇರೆಯವರಿಗೆ ಅವಕಾಶ ನೀಡಲಿ. ಹಾಸನ ಜಿಲ್ಲೆಗೆ ನನ್ನನ್ನೇ ಸಿಎಂ ಎಂದು ಭಾವಿಸಿ ಎಲ್ಲರೂ ಸಹಕಾರ ಕೊಟ್ಟಿದ್ದಾರೆ. ನನಗೆ ಯಾವುದೇ ಅಧಿಕಾರದ ಮೇಲೆ ಆಸೆ ಇಲ್ಲ. ಬೇರೆಯಾರಿಗಾದರೂ ಅಸಮಾಧಾನ ಇದ್ದರೆ ಅವರಿಗೆ ಅವಕಾಶ ಮಾಡಿಕೊಡಲಿ ಎಂದು ಹೇಳಿದ್ದಾರೆ. ಸಿಎಂ ಹಾಗೂ ನನ್ನ ನಡುವೆ ತಂದೆ- ಮಗನ ಸಂಬಂಧ ಇದೆ. ಅವರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡುತ್ತೇನೆ. ನನ್ನ ಮನವಿಗೆ ಅವರು ಸ್ಪಂದಿಸುತ್ತಾರೆ ಎಂದೂ ಹೇಳಿದ್ದಾರೆ.

    ಇದನ್ನೂ ಓದಿ: ನಿಗಮ- ಮಂಡಳಿಗೆ ಶಾಸಕರ ನೇಮಕ: ಇಲ್ಲಿದೆ ಡಿಟೇಲ್ಸ್‌

    ಇನ್ನೊಂದೆಡೆ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕವಾಗಿರುವ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

    ನಾನು ನಾಲ್ಕು ಬಾರಿ ಶಾಸಕ ಹಾಗೂ ಒಮ್ಮೆ ಸಚಿವನಾಗಿದ್ದೆ. ನಾನು ಯಾವುದೇ ನಿಗಮ‌, ಮಂಡಳಿ ಅಧ್ಯಕ್ಷ ಸ್ಥಾನ ಕೇಳಿರಲಿಲ್ಲ. ನಿಗಮ ಮಂಡಳಿಗೆ ಅಧ್ಯಕ್ಷನನ್ನಾಗಿ ಮಾಡಲು ನನ್ನ ಯಾರೂ ಸಂಪರ್ಕಿಸಿಲ್ಲ. ನಾನು ನಿಗಮ‌ ಮಂಡಳಿಗೆ ಕಾರ್ಯಕರ್ತರ ಹೆಸರು ಸೂಚಿಸುತ್ತಿದ್ದೆ.ನನಗೆ ನಿಗಮ ಮಂಡಳಿ ಯಾಕೆ ಕೊಟ್ಟರೋ ಗೊತ್ತಿಲ್ಲ ಎಂದು ನುಡಿದಿದ್ದಾರೆ.

    ಅವಕಾಶವಿದ್ದರೆ ಮಂತ್ರಿ ಮಂಡಳದಲ್ಲಿ ಸ್ಥಾನ ನೀಡಿ ಎಂದು ಕೇಳುತ್ತೇನೆ. ಇದರ ಬಗ್ಗೆ ನಾನು ಪಕ್ಷದ ಹಿರಿಯರ ಜತೆ ಮಾತನಾಡ್ತೇನೆ. ನನಗೆ ಈ ಹುದ್ದೆ ಬೇಡ ಎನ್ನುತ್ತಲೇ ಅದನ್ನು ತಿರಸ್ಕರಿಸಿದ್ದಾರೆ.

    ನನಗೆ ನಿಗಮ- ಮಂಡಳಿಗೆ ಅಧ್ಯಕ್ಷರನ್ನಾಗಿ ಮಾಡಿ ನನ್ನ ಸೀನಿಯಾರಿಟಿಗೆ ಸರ್ಕಾರ ತೇಜೋವಧೆ ಮಾಡಿದೆ ಎಂದು ಚಿತ್ರದುರ್ಗ ‌ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಕಿಡಿ ಕಾರಿದ್ದಾರೆ. ಇವರನ್ನು ದೇವರಾಜ ಅರಸ್​ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

    ‘ಬಿಜೆಪಿ‌ ಸರ್ಕಾರ ಒಂದು ವರ್ಷದ ಗಿಫ್ಟ್ ನನಗೆ ಬೇಡ. ನನ್ನ ಸೀನಿಯಾರಿಟಿಯ ತೇಜೋವಧೆಯಾಗಿದೆ. 1998ರಲ್ಲಿ ಕೆ.ಎಚ್.ಬಿ ಅಧ್ಯಕ್ಷನಾಗಿದ್ದೆ. ಈಗ ಕೊಟ್ಟಿರುವ ನಿಗದ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳವುದಿಲ್ಲ ಎಂದಿದ್ದಾರೆ. ಇವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದವರು.

    ರೌಡಿ ದುಬೆ- ಬಿಜೆಪಿ ಮುಖಂಡನ ವಾಟ್ಸ್‌ಆ್ಯಪ್‌ ಚಾಟ್‌ ವೈರಲ್: ಇದರಲ್ಲೇನಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts