More

    ಸರಸ್ವತಿ ದೇವಿಯ ಭಾವಚಿತ್ರಕ್ಕೆ ಪೂಜೆ ಮಾಡಿದ್ದಕ್ಕೆ ಪ್ರಶಸ್ತಿ ತಿರಸ್ಕರಿಸಿದ ಹಿರಿಯ ಕವಿ

    ನಾಗ್ಪುರ: ವೇದಿಕೆಯಲ್ಲಿ ಸರಸ್ವತಿ ಪೂಜೆ ನೆರವೇರಿಸಿ, ಚಿತ್ರಕ್ಕೆ ಮಾಲಾರ್ಪಣೆ ಮಾಡಿದ್ದನ್ನು ಪ್ರತಿಭಟಿಸಿದ ಹಿರಿಯ ಕವಿಯೊಬ್ಬರು ಪ್ರಶಸ್ತಿಯನ್ನೇ ತಿರಸ್ಕರಿಸಿದ ಘಟನೆ ಇಲ್ಲಿ ನಡೆದಿದೆ.

    ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯಲ್ಲಿ ಸರಸ್ವತಿ ದೇವಿಯ ಭಾವಚಿತ್ರವಿಟ್ಟು ಪೂಜೆ ಮಾಡಿದ್ದನ್ನು ಖಂಡಿಸಿ ತಮಗೆ ನೀಡಲಾಗಿದ್ದ ಜೀವಮಾನ ಸಾಧನೆ ಪ್ರಶಸ್ತಿಯನ್ನು ಮರಾಠಿ ಕವಿ ಯಶವಂತ ಮನೋಹರ್ ಧಿಕ್ಕರಿಸಿದ್ದಾರೆ. ಸಾಹಿತ್ಯ ಕಾರ್ಯಕ್ರಮಗಳಲ್ಲಿ ಧರ್ಮದ ಆಚರಣೆಯನ್ನು ತಾವು ಒಪ್ಪದ ಕಾರಣ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದೇನೆ ಎಂದು ಹೇಳಿದ್ದಾರೆ.

    ವಿದರ್ಭ ಸಾಹಿತ್ಯ ಸಂಘಕ್ಕೆ ಈ ಕುರಿತು ಪತ್ರ ಬರೆದಿರುವ ಅವರು, ನಾಗಪುರದ ವಿದರ್ಭ ಸಾಹಿತ್ಯ ಸಂಘ ತಮಗೆ ನೀಡಿದ್ದ ಪ್ರಶಸ್ತಿಯನ್ನು ನಿರಾಕರಿಸಿದ್ದು, ದೇವಿ ಸರಸ್ವತಿ ಚಿತ್ರ, ಮಹಿಳೆಯರು ಮತ್ತು ಶೂದ್ರರನ್ನು ಶಿಕ್ಷಣದಿಂದ ಹೊರಗೆ ಇಡುವುದರ ಸಂಕೇತವಾಗಿದೆ. ಸರಸ್ವತಿಯ ಭಾವಚಿತ್ರ, ಮಹಿಳೆಯರು ಹಾಗೂ ಶೂದ್ರರನ್ನು ಶಿಕ್ಷಣ ಮತ್ತು ಜ್ಞಾನ ಪಡೆಯದಂತೆ ತಡೆಯುವ ಸಂಕೇತ. ಸಾಹಿತ್ಯ ಕಾರ್ಯಕ್ರಮಗಳಲ್ಲಿ ಧಾರ್ಮಿಕತೆಯನ್ನು ನಾನು ಒಪ್ಪುವುದಿಲ್ಲ ಎಂದಿದ್ದಾರೆ.

    ವಿಎಸ್‌ಎಸ್‌ನಿಂದ ಯಾರಾದರೂ ಸಂಪರ್ಕಿಸಿ ಚರ್ಚಿಸಿದ್ದರೆ ಒಂದು ಪರಿಹಾರ ಕಂಡುಹಿಡಿಯಬಹುದಿತ್ತು. ಆದರೆ ಅದು ಆಗಲಿಲ್ಲ ಎಂದು ವಿವರಿಸಿದ್ದಾರೆ. ಸರಸ್ವತಿ ದೇವರ ಫೋಟೊ ಇಡುವ ಬದಲು ಎಲ್ಲ ಸಾಹಿತ್ಯಿಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಾವಿತ್ರಿಭಾಯಿ ಪುಲೆ ಅವರ ಭಾವಚಿತ್ರ ಮತ್ತು ಸಂವಿಧಾನದ ಪ್ರತಿಯನ್ನು ಇಡುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಎಲ್ಲ ಕಲಾವಿದರು, ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಕೋರುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

    ಬರಹಗಾರನಾಗಿ ನನ್ನ ಪಾತ್ರ ಮತ್ತು ನನ್ನ ಯೋಚನೆಗಳ ಬಗ್ಗೆ ವಿದರ್ಭ ಸಾಹಿತ್ಯ ಸಂಘಕ್ಕೆ ಅರಿವು ಇದೆ ಎಂದು ನಾನು ಭಾವಿಸಿದ್ದೇನೆ. ಸರಸ್ವತಿ ದೇವಿಯ ಚಿತ್ರ ಇರುತ್ತದೆ ಎಂದು ನನಗೆ ಹೇಳಲಾಗಿದೆ. ನನ್ನ ಮೌಲ್ಯಗಳನ್ನು ಕಡೆಗಣಿಸಿ ನಾನು ಪ್ರಶಸ್ತಿ ಸ್ವೀಕರಿಸಲಾರೆ. ವಿನಯದಿಂದ ಈ ಪ್ರಶಸ್ತಿಯನ್ನು ನಿರಾಕರಿಸುತ್ತೇನೆ” ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts