More

    ಮಾನವೀಯತೆ ಸಂಗೀತದ ಸಾರಾಂಶ

    ಶಿವಮೊಗ್ಗ: ಸಂಗೀತವೇ ಒಂದು ಸ್ವರ್ಗದ ಅನುಭವ. ಅದರಲ್ಲಿ ಭಾವಗೀತೆಗಳ ಪ್ರಕಾರ ಜನಪ್ರಿಯ. ಭಾವಗೀತೆಗಳಿಗೆ ಕವಿಗಳ ಕೊಡುಗೆ ಅಪಾರ ಎಂದು ಸಂಗೀತ ಕಲಾವಿದ ಪಂಡಿತ್ ಇಂದೂಧರ ಪೂಜಾರ್ ಹೇಳಿದರು.

    ಗೋಪಾಳದ ಪೂಜಾರ್ ಮ್ಯೂಸಿಕ್ ಅಕಾಡೆಮಿಯಿಂದ ಭಾನುವಾರ ಏರ್ಪಡಿಸಿದ್ದ ಭಾವಯಾನ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾವಗೀತೆ ಕ್ಷೇತ್ರಕ್ಕೆ ಅನೇಕ ಕವಿಗಳ ಕೊಡುಗೆ ಇದೆ. ಆ ಮೂಲಕ ಅವರ ಸಂದೇಶಗಳು ಇಂದು ಮನೆ ಮನೆಗೆ ತಲುಪುತ್ತಿವೆ. ಪಿ.ಕಾಳಿಂಗರಾವ್ ಅವರಿಂದ ಆರಂಭವಾದ ಪರಂಪರೆ ಇಂದಿನ ಹೊಸ ತಲೆಮಾರಿನ ಗಾಯಕ, ಗಾಯಕಿಯರು ಭಾವಗೀತೆಗಳ ಭಾವ ಸಾಮ್ರಾಜ್ಯದಲ್ಲಿ ಸಂಗೀತ ರಸಿಕರನ್ನು ತಣಿಸುತ್ತಿದ್ದಾರೆ ಎಂದರು.
    ಕವಿ ಹೇಳುವಂತೆ ಏನಾದರೂ ಆಗಲಿ, ಅವನು ಮೊದಲು ಮಾನವನಾಗಬೇಕು. ಮಾನವೀಯತೆಯೇ ಸಂಗೀತದ ಸಾರಾಂಶ. ಭಾವಗೀತೆಗಳನ್ನು ಸುಮಾರು 60 ವರ್ಷಗಳ ಹಿಂದೆ ನಾನು ಪ್ರಸ್ತುತಪಡಿಸಿದ್ದೇನೆ. ಅನೇಕ ವರ್ಷಗಳಿಂದಲೂ ಈ ಗೀತೆಗಳು ಆಕಾಶವಾಣಿಯಲ್ಲಿ ಮತ್ತೆ ಮತ್ತೆ ಪ್ರಸಾರವಾಗುತ್ತಿವೆ ಎಂದು ಹೇಳಿದರು.
    ಅಕಾಡೆಮಿ ಮುಖ್ಯಸ್ಥ ರಾಜೀವ್ ಪೂಜಾರ್ ಮಾತನಾಡಿ, ಸಂಗೀತ ಮಾನಸಿಕ ಶಾಂತಿ ನೀಡುತ್ತದೆ. ನಮ್ಮ ತಂದೆಯವರಿಗೆ 85 ವರ್ಷ. ಕಳೆದ ತಿಂಗಳು ಅವರಿಗೆ ಹೃದಯದ ಚಿಕಿತ್ಸೆ ಆಗಿತ್ತು. ಇಂದು ಅವರು ಸ್ವತಃ ಹಾಡುವುದನ್ನು ನೋಡಿದರೆ ಈ ಶಕ್ತಿ ಸಂಗೀತದಿಂದಲೇ ಬಂದಿದೆ ಎಂದು ಭಾವುಕರಾದರು.
    ಪ್ರಮುಖರಾದ ಡಾ. ಎಸ್.ಆರ್.ನಾಗರಾಜ್, ವೀಣಾ ನಾಗರಾಜ್, ಪಂ.ರಮೇಶ್ ಉಪಾಧ್ಯಾಯ, ರೇಣುಕಾ ಕಾರಂತ್, ನಿಖಿಲ್ ಕಾರಂತ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts