More

    ವಿದೇಶಗಳಲ್ಲಿ ತಿರಸ್ಕೃತಗೊಳ್ಳುತ್ತಿದೆ ಭಾರತೀಯ ಚಹಾ; ಕಾರಣವಿದು…

    ಕೋಲ್ಕತ: ಕೆಲವೇ ದಿನಗಳ ಹಿಂದಷ್ಟೇ ಚಹಾ ದಿನ ಆಚರಣೆಗೊಂಡಿದ್ದು, ಚಹಾಪ್ರಿಯರೆಲ್ಲ ಸಂಭ್ರಮಿಸಿದ್ದರು. ಆದರೆ ಇದೀಗ ಚಹಾ ಕುರಿತು ಬೇಸರದ ಸಂಗತಿಯೊಂದು ಹೊರಬಿದ್ದಿದೆ. ಅದೇನೆಂದರೆ ಭಾರತೀಯ ಚಹಾವನ್ನು ಹಲವರು ತಿರಸ್ಕರಿಸುತ್ತಿರುವುದು ಬೆಳಕಿಗೆ ಬಂದಿದೆ.

    ಇಂಡಿಯನ್​ ಟೀ ಎಕ್ಸ್​ಪೋರ್ಟರ್ಸ್​ ಅಸೋಸಿಯೇಷನ್​ (ಐಟಿಇಎ) ಅಧ್ಯಕ್ಷ ಅಂಶುಮಾನ್ ಕನೋರಿಯಾ ಇಂಥದ್ದೊಂದು ಮಾಹಿತಿಯನ್ನು ಹೊರಗೆಡಹಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಮಾತ್ರವಲ್ಲದೆ ದೇಶೀಯವಾಗಿಯೂ ಚಹಾ ತಿರಸ್ಕೃತಗೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.

    ಅಂತಾರಾಷ್ಟ್ರೀಯ ಹಾಗೂ ದೇಶೀಯವಾಗಿ ಕಳುಹಿಸಿದ್ದ ಟೀ ಪುಡಿಯನ್ನು ತಿರಸ್ಕರಿಸಿದ ಸರಣಿ ಪ್ರಕರಣಗಳೇ ಇವೆ. ಚಹಾದಲ್ಲಿ ಕೀಟನಾಶಕ ಮತ್ತು ಇತರ ರಾಸಾಯನಿಕಗಳು ಅನುಮತಿ ಇರುವ ಮಟ್ಟಕ್ಕಿಂತಲೂ ಅಧಿಕ ಇರುವುದೇ ಈ ತಿರಸ್ಕಾರಕ್ಕೆ ಕಾರಣ ಎಂದು ಅವರು ತಿಳಿಸಿದ್ದಾರೆ.

    ಶ್ರೀಲಂಕಾದಲ್ಲಿನ ಪರಿಸ್ಥಿತಿಯಿಂದಾಗಿ ಜಾಗತಿಕ ಮಟ್ಟದಲ್ಲಿ ಟೀ ಮಾರುಕಟ್ಟೆಯಲ್ಲಿ ಸೃಷ್ಟಿಯಾಗಿರುವ ನಿರ್ವಾತದ ಸದ್ಬಳಕೆ ಮಾಡಿಕೊಳ್ಳಲು ಚಹಾ ಮಂಡಳಿ ಗಮನ ಹರಿಸಿದ್ದರೂ, ರವಾನಿಸಲ್ಪಡು ಟೀ ತಿರಸ್ಕೃತಗೊಳ್ಳುತ್ತಿರುವುದು ಹಿನ್ನಡೆಯಾಗಿ ಪರಿಣಮಿಸಿದೆ ಎಂದು ಅವರು ಹೇಳಿದ್ದಾರೆ.

    ದೇಶದಲ್ಲಿ ಮಾರಾಟವಾಗುವ ಎಲ್ಲ ಚಹಾಪುಡಿಯೂ ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರದ ನಿಯಮಗಳಿಗೆ ಅನುಗುಣವಾಗಿ ಇರಬೇಕು. ಆದರೆ ಬಹಳಷ್ಟು ಗ್ರಾಹಕರು ಅಧಿಕ ರಾಸಾಯನಿಕ ಇರುವ ಟೀ ಖರೀದಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

    ಬೇರೆ ದೇಶಗಳು ಚಹಾಗೆ ಸಂಬಂಧಿಸಿದಂತೆ ಕಠಿಣ ಕ್ರಮಗಳನ್ನು ಅನುಸರಿಸುತ್ತಿವೆ. ಕೆಲವು ಯುರೋಪಿಯನ್ ಸ್ಟ್ಯಾಂಡರ್ಡ್ಸ್ ಅನುಸರಿಸುತ್ತಿದ್ದು, ಅದು ಎಫ್​ಎಸ್​ಎಸ್ಎಐ ನಿಯಮಗಳಿಗಿಂತಲೂ ಕಠಿಣವಾದುದಾಗಿವೆ ಎನ್ನುವ ಕನೋರಿಯಾ, 2021ರಲ್ಲಿ ಭಾರತ 5,246.89 ಕೋಟಿ ರೂ. ಮೊತ್ತದ ಚಹಾ ರಫ್ತು ಮಾಡಿತ್ತು ಎಂಬುದಾಗಿ ತಿಳಿಸಿದ್ದಾರೆ.

    ಕರೊನಾ ಕುರಿತ ಹಣದಲ್ಲೂ ಪಾಲು ಕೇಳಿದ ಪಾಲಿಕೆ ಆಯುಕ್ತ ಎಸಿಬಿ ಬಲೆಗೆ; ಅಕೌಂಟೆಂಟ್​ ಕೂಡ ಬಂಧನ..

    ಮದ್ಯಪಾನ ಮಾಡಲು ಹಣ ಕೊಡಲಿಲ್ಲವೆಂದು ತಾಯಿಯನ್ನೇ ಕೊಂದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts