More

    ಮದ್ವೆಯಾದ ಎರಡೇ ವಾರಕ್ಕೆ ಯುವತಿ ಆತ್ಮಹತ್ಯೆಗೆ ಶರಣು: ಕಣ್ಣೀರು ತರಿಸುವಂತಿದೆ ತಾಯಿಗೆ ಬರೆದ ಡೆತ್​ನೋಟ್​!

    ಹೈದರಾಬಾದ್​: ಇಷ್ಟವಿಲ್ಲದಿದ್ದರೂ ಬಲವಂತದಿಂದ ಮಕ್ಕಳಿಗೆ ಮದುವೆ ಮಾಡಿದ್ರೆ ಏನಾಗಬಹುದು ಎಂಬುದಕ್ಕೆ ತೆಲಂಗಾಣದ ವಾರಂಗಲ್​ ನಗರ ಜಿಲ್ಲೆಯ ನಾರಾಯಣಗಿರಿಯಲ್ಲಿ ನಡೆದ ದುರಂತವೊಂದು ತಾಜಾ ಉದಾಹರಣೆಯಾಗಿದೆ.

    ರಾವಲಿ ಹೆಸರಿನ ಯುವತಿಗೆ ಡಿಸೆಂಬರ್​ 11ರಂದು ಭಿಮದೇವರ ಪಲ್ಲಿ ಮಂಡಲದ ಗಾಂಧಿನಗರ ನಿವಾಸಿ ಐಲಾಬೊಯಿನಾ ರಾಜು ಎಂಬಾತನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ರಾವಲಿಗೆ ಮದುವೆ ಇಷ್ಟವಿರಲಿಲ್ಲ. ಕಾರಣ ಆಕೆ ಮತ್ತೊಬ್ಬ ಯುವಕ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು.

    ಇದನ್ನೂ ಓದಿ: ಸಂಬಳ ಕೊಡುತ್ತೇನೆಂದಾಕೆ ವಿಚ್ಛೇದನದ ಬೆದರಿಕೆ ಹಾಕುತ್ತಿದ್ದಾಳೆ: ಪತ್ನಿಯ ಆಸ್ತಿಯಲ್ಲಿ ಪಾಲು ಸಿಗುವುದೆ?

    ರಾವಲಿ ಕುಟುಂಬ ಮದುವೆ ಪ್ರಸ್ತಾಪ ಮಾಡಿದಾಗಲೇ ಯುವಕನೊಬ್ಬನನ್ನು ಪ್ರೀತಿಸುತ್ತಿರುವುದಾಗಿ ಬಹಿರಂಗಪಡಿಸಿದ್ದಳು. ಆದರೆ, ಪ್ರೀತಿಯನ್ನು ಒಪ್ಪದ ರಾವಲಿ ಕುಟುಂಬ ವಿರೋಧದ ಹೊರತಾಗಿಯೂ ವರನನ್ನು ಹುಡುಕುವ ಕೆಲಸಕ್ಕೆ ಕೈಹಾಕಿತ್ತು. ಕೊನೆಗೂ ವರನನ್ನು ಹುಡುಕಿ ಡಿ. 11ರಂದು ಮದುವೆಯನ್ನು ನಿಶ್ಚಯ ಮಾಡಿ, ತರಾತುರಿಯಲ್ಲೇ ಮಗಳಿಗೆ ಬಲವಂತದಿಂದ ಮದುವೆ ಮಾಡಿದರು.

    ಆದರೆ, ತನ್ನ ಬಾಯ್​ಫ್ರೆಂಡ್​ ಮರೆಯಲು ಸಾಧ್ಯವಾಗದ ರಾವಲಿ ಮಾನಸಿಕವಾಗಿ ನೊಂದಿದ್ದಳು. ಮದುವೆಯಾದರೂ ತನ್ನ ಪತಿಯೊಂದಿಗೆ ಇರಲಾಗದಷ್ಟು ನೋವಾಗಿತ್ತು. ಲವ್ವರ್​ ಇಲ್ಲದ ಜೀವನವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದ ರಾವಲಿ ಡೆತ್​ನೋಟ್​ ಬರೆದಿಟ್ಟು ಮದುವೆಯಾದ ಎರಡೇ ವಾರದಲ್ಲಿ ತನ್ನ ಬದುಕಿಗೆ ತಾನೇ ಅಂತ್ಯವಾಡಿದ್ದಾಳೆ.

    ಇದನ್ನೂ ಓದಿ: ಸಾಮಾನ್ಯ ಮನುಷ್ಯ ಎಷ್ಟು ಲಂಚ ಕೊಡಬೇಕು ಗೊತ್ತಾ? ಕಮಲ್​ ಹಾಸನ್​ ಹೇಳ್ತಾರೆ ಕೇಳಿ …

    ಡೆತ್​ನೋಟ್​ನಲ್ಲಿ ತನ್ನ ಮನಸ್ಸಿನ ತುಮುಲವನ್ನು ಹೊರಹಾಕಿರುವ ರಾವಲಿ, ಅಮ್ಮ… ನನ್ನನ್ನು ಕ್ಷಮಿಸು. ಸಂತೋಷದಿಂದಲೇ ಮದುವೆಯಾದೆ. ಆದರೆ, ಈ ಮದುವೆ ನನಗೆ ಇಷ್ಟವಿರಲಿಲ್ಲ. ನನ್ನ ಮನಸ್ಸಿನಲ್ಲಿ ಬೇರೋಬ್ಬನಿದ್ದ ಎಂಬುದು ನಿಮಗೆ ತಿಳಿದಿತ್ತು. ಆದರೂ ನನಗೆ ಮದುವೆ ಮಾಡಿದಿರಿ. ಪತಿಯೊಂದಿಗೆ ಇರಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಅವರು ನನಗೆ ಇಷ್ಟವಿಲ್ಲ. ಮದುವೆ ನಂತರದ ಪ್ರತಿಯೊಂದು ಕ್ಷಣವೂ ನರಕ ಅನಿಸುತ್ತಿದೆ ಎಂದು ರಾವಲಿ ಡೆತ್​ನೋಟ್​ ಬರೆದಿಟ್ಟಿದ್ದಾಳೆ. (ಏಜೆನ್ಸೀಸ್​)

    VIDEO: ಬಾಯ್​ಫ್ರೆಂಡ್​ ಜತೆ ಆನಂದದಲ್ಲಿ ಮೈಮರೆತಳು- ಹಿಂದೆ ಬೆಂಕಿ ಇದದ್ದೇ ತಿಳಿಯಲಿಲ್ಲ!

    ಮದ್ವೆಯಾದ ಎರಡೇ ತಿಂಗಳಿಗೆ 51 ವರ್ಷದ ಪತ್ನಿಗೆ ಸಾವಿನ ದಾರಿ ತೋರಿದ 29ರ ಪತಿ: ಕೊಲೆ ಹಿಂದೆ ಭಯಾನಕ ಸಂಚು!

    ಟಿಆರ್​ಪಿ ತಿರುಚಲು ಲಕ್ಷ ಲಕ್ಷ ಲಂಚ- ವಸ್ತುಗಳು ಗಿಫ್ಟ್​: ಕೋರ್ಟ್​ಗೆ​ ಮಾಹಿತಿ ನೀಡಿದ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts