More

    ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು ನ್ಯೂಜಿಲೆಂಡ್ ತಂಡಕ್ಕೆ ಭರ್ಜರಿ ಜಯ

    ಹ್ಯಾಮಿಲ್ಟನ್: ಜಮೈನ್ ಬ್ಲಾಕ್‌ವುಡ್ (104ರನ್, 141 ಎಸೆತ, 11 ಬೌಂಡರಿ, 2 ಸಿಕ್ಸರ್) ಹಾಗೂ ಅಲ್ಜಾರಿ ಜೋಸೆಫ್ (86 ರನ್, 125ಎಸೆತ, 9 ಬೌಂಡರಿ, 3ಸಿಕ್ಸರ್) ಜೋಡಿಯ ಪ್ರತಿಹೋರಾಟದ ನಡುವೆಯೂ ನೀಲ್ ವಾಗ್ನರ್ (66ಕ್ಕೆ 4) ಮಾರಕ ದಾಳಿ ನೆರವಿನಿಂದ ಆತಿಥೇಯ ನ್ಯೂಜಿಲೆಂಡ್ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ಎದುರು ಇನಿಂಗ್ಸ್ ಹಾಗೂ 134 ರನ್‌ಗಳಿಂದ ಜಯ ದಾಖಲಿಸಿತು. ಸೆಡ್ಡನ್ ಪಾರ್ಕ್‌ನಲ್ಲಿ 6 ವಿಕೆಟ್‌ಗೆ 196 ರನ್‌ಗಳಿಂದ ಭಾನುವಾರ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ 58.5 ಓವರ್‌ಗಳಲ್ಲಿ 247 ರನ್‌ಗಳಿಗೆ ಸರ್ವಪತನ ಕಂಡಿತು.

    ಮೂರನೇ ದಿನದಾಟದ ಮೊತ್ತಕ್ಕೆ ಕೇವಲ 51 ರನ್ ಪೇರಿಸಲಷ್ಟೇ ಪ್ರವಾಸಿ ತಂಡ ಶಕ್ತವಾಯಿತು. ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 7 ವಿಕೆಟ್‌ಗೆ 519 ರನ್‌ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡರೆ, ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ 138 ರನ್‌ಗೆ ಸರ್ವಪತನ ಕಂಡು, 381 ರನ್ ಹಿನ್ನಡೆ ಅನುಭವಿಸಿತು. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಯಿಂದ ಮುನ್ನಡೆ ಸಾಧಿಸಿತು.

    80 ರನ್‌ಗಳಿಂದ ಬ್ಲಾಕ್‌ವುಡ್ ಹಾಗೂ 59 ರನ್‌ಗಳಿಂದ ದಿನದಾಟದ ಆರಂಭಿಸಿದ ಅಲ್ಜಾರಿ ಜೋಸೆಫ್ ಜೋಡಿ ಪ್ರತಿಹೋರಾಟ ಮುಂದುವರಿಸಿತು. ನ್ಯೂಜಿಲೆಂಡ್ ತಂಡಕ್ಕೆ ಕಂಟಕವಾಗಿದ್ದ ಈ ಜೋಡಿಯನ್ನು ಕೈಲ್ ಜೇಮೀಸನ್ (42ಕ್ಕೆ 2) ಬ್ರೇಕ್ ಹಾಕಿದರು. ಅಲ್ಜಾರಿ ಜೋಸೆಫ್ ಬದಲಿ ಆಟಗಾರ ಮಿಚೆಲ್ ಸ್ಯಾಂಟ್ನರ್‌ಗೆ ಕ್ಯಾಚ್ ನೀಡಿದರು. ಈ ಜೋಡಿ 7ನೇ ವಿಕೆಟ್‌ಗೆ 155 ರನ್ ಜತೆಯಾಟವಾಡಿತು. ಮತ್ತೊಂದು ಶತಕ ಪೂರೈಸಿದ ಬೆನ್ನಲ್ಲೇ ಬ್ಲಾಕ್‌ವುಡ್‌ವುಡ್ ಕೂಡ ನಿರ್ಗಮಿಸಿದರು. ಕೇವಲ 3 ರನ್ ಅಂತರದಲ್ಲಿ 3 ವಿಕೆಟ್ ಕೈಚೆಲ್ಲಿದ ವಿಂಡೀಸ್ ಹೀನಾಯ ಸೋಲಿಗೆ ಶರಣಾಯಿತು. ಗಾಯಾಳು ಶೇನ್ ಡೋರಿಚ್ ಬ್ಯಾಟಿಂಗ್‌ಗಿಳಿಯಲಿಲ್ಲ. ಕೇನ್ ವಿಲಿಯಮ್ಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

    ನ್ಯೂಜಿಲೆಂಡ್: 7 ವಿಕೆಟ್‌ಗೆ 519 ಡಿಕ್ಲೇರ್, ವೆಸ್ಟ್ ಇಂಡೀಸ್: 138 ಮತ್ತು 58.5 ಓವರ್‌ಗಳಲ್ಲಿ 247 (ಜರ್ಮೈನ್ ಬ್ಲಾಕ್‌ವುಡ್ 104, ಅಲ್ಜಾರಿ ಜೋಸೆಫ್ 86, ನೀಲ್ ವಾಗ್ನರ್ 66ಕ್ಕೆ 4, ಕೈಲ್ ಜೇಮೀಸನ್ 42ಕ್ಕೆ 2).

    2ನೇ ಟೆಸ್ಟ್: ಡಿ.11ರಿಂದ
    ಸ್ಥಳ : ವೆಲ್ಲಿಂಗ್ಟನ್

    ಕೃಷಿ ಕಾನೂನು ಹಿಂಪಡೆಯದಿದ್ರೆ ಖೇಲ್ ರತ್ನ ವಾಪಸ್ ಕೊಡ್ತೇನೆ – ಬಾಕ್ಸರ್ ವಿಜೇಂದರ್ ಸಿಂಗ್ ಬೆದರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts