More

    ನೂರು ದಿನಗಳಿಂದ ಒಂದೂ ಕರೊನಾ ಕೇಸಿಲ್ಲ; ಜಗತ್ತೇ ನಿಬ್ಬೆರಗಾಗಿದೆ ಈ ಸಾಧನೆಗೆ…!

    ವೆಲ್ಲಿಂಗ್ಟನ್​: ಎರಡು ತಿಂಗಳ ಹಿಂದೆಯೇ ಈ ದೇಶ​ ತನ್ನನ್ನು ತಾನು ಕರೊನಾಮುಕ್ತ ದೇಶವೆಂದು ಘೋಷಿಸಿಕೊಂಡಿತ್ತು. ಜತೆಗೆ ಕೆಲ ಆಫ್ರಿಕಾ ಖಂಡದ ದೇಶಗಳು ಇದೇ ರೀತಿ ಹೇಳಿಕೆ ನಿಡಿದ್ದವು. ಹೀಗಾಗಿ ಎಲ್ಲರೂ ಅನುಮಾನದ ದೃಷ್ಟಿಯಿಂದಲೇ ನೋಡಿದ್ದರು. ಆದರೆ, ಈಗಿನ ಬೆಳವಣಿಗೆಯಿಂದ ಇಡೀ ಜಗತ್ತನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ ನ್ಯೂಜಿಲೆಂಡ್​.

    ಕಳೆದ ನೂರು ದಿನಗಳಿಂದ ಇಡೀ ದೇಶದಲ್ಲಿ ಒಂದು ಹೊಸ ಕರೊನಾ ಪ್ರಕರಣ ಪತ್ತೆಯಾಗಿಲ್ಲ. ಹೀಗಾಗಿ ನ್ಯೂಜಿಲೆಂಡ್​ ಸಂಪೂರ್ಣ ಕರೊನಾಮುಕ್ತ ದೇಶವಾಗಿದೆ. ಭಾರತ ಸೇರಿ ಹಲವು ರಾಷ್ಟ್ರಗಳು ಕರೊನಾ ಸಂಕಷ್ಟದಿಂದ ಇನ್ನಿಲ್ಲದಂತೆ ನಲುಗುತ್ತಿದ್ದರೆ, ನ್ಯೂಜಿಲೆಂಡ್​ನ ಸಾಧನೆ ನಿಬ್ಬೆರಗಾಗಿಸಿದೆ.

    ಇದನ್ನೂ ಓದಿ; ಜೈಲುಪಾಲಾಗಿದ್ದರು ಇನ್ಫೋಸಿಸ್​ ನಾರಾಯಣ ಮೂರ್ತಿ; ವಿದೇಶದಲ್ಲಿ 5 ದಿನ ಅನ್ನಾಹಾರವಿಲ್ಲದೇ ಕಳೆದಿದ್ದರು….! 

    ಆದರೆ, ಇಷ್ಟಕ್ಕೆ ಸಮಾಧಾನ ಪಟ್ಟುಕೊಳ್ಳುವಂತಿಲ್ಲ ಎಕೆಂದರೆ, ಕರೊನಾ ನಿಗ್ರಹಿಸಿದ್ದ ವಿಯಟ್ನಾಮ್​ ಹಾಗೂ ಆಸ್ಟ್ರೇಲಿಯಾದಲ್ಲಿ ಮತ್ತೆ ಹೊಸ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಎಚ್ಚರಿಕೆಯಿಂದ ಇರಲೇಬೇಕು ಎಂದು ತಜ್ಞರು ಹೇಳಿದ್ದಾರೆ.

    ಸದ್ಯ, ಒಂದೂ ಕರೊನಾ ಪ್ರಕರಣಗಳಿಲ್ಲದೇ ನ್ಯೂಜಿಲೆಂಡ್​ ಜಗತ್ತಿನ ಅತ್ಯಂತ ಸುರಕ್ಷಿತ ಪ್ರದೇಶವೆನಿಸಿಕೊಂಡಿದೆ. 50 ಲಕ್ಷಕ್ಕೂ ಅಧಿಕ ಜನಸಂಖ್ಯೆಯಿರುವ ಈ ರಾಷ್ಟ್ರದಲ್ಲಿ ಜನಜೀವನ ಸಾಮಾನ್ಯ ಸ್ಥಿತಿಗೆ ಬಂದಿದೆ. ಆದರೆ, ಜನರು ಪರೀಕ್ಷೆ ಮಾಡಿಸಿಕೊಳ್ಳಲು ಹಿಂಜರಿಯುತ್ತಿರುವುದು, ಸೋಂಕಿನ ಮೇಲೆ ನಿಗಾವಹಿಸುವ ಆ್ಯಪ್​ಗಳನ್ನು ಬಳಸದಿರುವುದು, ಸ್ವಚ್ಛತೆಯನ್ನು ಕಡೆಗಣಿಸುತ್ತಿರುವುದು ಅಧಿಕಾರಿಗಳಿಗೆ ತಲೆನೋವಾಗಿದೆ.

    ಇದನ್ನೂ ಓದಿ; ಕಡತಗಳಿಗೆ ಸಹಿ ಹಾಕಲೆಂದೆ ಐಎಎಸ್ ಅಧಿಕಾರಿಯಾದೆ; ಅಪ್ಪನ ಕನಸು ನನಸಾದ ಸಾರ್ಥಕತೆ 

    ಒಮ್ಮೆ ನಿಯಂತ್ರಣಕ್ಕೆ ಬಂದ ಕರೊನಾ ಸೋಂಕು ಅದೆಷ್ಟು ವೇಗದಲ್ಲಿ ಮರುಕಳಿಸಬಹುದು ಎಂಬುದನ್ನು ಇತರೆಡೆಗಳಲ್ಲಿ ನೋಡಿದ್ದೇವೆ. ಹೀಗಾಗಿ ಸಮಾಧಾನಪಟ್ಟುಕೊಳ್ಳುವ ಸ್ಥಿತಿಯಲ್ಲಿ ನಾವಿಲ್ಲ ಎನ್ನುತ್ತಾರೆ ಆರೋಗ್ಯ ಇಲಾಖೆ ಮಹಾನಿರ್ದೇಶಕ ಡಾ.ಆ್ಯಶ್ಲೇ ಬ್ಲೂಮ್​ ಫೀಲ್ಡ್​.

    ನ್ಯೂಜಿಲೆಂಡ್​ನಲ್ಲಿ ಒಟ್ಟಾರೆ ಸೋಂಕಿಗೆ ಒಳಗಾದವರು 1,569 ಜನರಷ್ಟೇ. ಸದ್ಯ ವಿದೇಶ ಅಥವಾ ಬೇರೆಎಡಗಲಿಂದ ಬಂದು ಸೋಂಕಿಗೆ ಒಳಗಾದ 21 ಜನರನ್ನು ವಿವಿಧೆಡೆ ನಿಗಾದಲ್ಲಿ ಇಡಲಾಗಿದೆ. ಸ್ಥಳೀಯವಾಗಿ ಯಾರಲ್ಲೂ ಸೋಂಕು ಕಂಡುಬಂದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಾಧನೆಗಾಗಿ ನ್ಯೂಜಿಲೆಂಡ್​ ಪ್ರಧಾನಿ ಜೆಸಿಂದಾ ಆಡ್ರೆನ್​ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ದೀಪಾವಳಿ ವೇಳೆಗೆ 70 ಸಾವಿರ ರೂ.ಗೆ ತಲುಪುತ್ತೆ ಚಿನ್ನದ ಬೆಲೆ; ಬೇಡಿಕೆ ಕುಸಿದಿದ್ದರೂ ಆಗಸಕ್ಕೇಕೆ ಮುಖ ಮಾಡಿದೆ ಹಳದಿ ಲೋಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts