More

    ಟೀಮ್​ ಇಂಡಿಯಾಗೆ ಮಧ್ಯಮ ಕ್ರಮಾಂಕದ ಬಲ: ಇವರು ನಿಂತರೆ ಗೆಲುವು ದಕ್ಕದೇ ಇರಲ್ಲ!

    ನವದೆಹಲಿ: ಪ್ರಸಕ್ತ ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಏಕ ಚಕ್ರಾಧಿಪತಿಯಂತೆ ಅಬ್ಬರಿಸಿ ಬೊಬ್ಬೊರಿದಿದೆ. 9 ಲೀಗ್​ ಪಂದ್ಯಗಳನ್ನು ಆಡಿರುವ ಭಾರತ ಒಂದೇ ಒಂದು ಸೋಲನ್ನು ಕಾಣದೆ ಅಜೇಯ ಓಟದೊಂದಿಗೆ ಸೆಮಿಫೈನಲ್​ ತಲುಪಿದೆ. ಈ ಬಾರಿ ಭಾರತ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡಲ್ಲೂ ಸಂಘಟಿತ ಪ್ರದರ್ಶನ ತೋರುತ್ತಿದೆ. ಅದರಲ್ಲೂ ಬ್ಯಾಟಿಂಗ್​ನಲ್ಲಿ ಈ ಬಾರಿಯ ಪ್ರಮುಖ ಶಕ್ತಿ ಎಂದರೆ, ಮಧ್ಯಮ ಕ್ರಮಾಂಕದ ಆಟಗಾರರ ಅದ್ಭುತ ಫಾರ್ಮ್​.

    ಲೀಗ್​ ಹಂತದಲ್ಲಿ ಭಾರತ ಒಂದೇ ಒಂದು ಪಂದ್ಯವನ್ನು ಸೋಲದೇ ಇರುವುದಕ್ಕೆ ಆರಂಭಿಕ ಜೋಡಿಗಿಂತ ಮಧ್ಯಮ ಕ್ರಮಾಂಕ ಬ್ಯಾಟರ್​​ಗಳ ಕೊಡುಗೆ ತುಂಬಾ ಇದೆ. ಮೂರನೇ ಕ್ರಮಾಂಕದ ಕೊಹ್ಲಿ ಬಗ್ಗೆಯೂ ಮರೆಯುವಂತಿಲ್ಲ. ಲೀಗ್​ ಹಂತದಲ್ಲಿ ಒಟ್ಟು 594 ರನ್​ ಗಳಿಸಿದ್ದಾರೆ. ಆದರೆ, ಪ್ರಸಕ್ತ ಟೂರ್ನಿಯಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳ ಕೊಡುಗೆ ಬಗ್ಗೆ ಹೆಚ್ಚು ಮಾತನಾಡಬೇಕಿದೆ. ಏಕೆಂದರೆ, ಟೀಮ್ ಇಂಡಿಯಾದ ಅತೀ ದೊಡ್ಡ ಸಮಸ್ಯೆ 4ನೇ ಕ್ರಮಾಂಕ. ಈ ಕ್ರಮಾಂಕದಲ್ಲಿ ಹಲವು ಬ್ಯಾಟರ್​ಗಳು ವಿಫಲರಾಗಿದ್ದಾರೆ. ಅದರಲ್ಲೂ 2019ರ ಏಕದಿನ ವಿಶ್ವಕಪ್​ ಸೆಮಿಫೈನಲ್ ಸೋಲಿಗೆ ಮುಖ್ಯ ಕಾರಣ 4ನೇ ಕ್ರಮಾಂಕದ ಬ್ಯಾಟರ್​ನ ವೈಫಲ್ಯತೆ. ಹೀಗಾಗಿ ಮಧ್ಯಮ ಕ್ರಮಾಂಕ ತುಂಬಾನೇ ಮುಖ್ಯ. ಆದರೆ, ಈ ಕೊರತೆಯನ್ನು ಪ್ರಸ್ತುತ ಬ್ಯಾಟರ್​ಗಳು ನೀಗಿಸಿದ್ದಾರೆ. ಮಧ್ಯಮ ಕ್ರಮಾಂಕದ ಬೆನ್ನೆಲುಬಾಗಿರುವ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ರಾಹುಲ್​ರನ್ನು ಏಷ್ಯಾಕಪ್ ಮತ್ತು ವಿಶ್ವಕಪ್‌ನಲ್ಲಿ ಲೆಗ್ ಸ್ಪಿನ್ನರ್​ಗಳನ್ನು ಒಮ್ಮೆಯೂ ಔಟ್​ ಮಾಡಿಲ್ಲ ಎಂಬುದೇ ಗಮನಾರ್ಹ ಸಂಗತಿಯಾಗಿದೆ.

    ಕೆ.ಎಲ್​. ರಾಹುಲ್​
    ಟೀಮ್​ ಇಂಡಿಯಾದ ವಿಕೆಟ್​ ಕೀಪರ್​ ಕನ್ನಡಿಗ ರಾಹುಲ್ 5ನೇ ಕ್ರಮಾಂಕದಲ್ಲಿ ಆಡುವ ಮೂಲಕ ತಂಡಕ್ಕೆ ಬಹುಮುಖ್ಯ ಆಸರೆಯಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಅ. 8ರಂದು ನಡೆದ ಪಂದ್ಯದಲ್ಲಿ ಕೇವಲ 2 ರನ್​ಗೆ 3 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದಾ ವಿರಾಟ್​ ಕೊಹ್ಲಿ ಜತೆ ಉತ್ತಮ ಜತೆಯಾಟವಾಡಿದ ರಾಹುಲ್ ವೈಯಕ್ತಿಕ​ 97 ರನ್​ ಗಳಿ ಆಪತ್ಬಾಂಧವ ಎನಿಸಿಕೊಂಡರು. ಈ ಪಂದ್ಯದಲ್ಲಿ ಕೊಹ್ಲಿ 85 ರನ್​ ಗಳಿಸಿದರು. ಅ.29ರಂದು ಇಂಗ್ಲೆಂಡ್​ ವಿರುದ್ಧ ನಡೆದ ಪಂದ್ಯದಲ್ಲೂ ಮಧ್ಯಮ ಕ್ರಮಾಂಕದಲ್ಲಿ 38 ರನ್​ ಗಳಿಸಿ ಆಸರೆಯಾದರು. ಟಾಪ್​ ಆರ್ಡರ್​ ಬ್ಯಾಟ್ಸ್​ಮನ್​ಗಳು ವಿಫಲವಾದಾಗ ಕೆ.ಎಲ್​. ರಾಹುಲ್​ ಹಲವು ಸಂದರ್ಭದಲ್ಲಿ ಎಂ.ಎಸ್​. ಧೊನಿಯಂತೆ ತಮ್ಮ ಜವಾಬ್ದಾರಿಯನ್ನು ಮೆರೆದಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ಉಪಸ್ಥಿತಿಯು ತಂಡವೂ ಕುಸಿದರೂ ಮತ್ತೆ ಲಯಕ್ಕೆ ಮರಳಬಹುದು ಎಂಬ ಆತ್ಮವಿಶ್ವಾಸವನ್ನು ನೀಡುತ್ತದೆ. ನೆದರ್ಲೆಂಡ್ಸ್​ ವಿರುದ್ಧ ನ. 12ರಂದು ನಡೆದ ಪಂದ್ಯದಲ್ಲಿ ಕೆ.ಎಲ್​. ರಾಹುಲ್​ 64 ಎಸೆತದಲ್ಲಿ 102 ರನ್​ ಕಲೆಹಾಕಿದ್ದನ್ನು ಮರೆಯುವಂತಿಲ್ಲ. ಹೀಗಾಗಿ 5 ನೇ ಕ್ರಮಾಂಕದಲ್ಲಿ ರಾಹುಲ್​ ಉತ್ತಮ ಭರವಸೆಯಾಗಿದ್ದಾರೆ.

    ಶ್ರೇಯಸ್ ಅಯ್ಯರ್​​ ಭಾರತದ ಬೆನ್ನೆಲಬು
    ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್​ ಅಯ್ಯರ್​ ಭಾರತದ ಬೆನ್ನೆಲಬು ಎಂದು ಸ್ವತಃ ಟೀಮ್​ ಇಂಡಿಯಾ ಕೋಚ್​​ ರಾಹುಲ್​ ಡ್ರಾವಿಡ್​ ಅವರ ಕೊಂಡಾಡಿದ್ದಾರೆ. ಶ್ರೀಲಂಕಾ ವಿರುದ್ಧ 82, ದಕ್ಷಿಣ ಆಫ್ರಿಕಾ ವಿರುದ್ಧ 77 ರನ್​ ಬಾರಿಸಿರುವ ಅಯ್ಯರ್​, ನ.12ರಂದು ನೆದರ್ಲೆಂಡ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ 94 ಎಸೆತಗಳಲ್ಲಿ 128 ರನ್​ ಗಳಿಸುವ ಮೂಲಕ ವಿಶ್ವಕಪ್​ನಲ್ಲಿ ಚೊಚ್ಚಲ ಶತಕ ಬಾರಿಸಿದರು. ಟೀಮ್​ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದ ಸಮಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಇಳಿದು ಪರಿಸ್ಥಿತಿಗೆ ತಕ್ಕಂತೆ ನಿಧಾನಗತಿಯಲ್ಲಿ ಬ್ಯಾಟ್​ ಬೀಸಿ, ಕೊನೆಯಲ್ಲಿ ಅಬ್ಬರಿಸುವ ಅಯ್ಯರ್​, ಮಧ್ಯಮ ಕ್ರಮಾಂಕಕ್ಕೆ ಹೇಳಿ ಮಾಡಿಸಿದ ಆಟಗಾರರಾಗಿದ್ದಾರೆ. ಇದೇ ಧೈರ್ಯದಲ್ಲಿ ಆರಂಭಿಕ ಆಟಗಾರರು ಸ್ಫೋಟಕ ಆಟಕ್ಕೆ ಮುಂದಾಗಬಹುದು.

    ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಸ್ಕೋರ್​
    ರೋಹಿತ್​ ಶರ್ಮ ಮತ್ತು ವಿರಾಟ್​ ಕೊಹ್ಲಿ ಹೆಚ್ಚು ರನ್​ ಗಳಿಸುತ್ತಿರುವಂತೆ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್​ ಅಯ್ಯರ್​ ಮತ್ತು ಕೆ.ಎಲ್​. ರಾಹುಲ್​ ಕೂಡ ವೈಯಕ್ತಿಕವಾಗಿ ಉತ್ತಮ ರನ್​ ಗಳಿಕೆ ಮಾಡಿದ್ದಾರೆ. ಅಯ್ಯರ್,​ ಲೀಗ್​ ಹಂತದಲ್ಲಿ 421 ರನ್​ ಗಳಿಸುವ ಮೂಲಕ ಪ್ರಸಕ್ತ ವಿಶ್ವಕಪ್​ನಲ್ಲಿ ಅತಿ ಹೆಚ್ಚು ರನ್​ ಗಳಿಸಿದವರ ಪಟ್ಟಿಯಲ್ಲಿ 8 ಸ್ಥಾನದಲ್ಲಿದ್ದಾರೆ. ರಾಹುಲ್​ 347 ರನ್​ನೊಂದಿಗೆ 18 ಸ್ಥಾನದಲ್ಲಿದ್ದಾರೆ.

    ಸೂರ್ಯಕುಮಾರ್​, ರವಿಂದ್ರಾ ಜಡೇಜಾ ಆಸರೆ
    ಟೀಮ್​ ಇಂಡಿಯಾದ ಯಶಸ್ಸಿಗೆ ಸೂರ್ಯಕುಮಾರ್​ ಮತ್ತು ರವೀಂದ್ರ ಜಡೇಜಾ ಕೊಡುಗೆಯೂ ಇದೆ. 6ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್​ ಮತ್ತು 7ನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಇಳಿಯುವ ಇಬ್ಬರು ಅವಕಾಶ ಸಿಕ್ಕಾಗ ಉಪಯೋಗಿಸಿಕೊಂಡಿದ್ದಾರೆ. ನ್ಯೂಜಿಲೆಂಡ್​ ವಿರುದ್ಧ ಯಾದವ್​ ರನೌಟ್​ ಆದರು. ಆದರೆ, ಇಂಗ್ಲೆಂಡ್​ ವಿರುದ್ಧ 49 ರನ್​ ಗಳಿಸಿ, ಭರವಸೆ ಉಳಿಸಿಕೊಂಡಿದ್ದಾರೆ. ಇನ್ನು ರವೀಂದ್ರ ಜಡೇಜಾರಂತು ಕೊನೆಯ ಅಂತದಲ್ಲಿ ಉಳಿದಿರುವ ಭರವಸೆಯಾಗಿದ್ದಾರೆ. ಜಡೇಜಾ ಇರುವವರೆಗೂ ತಂಡದ ಗೆಲುವನ್ನು ನಿರೀಕ್ಷೆ ಮಾಡಬಹುದು. ಅದರಲ್ಲೂ ಚೇಸಿಂಗ್​ ಸಮಯದಲ್ಲಿ ಜಡೇಜಾ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಧರ್ಮಶಾಲದಲ್ಲಿ ನ್ಯೂಜಿಲೆಂಡ್​ ವಿರುದ್ಧದ ಪಂದ್ಯದಲ್ಲಿ 34 ಓವರ್​ಗಳಲ್ಲಿ 83 ರನ್‌ಗಳ ಅಗತ್ಯವಿದ್ದ ಕಠಿಣ ಸನ್ನಿವೇಶದಲ್ಲಿ ಬ್ಯಾಟಿಂಗ್‌ಗೆ ಬಂದ ಜಡೇಜಾ 39 ರನ್ ಗಳಿಸಿ ಮಿಂಚಿದರು. ಅಲ್ಲದೆ, ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಕ್ರಮವಾಗಿ 35 ಮತ್ತು 29 ರನ್ ಗಳಿಸಿ ಕೊನೆಯಲ್ಲಿ ತಮ್ಮ ಫಿನಿಶಿಂಗ್ ಪರಾಕ್ರಮವನ್ನು ತೋರಿಸಿದ್ದಾರೆ.

    ಸೆಮೀಸ್​ನಲ್ಲಿ ಮುಖಾಮುಖಿಯಾಗುವ ತಂಡಗಳು
    ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ ಸಮೀಸ್​ ಪ್ರವೇಶ ಪಡೆದಿದ್ದು, ನವೆಂಬರ್​ 15ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಸಮಿಫೈನಲ್​ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಮತ್ತು ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್​ ಮುಖಾಮುಖಿಯಾಗಲಿವೆ. ನ.16ರಂದು ಕೋಲ್ಕತದ ಈಡನ್​ ಗಾರ್ಡನ್​ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಸಮಿಫೈನಲ್​ನಲ್ಲಿ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಮತ್ತು ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.

    ನ.19ಕ್ಕೆ ವಿಶ್ವಕಪ್​ ಹಬ್ಬಕ್ಕೆ ವಿದ್ಯುಕ್ತ ತೆರೆ
    ಎರಡೂ ಸಮಿಫೈನಲ್​ಗಳಲ್ಲಿ ಗೆಲ್ಲುವ ತಂಡಗಳು ನ. 19ರಂದು ಗುಜರಾತಿನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟ್ರೋಫಿಗಾಗಿ ನಡೆಯಲಿರುವ ಅಂತಿಮ ಹಾಗೂ ಫೈನಲ್​ ಪಂದ್ಯದಲ್ಲಿ ಸೆಣಸಾಡಲಿದ್ದು, ಗೆಲ್ಲುವ ತಂಡ ವಿಶ್ವಕಪ್​ ಟ್ರೋಫಿಯ ಜತೆಗೆ 4 ಮಿಲಿಯನ್​ ಡಾಲರ್ (33,30,89,400 ರೂಪಾಯಿ) ಬಹುಮಾನ ಮೊತ್ತವನ್ನು ಪಡೆಯಲಿದೆ. ರನ್ನರ್​ ಅಪ್​ ತಂಡಗಳು 2 ಮಿಲಿಯನ್​ ಡಾಲರ್​ ಬಹುಮಾನ ಮೊತ್ತ ಹಾಗೂ ಲೀಗ್​ ಹಂತದಲ್ಲಿ ವಿಜೇತರಾದ ಪ್ರತಿ ತಂಡಕ್ಕೆ ತಲಾ 40 ಸಾವಿರ ಡಾಲರ್​ ಬಹುಮಾನ ಮೊತ್ತವನ್ನು ಪಡೆಯಲಿವೆ. (ಏಜೆನ್ಸೀಸ್​)

    ಸೆಮಿಫೈನಲ್​ ಪಂದ್ಯಗಳಿಗೆ ಮಳೆ ಅಡ್ಡಿಯಾದ್ರೆ ಫಲಿತಾಂಶ ನಿರ್ಧರಿಸುವುದು ಹೇಗೆ? ICC ನಿಯಮಗಳು ಹೀಗಿವೆ…

    ಮರೆವು ಜಾಸ್ತಿಯಾಗುತ್ತಿದೆಯೇ? ಮೆಮೊರಿ ಪವರ್​ ಹೆಚ್ಚಿಕೊಳ್ಳಬೇಕಾ? ಈ ಸರಳ ಸಲಹೆಗಳನ್ನು ಪಾಲಿಸಿ…

    ಕೆನಡಾದ ಭಾರತೀಯ ಹೈಕಮಿಷನರ್ ಬಂಧಿಸಿದ್ರೆ 1 ಲಕ್ಷ ಡಾಲರ್: ಖಲಿಸ್ತಾನ್ ಉಗ್ರ ಪನ್ನು ಉದ್ಧಟತನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts