More

    PHOTOS| ಹೊಸ ವರ್ಷಾಚರಣೆಗೆ ಬ್ರೇಕ್​ ಹಾಕಿದ ಕರೊನಾ: ಸಿಲಿಕಾನ್​ ಸಿಟಿಯಲ್ಲಿ ಪೊಲೀಸ್​ ಸರ್ಪಗಾವಲು!

    ಬೆಂಗಳೂರು: ಹೊಸ ವರ್ಷದ ಅದ್ಧೂರಿ ಆಚರಣೆಗೆ ಮಹಾಮಾರಿ ಕರೊನಾ ವೈರಸ್​ ಬ್ರೇಕ್​ ಹಾಕಿದ್ದು, ಮಸ್ತ್​ ಎಂಜಾಯ್​ ಮಾಡುವ ಆಸೆ ಇಟ್ಟುಕೊಂಡಿದ್ದವರಿಗೆ ಭಾರಿ ನಿರಾಸೆಯಾಗಿದೆ. ಅದರಲ್ಲೂ ಸಿಲಿಕಾನ್​ ಸಿಟಿ ಮಂದಿಗಂತೂ ಹೊಸ ವರ್ಷಾಚರಣೆಯ ಕೋವಿಡ್​ ಮಾರ್ಗಸೂಚಿ ತಣ್ಣೀರೆರಚಿದೆ.

    ನಗರದ ಹೃದಯ ಭಾಗಗಳಾದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಹಾಗೂ ಕಬ್ಬನ್ ಪಾರ್ಕ್ ಸುತ್ತಾಮುತ್ತಲಿನ ರಸ್ತೆಗಳಲ್ಲಿ ಪ್ರತಿ ವರ್ಷ ಜನರು ಕಿಕ್ಕಿರಿದು ತುಂಬಿರುತ್ತಿದ್ದರು. ಬೆಳಕಿನ ಚಿತ್ತಾರದ ಜತೆಯಲ್ಲಿ ಡಿಜೆ ಸೌಂಡ್ಸ್​ಗೆ ಮಸ್ತ್​ ಸ್ಟೆಪ್ಸ್​ ಹಾಕುವ ಮೂಲಕ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಿದ್ದರು. ಈ ಏರಿಯಾಗಳಲ್ಲಿ ಹೊಸ ವರ್ಷದ ಹಿಂದಿನ ರಾತ್ರಿ ಅಕ್ಷರಶಃ ಸ್ವರ್ಗಲೋಕದಂತೆ ಗೋಚರವಾಗುತ್ತಿತ್ತು. ಯುವಕ-ಯುವತಿಯರು, ಸ್ನೇಹ ಬಳಗ ಒಂದೆಡೆ ಸೇರಿ ವರ್ಣರಂಜಿತ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸುತ್ತಿದ್ದರು. ಆದರೆ, ಇದೆಲ್ಲದಕ್ಕೂ ಈ ಬಾರಿ ಅಲ್ಪ ವಿರಾಮ ಬಿದ್ದಿದ್ದು, ಪ್ರಮುಖ ರಸ್ತೆಗಳು ಖಾಲಿ ಹೊಡೆಯುತ್ತಿವೆ.

    ಇದನ್ನೂ ಓದಿ: PHOTO| 2020ಕ್ಕೆ ಬೆನ್ನು ತೋರಿಸಿದ ಕ್ರಿಕೆಟರ್ ವೇದಾ, ಗಮನಸೆಳೆದ ಟ್ಯಾಟೂ!

    ಕರೊನಾ ಮಾರಿಯಿಂದಾಗಿ ಸರ್ಕಾರ ನಿಷೇಧಾಜ್ಞೆ ಜಾರಿ ಮಾಡಿರುವುದರಿಂದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಹಾಗೂ ಕಬ್ಬನ್ ಪಾರ್ಕ್ ಸುತ್ತಾಮುತ್ತಲಿನ ರಸ್ತೆಗಳಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್​ ಮಾಡಲಾಗಿದೆ. ಎಲ್ಲಿ ನೋಡಿದರು ಬರೀ ಪೊಲೀಸರೇ ತುಂಬಿಕೊಂಡಿದ್ದಾರೆ. ಎಲ್ಲಿಯೂ ಗುಂಪಾಗಿ ಸೇರಿ ಸಂಭ್ರಮಾಚರಣೆ ಮಾಡದಂತೆ ತಡೆಯಲು ಕಟ್ಟೆಚ್ಚರ ವಹಿಸಲಾಗಿದೆ.

    ಸಂಜೆಯಿಂದಲೇ ಪೊಲೀಸರು ಪ್ರಮುಖ ಸ್ಥಳಗಳಲ್ಲಿ ಬೀಡುಬಿಟ್ಟಿದ್ದು, ಸುಖಾಸುಮ್ಮನೆ ರಸ್ತೆಗಿಳಿದವರಿಗೆ ವಾರ್ನಿಂಗ್ ಮಾಡುತ್ತಿದ್ದಾರೆ. ಬ್ರಿಗೇಡ್​ ರಸ್ತೆಯಲ್ಲಿ ಮಾಸ್ಕ್ ಹಾಕದಿದ್ದಕ್ಕೆ ಪೊಲೀಸರು 250 ರೂ. ದಂಡ ವಿಧಿಸಿದ್ದಾರೆ. ಬ್ಯಾರಿಕೇಡ್​ಗಳನ್ನು ಹಾಕಿ ಎಂಜಿ ರಸ್ತೆಯಿಂದ ಬ್ರಿಗೇಡ್ ರಸ್ತೆಗೆ ಎಂಟ್ರಿ ಕ್ಲೋಸ್ ಮಾಡಲಾಗಿದೆ. ಇನ್ನು ಕೆಲವೆಡೆ ಮದ್ಯ ಖರೀದಿಸಲು ಜನ ಮುಗಿಬಿದ್ದಿದ್ದಾರೆ. ಇನ್ನು ಕೆಲವರು ಪಬ್‌ಗಳತ್ತ ಮುಖಮಾಡಿದ್ದು, ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ಮಾಡುತ್ತಿದ್ದಾರೆ. ಕೆಲವರು ಸ್ವಯಂ ಪ್ರೇರಿತವಾಗಿ ಈಗಾಗಲೇ ಕೆಲ ಮಳಿಗೆಗಳನ್ನು ಮುಚ್ಚಿದ್ದಾರೆ.

    ಇದನ್ನೂ ಓದಿ: VIDEO| ಈ ವರ್ಷದ ಅತ್ಯಂತ ಕೆಟ್ಟ ಬೌಲಿಂಗ್​ ಇದಂತೆ: ವೈರಲ್​ ವಿಡಿಯೋ ನೋಡಿದ್ರೆ ನಿಜ ಅಂತಿರಾ!

    ಫೋಟೊಗಳು: ಸುಧೀಂದ್ರ, ಶ್ರೀರಂಗರಾಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts