More

    ರೂಪಾಂತರಿ ಕರೊನಾ ಕುರಿತು ನೂತನ ಸಂಶೋಧನೆಯಲ್ಲಿ ಭಯಾನಕ ಮಾಹಿತಿ ಬಹಿರಂಗ!​

    ನವದೆಹಲಿ: ಯುನೈಟೆಡ್​​ ಕಿಂಗ್​ಡಮ್​ನಲ್ಲಿ ಗೋಚರವಾಗಿರುವ ಹೊಸ ರೂಪಾಂತರ ಕರೊನಾ ವೈರಸ್​ ತೀವ್ರ ಸಾಂಕ್ರಾಮಿಕವಾಗಿರುವಂತೆ ಕಾಣುತ್ತಿದ್ದು, ಇದರಿಂದ ಮುಂದಿನ ವರ್ಷದಲ್ಲಿ ಹೆಚ್ಚಿನ ಜನರು ಆಸ್ಪತ್ರೆ ಸೇರುವಂತೆ ಮತ್ತು ಸಾವುಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಹೊಸ ಸಂಶೋಧನೆಯೊಂದು ಹೇಳಿದೆ.

    ಹೊಸ ಸಂಶೋಧನೆಯ ಪ್ರಕಾರ ಇತರೆ ಸಂತತಿಗಿಂತ ರೂಪಾಂತರಿ ಕರೊನಾ ಶೇ. 56 ರಷ್ಟು ವೇಗವಾಗಿ ಹರಡುತ್ತದೆ ಎಂದು ಲಂಡನ್ ಸ್ಕೂಲ್ ಆಫ್ ಹೈಜೀನ್ ಮತ್ತು ಟ್ರಾಪಿಕಲ್ ಮೆಡಿಸಿನ್‌ನಲ್ಲಿನ ಸಾಂಕ್ರಾಮಿಕ ರೋಗಗಳ ಗಣಿತದ ಮಾದರಿ ಕೇಂದ್ರದ ಅಧ್ಯಯನ ತಿಳಿಸಿದೆ. ಆದರೆ, ರೂಪಾಂತರಿ ಕರೊನಾ ಹೆಚ್ಚು ಅಥವಾ ಕಡಿಮೆ ತೀವ್ರವಾದ ಕಾಯಿಲೆಗೆ ಕಾರಣವಾಗುತ್ತದೆ ಎಂಬುದಕ್ಕೆ ಯಾವುದೇ ಸ್ಪಷ್ಟ ಪುರಾವೆಗಳು ಇಲ್ಲದಿರುವುದು ನೆಮ್ಮದಿಯ ನಿಟ್ಟುಸಿರುವ ಬಿಡುವ ವಿಚಾರವಾಗಿದೆ.

    ಇದನ್ನೂ ಓದಿ: VIDEO| ನಡುರೆಸ್ತೆಯಲ್ಲಿ ಬೈಕ್​ಗೆ ಗುದ್ದಿ ಪರಾರಿಯಾದ ಆಟೋ! ಹಾಗೆ ಮಾಡುವುದಕ್ಕೂ ಒಂದು ಕಾರಣವಿತ್ತು!

    ರೂಪಾಂತರಿ ವೈರಸ್​ ಶೇ. 70 ರಷ್ಟು ವೇಗವಾಗಿ ಹರಡುತ್ತದೆ ಎಂದು ಈ ಮುನ್ನ ಬ್ರಿಟನ್​ ಸರ್ಕಾರ ಹೇಳಿತ್ತು. ಹೊಸ ವೈರಸ್​ ಸುಮಾರು ಎರಡು ಡಜನ್ ರೂಪಾಂತರಗಳನ್ನು ಹೊಂದಿದ್ದು, ಅದು ಕರೊನವೈರಸ್ ತಯಾರಿಸಿದಂತಹ ಪ್ರೋಟೀನ್‌ಗಳ ಮೇಲೆ ಪರಿಣಾಮ ಬೀರಬಹುದು ಎಂದು ಡಿಸೆಂಬರ್​ 19ರಂದು ಯುನೈಟೆಡ್​ ಕಿಂಗ್​​ಡಮ್​ನ ಮುಖ್ಯ ವೈಜ್ಞಾನಿಕ ಸಲಹೆಗಾರ ಪ್ಯಾಟ್ರಿಕ್​ ವಲ್ಲಾನ್ಸ್​ ಹೇಳಿದ್ದಾರೆ.

    ಹೊಸ ರೂಂಪಾಂತರಿಯಿಂದಾಗಿ ಕರೊನಾ ಪರೀಕ್ಷೆ, ಚಿಕಿತ್ಸೆ ಮತ್ತು ಲಸಿಕೆ ಮೇಲೆ ಕಳವಳ ವ್ಯಕ್ತಪಡಿಸುವಂತಾಗಿದೆ. ಆದರೆ, ಹೊಸ ವೈರಸ್​ ಮೊದಲಗಿಂತ ಭಿನ್ನವಾಗಿರುವುದಿಲ್ಲ ಎಂದು ಯೂರೋಪ್​ನ ಆರೋಗ್ಯ ನಿಯಂತ್ರಕವು ಹೇಳಿದೆ. ಈಗಾಗಲೇ ರೂಪಾಂತರಿ ವೈರಸ್​ ಆಸ್ಟ್ರೇಲಿಯಾ, ಡೆನ್ಮಾರ್ಕ್​ ಮತ್ತು ಸಿಂಗಾಪೂರ್​ನಲ್ಲಿ ಪತ್ತೆಯಾಗಿದೆಯಂತೆ. (ಏಜೆನ್ಸೀಸ್​)

    ಇದನ್ನೂ ಓದಿ: ಅಂಬೆಗಾಲಿಡುವಾಗ್ಲೇ ಸಪ್ತಪದಿ ತುಳಿದಿದ್ಲು; ಈಗ ಮದ್ವೆ ಆಗೋ ವಯಸ್ಸಲ್ಲೀಕೆ ವೈವಾಹಿಕ ಬಂಧನದಿಂದ ಮುಕ್ತಮುಕ್ತ..

    ಮಗಳು ಸ್ನಾನ ಮಾಡುವುದನ್ನು 3 ವರ್ಷದಿಂದ ಕದ್ದು ವಿಡಿಯೋ ಮಾಡ್ತಿದ್ದ ತಂದೆ! ಮಗಳ ಕೈಗೆ ಸಿಕ್ಕಿಬಿದ್ದಿದ್ಹೇಗೆ?

    ಕೆಎಫ್​ಸಿ ಚಿಕನ್​ ಆರ್ಡರ್​ ಮಾಡಿದ ಕುಟುಂಬಕ್ಕೆ ತಿನ್ನುವಾಗ ಕಾದಿತ್ತು ಬಿಗ್​ ಶಾಕ್​..!

    ಸೌದಿಯಿಂದ ಬಂದ ಭಾವಿಪತಿಗಾಗಿ ಮದುಮಗಳು ರೆಡಿಯಾಗಿ ಕುಳಿತರೆ ವರ ಹೀಗೆ ಮಾಡೋದಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts